ಐಫೋನ್ ಬಳಸಿ ಶೂಟಿಂಗ್ ಮಾಡಿರುವ ಸಿಂಗಲ್ ಟೇಕ್, ಸಿಂಗಲ್ ಶಾಟ್ ಸಿನಿಮಾ ‘ಸಹಿಷ್ಣು’. ಇಂಡಿಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಲ್‌ಡ್ ರೆಕಾರ್ಡ್‌ನಲ್ಲಿ ದಾಖಲಾಗಿರುವ ಈ ಚಿತ್ರ ಸೆ.3ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಿರ್ದೇಶನ, ನಿರ್ಮಾಣ ಹಾಗೂ ನಟನೆಯ ಜವಾಬ್ದಾರಿ ಹೊತ್ತುಕೊಂಡಿರುವುದು ಡಾ ಸಂಪತ್.

ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾ ಮೆಚ್ಚಿದ್ದಾರೆ ಎಂದಿರುವ ಡಾ. ಸಂಪತ್, ‘ಚಿತ್ರವನ್ನು ಸಾಕಷ್ಟು ಸಾಹಸ ಮಾಡಿ ಸೂಪರ್ ರಜನಿಕಾಂತ್ ಅವರಿಗೆ ತೋರಿಸಿದೆ. ಅವರು ಯಾರಿಗೂ ತಿಳಿಯದೆ ವಿಶ್ರಾಂತಿ ಪಡೆಯುವ ಹಿಮಾಲಯದ ಸ್ಥಳವನ್ನು ಮಾಧ್ಯಮದ ಸ್ನೇಹಿತರ ಮೂಲಕ ತಿಳಿದುಕೊಂಡು ಅಲ್ಲಿಗೆ ಹೋಗಿ ಭೇಟಿ ಮಾಡಿದೆ. ಕನ್ನಡದವರು ಅಂತ ಗೊತ್ತಾಗಿ ಚಿತ್ರದ ದೃಶ್ಯಗಳನ್ನು ನೋಡಿ ಮೆಚ್ಚಿದರು. ರಜನಿಕಾಂತ್ ಅವರಿಗೆ ನನ್ನ ಸಿನಿಮಾ ಇಷ್ಟ ಆಗಿರುವುದು ನನ್ನ ಉತ್ಸಾಹಕ್ಕೆ ಕಾರಣವಾಗಿದೆ’ ಎಂದರು.

‘ಇದು ನನ್ನ ಮೊದಲ ಸಿನಿಮಾ. ಎರಡು ಗಂಟೆಯಲ್ಲಿ ಸಿನಿಮಾ ಮುಗಿಸಿದರೂ ಕಮರ್ಷಿಯಲ್ ಚಿತ್ರದಂತೆಯೇ ಮೂಡಿ ಬಂದಿದೆ. ಐಫೋನ್‌ನಲ್ಲಿ ಚಿತ್ರೀಕರಣ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ವಿಶ್ವದ ಮೊದಲ ಸಿನಿಮಾ ಇದು’ ಎನ್ನುತ್ತಾರೆ ಸಂಪತ್.

ಗರ್ಲ್‌ಫ್ರೆಂಡ್‌ಗಾಗಿ iPhone ಕೇಳಿದ ಪ್ರೇಮಿ..! ಸೋನು ಆನ್ಸರ್ ಹೀಗಿತ್ತು

ಡಾ ಸಂಪತ್ ‘ಸಿನಿಮಾ ವೈಭವ’ ಹೆಸರಿನಲ್ಲಿ ವಿಶ್ವ ಚಿತ್ರರಂಗದ ಚರಿತ್ರೆಯಲ್ಲಿ ದಾಖಲಿಸಿದ್ದು, ಅದು ಸದ್ಯದಲ್ಲೇ ಬಿಡುಗಡೆ ಆಗಲಿದೆ.