ಕ್ಯಾನ್ಸರ್‌ಗೆ ರೋಗದಿಂದ ಬಳಲುತ್ತಿರುವ ಕಾಲಿವುಡ್ ನಟ ತವಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.  ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿರುವ ವಿಚಾರ ತಿಳಿದು, ನಟ ರಜನಿಕಾಂತ್ ಸಹಾಯ ಮಾಡಲು ಮುಂದಾಗಿದ್ದಾರೆ. 

ಸೂಪರ್‌ಸ್ಟಾರ್‌ ರಜನೀಕಾಂತ್‌ ಕನಸು ಭಗ್ನ? ಕಾಡಿದೆ ತೀವ್ರ ಅನಾರೋಗ್ಯ

ಕೆಲವು ದಿನಗಳ ಹಿಂದೆ ತವಸಿ ಆರ್ಥಿಕ ಸಹಾಯ ಬೇಡಿ, ವಿಡಿಯೋ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಸಹಾಯ ಮಾಡುವ ಮನಸ್ಸು ಮಾಡಿದ್ದಾರೆ. ನಟ ವಿಜಯ್ ಸೇತುಪತಿ ಈಗಾಗಲೇ 10 ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗ ರಜನಿಕಾಂತ್ ಕೂಡ ಕೈ ಜೋಡಿಸಿದ್ದಾರೆ ಎನ್ನಲಾಗಿದೆ.

ನಟರಾದ ರಜನಿಕಾಂತ್ ಹಾಗೂ ಸಿಂಬಾ ಕೂಡ ಒಟ್ಟಾಗಿ ಆರ್ಥಿಕ ಸಹಾಯಕ್ಕೆ ನಿಂತಿದ್ದಾರೆ. ಮೊತ್ತ ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲವಾದರೂ ಕೆಲವು ಮೂಲಗಳು ಈ ಮಾಹಿತಿಯನ್ನು  ಸ್ಪಷ್ಟಪಡಿಸಿದೆ. ಇನ್ನು ಆಸ್ಪತ್ರೆಯ ಕೆಲವು ಖರ್ಚುಗಳನ್ನು ನೋಡಿಕೊಳ್ಳಲು ನಟ ಸೂರ್ಯ ಟ್ರಸ್ಟ್‌  ಮುಂದಾಗಿದೆ.

ರಜನಿಕಾಂತ್‌ರ 4 ಸಿನಿಮಾ ರಿಜೆಕ್ಟ್‌ ಮಾಡಿದ ಐಶ್ವರ್ಯಾ ರೈ! 

ಸುಮಾರು ಮೂವತ್ತು ವರ್ಷಗಳಿಂದ ಕಾಲಿವುಡ್ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ತವಸಿ ಸಹಾಯಕ್ಕೆ ನಟ-ನಟಿಯರು ಒಟ್ಟಾಗಿದ್ದಾರೆ ಎನ್ನಲಾಗಿದೆ. ತವಸಿ ಬೇಗ ಗುಣಮುಖರಾಗಲೆಂದು ನಾವೆಲ್ಲರೂ ಒಂದಾಗಿ ಪಾರ್ಥಿಸೋಣ.