Asianet Suvarna News Asianet Suvarna News

ತೆರೆಯ ಮೇಲೆ ಇಬ್ಬರು ಸೂಪರ್‌ಸ್ಟಾರ್ಸ್‌ ದರ್ಬಾರ್‌: ಫೋಟೋ ಶೇರ್‌ ಮಾಡಿದ ನಟ ರಜನಿಕಾಂತ್‌

ತೆರೆಯ ಮೇಲೆ ಇಬ್ಬರು ಸೂಪರ್‌ಸ್ಟಾರ್ಸ್‌ ದರ್ಬಾರ್‌: ಫೋಟೋ ಶೇರ್‌ ಮಾಡಿದ ನಟ ರಜನಿಕಾಂತ್‌- ಯಾರೀ ನಟರು? 
 

Rajinikanth drops epic pic with Big B: Working with my mentor after 33 years suc
Author
First Published Oct 25, 2023, 5:54 PM IST

'ಸೂಪರ್ ಸ್ಟಾರ್' ರಜನಿಕಾಂತ್ ಅವರು ಸದ್ಯ ಜೈಲರ್‌ ಚಿತ್ರದ ಭರ್ಜರಿ ಯಶಸ್ಸಿನ ಗುಂಗಿನಲ್ಲಿದ್ದಾರೆ. ಈ ಚಿತ್ರ ಬ್ಲಾಕ್‌ಬಸ್ಟರ್‌ ಎಂದು ಸಾಬೀತಾಗಿದೆ. ಇದರ ಜೊತೆಗೆನೇ ನಟನ ಕೈಯಲ್ಲಿ ಕೆಲವು ಸಿನಿಮಾಗಳು ಇವೆ. ಸದ್ಯ ಅವರ ಮುಂದಿನ 170ನೇ ಸಿನಿಮಾದ ಕೆಲಸಗಳು ಆರಂಭವಾಗಿವೆ. ಅದರಲ್ಲಿ ರಜನಿಕಾಂತ್ ಅವರು ನಟ ಅಮಿತಾಭ್ ಬಚ್ಚನ್ ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರು ‘ತಲೈವರ್ 170’ ಸೆಟ್‌ನಿಂದ ಅಮಿತಾಭ್‌ ಬಚ್ಚನ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಟರು ಜೊತೆಯಾಗಿರುವ ಚಿತ್ರ ಇತ್ತೀಚೆಗೆ ವೈರಲ್ ಆಗಿದೆ, 'ಟಿ ಜೆ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ 'ತಲೈವರ್ 170' ಚಿತ್ರದಲ್ಲಿ 33 ವರ್ಷಗಳ ನಂತರ, ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ

'ನನ್ನ ಹೃದಯವು ಸಂತೋಷದಿಂದ ಮಿಡಿಯುತ್ತಿದೆ' ಎಂದು ಅವರು ಹೇಳಿದ್ದಾರೆ. ಈ ವೈರಲ್‌ ಫೋಟೋ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ. ಅಷ್ಟಕ್ಕೂ ರಜನೀಕಾಂತ್‌ ಮತ್ತು ಅಮಿತಾಭ್‌ ಬಚ್ಚನ್‌ ಅವರು ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ.  ಈ ಜೋಡಿ  'ಅಂಧಾ ಕಾನೂನ್', 'ಗಿರಫ್ತಾರ್' ಮತ್ತು 'ಹಮ್'ನಂತ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿದೆ.  'ಅಂಧಾ ಕಾನೂನ್'ನಲ್ಲಿ ರಜನಿಕಾಂತ್ ಹೀರೋ ಆಗಿದ್ದರೆ, ಅಮಿತಾಭ್ ಅತಿಥಿ ಪಾತ್ರ ಮಾಡಿದ್ದರು. 'ಹಮ್' ಚಿತ್ರದಲ್ಲಿ ಇಬ್ಬರು ಜೊತೆಗೆ ಕಾಣಿಸಿಕೊಂಡಿದ್ದರು.  ಅಮಿತಾಭ್ ಮತ್ತು  ಕಮಲ್ ಹಾಸನ್ ನಟಿಸಿದ್ದ 'ಗಿರಫ್ತಾರ್' ಸಿನಿಮಾದಲ್ಲಿ ರಜನಿಕಾಂತ್ ಅತಿಥಿ ಪಾತ್ರ ಮಾಡಿದ್ದರು.  ಇದೀಗ 33 ವರ್ಷಗಳ ಬಳಿಕ ಮತ್ತೊಮ್ಮೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಹಣ ಹಾಕುತ್ತಿದೆ. ಬಹಳ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭವಾಗಿದೆ.

ನನ್ನ ಕಾಲೇನಾದ್ರೂ ಗಿಡ್ಡ ಇದ್ದಿದ್ರೆ ಇಂದು ಅಲ್ಲಿ ಇರ್ತಿದ್ದೆ; ನನಸಾಗದ ಕನಸಿನ ಮಾತು ಹಂಚಿಕೊಂಡ ಅಮಿತಾಭ್‌

ಈ ಕುರಿತು ರಜನೀಕಾಂತ್‌ ಬರೆದುಕೊಂಡಿದ್ದಾರೆ.  33 ವರ್ಷದ ನಂತರ ನಾನು ನನ್ನ ಮಾರ್ಗದರ್ಶಕ, ನನ್ನ ಗುರು ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.  ಈ ಫೋಟೋದಲ್ಲಿ ಅಮಿತಾಭ್‌ ಬಚ್ಚನ್ ಕೂಲ್​ ಸ್ವೆಟ್‌ಶರ್ಟ್ ಧರಿಸಿ ಕಾಣಿಸಿಕೊಂಡಿದ್ದರೆ, ರಜನಿಕಾಂತ್ ಮಾಮೂಲನಂತೆ ಬಿಳಿ ಬಣ್ಣದ ಷರ್ಟ್​ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಹಿರಿಯ ನಟರು ಒಟ್ಟಿಗೆ ಇರುವ ಚಿತ್ರವು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. 

ರಜನಿಕಾಂತ್ ನಟನೆಯ ಈ 170ನೇ ಸಿನಿಮಾವನ್ನು 'ಜೈ ಭೀಮ್' ಖ್ಯಾತಿಯ ಟಿ ಜೆ ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 2024ರ ಜೂನ್‌ನಲ್ಲಿ ಇದನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕೆ ಇದೆ. ರಜನಿಕಾಂತ್, ಅಮಿತಾಭ್ ಬಚ್ಚನ್ ಜೊತೆಗೆ, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಸುಂದರ್‌ ಮುಂತಾದವರು ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಇದರ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

Follow Us:
Download App:
  • android
  • ios