ರಾಜ್ಯಪಾಲರ ಹುದ್ದೆ ಸುದ್ದಿ ಬೆನ್ನಲ್ಲೇ ಮಲೇಷ್ಯಾ ಪ್ರಧಾನಿ ಭೇಟಿಯಾದ ರಜನಿಕಾಂತ್: ಏನಿದರ ಮರ್ಮ?
ರಜನಿಕಾಂತ್ ಅವರು ರಾಜ್ಯಪಾಲರ ಹುದ್ದೆ ಏರಲಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಮಲೇಷ್ಯಾ ಪ್ರಧಾನಿಯನ್ನೂ ಭೇಟಿಯಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೈಲರ್ ಚಿತ್ರಕ್ಕೆ ಯಾವ ರೇಂಜ್ ನಲ್ಲಿ ರೆಸ್ಪಾನ್ಸ್ ಸಿಕ್ಕಿದೆ ಎಂಬುದು ಗೊತ್ತೇ ಇದೆ. ವಿಶ್ವಾದ್ಯಂತ ರೂ.600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಈ ಚಿತ್ರ. ಒಟಿಟಿಯಲ್ಲಿಯೂ ಇದು ಬಿಡುಗಡೆಯಾಗಿದ್ದು, ಅಲ್ಲಿಯೂ ಸಕತ್ ರೆಸ್ಪಾನ್ಸ್ ಸಿಗುತ್ತಿದೆ. ಇದರ ಬೆನ್ನಲ್ಲೇ ಇದೇ ವೇಳೆ ರಜನಿಕಾಂತ್ ಅವರು ರಾಜ್ಯಪಾಲರಾಗಲಿದ್ದಾರೆ ಎಂದು ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಭಾರೀ ಪ್ರಚಾರ ನಡೆಯುತ್ತಿದೆ. ಈ ಅಭಿಯಾನಕ್ಕೆ ರಜನಿಕಾಂತ್ ಸಹೋದರ ಸತ್ಯನಾರಾಯಣ (Satyanarayana) ಪ್ರತಿಕ್ರಿಯಿಸಿದ್ದಾರೆ. ರಾಜ್ಯಪಾಲರ ಹುದ್ದೆ ದೇವರ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿದ ಫ್ಯಾನ್ಸ್ ಖಂಡಿತವಾಗಿಯೂ ರಾಜ್ಯಪಾಲರಾಗಿ ರಜನಿಕಾಂತ್ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದೇ ಹೇಳುತ್ತಿದ್ದಾರೆ. ಈಚೆಗೆ, ಮಧುರೈನಲ್ಲಿ ಮೀನಾಕ್ಷಿ ದೇವಿಯ ದರ್ಶನ ಪಡೆದ ನಂತರ ಸತ್ಯನಾರಾಯಣ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರೊಂದಿಗಿನ ರಜನಿ ಭೇಟಿಗೆ ಯಾವುದೇ ರಾಜಕೀಯ ಮಹತ್ವವಿಲ್ಲ ಎಂದು ಅವರು ಹೇಳಿದ್ದರು. ರಜನಿಕಾಂತ್ ಅವರಿಗೆ ರಾಜ್ಯಪಾಲರ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಎಲ್ಲವೂ ದೇವರ ಕೈಯಲ್ಲಿದೆ ಎಂದು ಹೇಳಿದ್ದರು. ರಾಜ್ಯಪಾಲರ ಹುದ್ದೆ ಸಿಗುವ ಭರವಸೆ ನನಗಿಲ್ಲ, ಬಂದರೆ ಖುಷಿಯಾಗುತ್ತೆ ಎಂದರು. ರಾಜ್ಯಪಾಲ ಹುದ್ದೆ ನೀಡಿದರೆ ರಜನಿ ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂದೂ ಹೇಳಿದ್ದರು.
ಇತ್ತೀಚೆಗೆ ರಜನಿಕಾಂತ್ ಉತ್ತರ ಭಾರತ ಪ್ರವಾಸ ಮಾಡಿದ್ದರು. ಆಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದಾಗ ಈ ರಾಜ್ಯಪಾಲರ ವಿಚಾರ ಮುನ್ನೆಲೆಗೆ ಬಂದಿದೆ. ಇದರ ಬೆನ್ನಲ್ಲೇ ಮತ್ತೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ರಜನಿಕಾಂತ್ ಭೇಟಿಯಾಗಿದ್ದು, ಇದರ ಮರ್ಮ ಏನಿರಬಹುದು ಎಂದು ಭಾರಿ ಚರ್ಚೆ ಶುರುವಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಗಿದೆ ಎಂದು ಮಲೇಷ್ಯಾ ಪ್ರಧಾನಿ ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಜೈಲರ್ ಬಿಡುಗಡೆಯ ದಿನ ರಜನಿಕಾಂತ್ ಹಿಮಾಲಯ ಪ್ರವಾಸದಲ್ಲಿದ್ದರು. ಚಿತ್ರದ ಬಿಡುಗಡೆಯ ದಿನವೇ ಹಿಮಾಲಯಕ್ಕೆ ಹೋಗಿ ಅಲ್ಲಿ ಸಾಧುಗಳ ದರ್ಶನ ಪಡೆಯುತ್ತಿದ್ದರು. ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಜೊತೆಗೂಡಿ ಚಿತ್ರ ವೀಕ್ಷಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಯೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರಿಂದ ಭಾರಿ ಸುದ್ದಿಗೂ ಗ್ರಾಸರಾಗಿದ್ದರು ರಜನೀಕಾಂತ್. ಸಾಧುಗಳ ಕಾಲಿಗೆ ಬೀಳುವಾಗ ಅವರು ತಮಗಿಂತ ದೊಡ್ಡವರೋ, ಚಿಕ್ಕವರೋ ನೋಡುವುದಿಲ್ಲ, ಇಷ್ಟು ತಿಳಿವಳಿಕೆ ಎಲ್ಲರಿಗೂ ಇದ್ದರೆ ಒಳ್ಳೆಯದು ಎಂದು ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ತಲೈವಾ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಈಗ ಮಲೇಷ್ಯಾ ಪ್ರಧಾನಿ ಭೇಟಿ ಕುತೂಹಲ ಕೆರಳಿಸಿದೆ.
ರಾಜ್ಯಪಾಲರ ಹುದ್ದೆ ಅಲಂಕರಿಸಲಿದ್ದಾರೆಯೇ ನಟ ರಜನೀಕಾಂತ್? ಸಹೋದರ ಕೊಟ್ಟರು ಈ ಸುಳಿವು
ಈ ಬಗ್ಗೆ ಬರೆದುಕೊಂಡಿರೋ ಮಲೇಷ್ಯಾ ಪ್ರಧಾನಿಯವರು, ಈ ಸಂದರ್ಭದಲ್ಲಿ ರಜನಿಕಾಂತ್ ಅವರು ಜನರ ಕಷ್ಟಕಾಲದಲ್ಲಿ ನನ್ನ ಸೇವೆಯನ್ನು ಗೌರವಿಸಿದರು. ಅವರ ಮುಂಬರುವ ಚಿತ್ರಗಳಲ್ಲಿ ಹೆಚ್ಚಿನ ಸಾಮಾಜಿಕ ಅಂಶಗಳನ್ನು ಹೊಂದಿರಬೇಕೆಂದು ನಾನು ಹೇಳಿದೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಪ್ರಧಾನಿ ಹೇಳಿದೆ. ಇದರ ಬೆನ್ನಲ್ಲೇ ಭಾರತದ ರಾಜಕೀಯದ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ತಮಿಳಿಗರೇ ಹೆಚ್ಚಿರುವ ಮಲೇಷ್ಯಾದಲ್ಲಿ ತಮಿಳುನಾಡಿನ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ. ರಜನಿಕಾಂತ್ ಅವರು ಮಲೇಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿಯೂ ಹೋಗಿದ್ದರು. ಆಗಿನ ಪ್ರಧಾನಿ ನಜೀಬ್ ರಜಾಕ್ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ರಜನಿಕಾಂತ್ ಅವರು ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಗೆ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಒಂದೂವರೆ ಕೋಟಿ ರೂ. ಹಂಚೋಕೆ ಆರ್ಡರ್ ಮಾಡಿದ್ದ ರಜನಿಕಾಂತ್... ಎಲ್ಲರ ಕಣ್ಣಲ್ಲೂ ಕಣ್ಣೀರ ಧಾರೆ...