Asianet Suvarna News Asianet Suvarna News

ಒಟಿಟಿಗಾಗಿ ಹೋಟೆಲಲ್ಲಿ ಬ್ಲೂಫಿಲಂ ತೆಗೆಯುತ್ತಿದ್ದ ರಾಜ್‌ಕುಂದ್ರಾ: ಸೈಬರ್ ಪೊಲೀಸರಿಂದ ಚಾರ್ಜ್‌ಶೀಟ್

ಕರ್ನಾಟಕ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಪತಿ ರಾಜ್‌ ಕುಂದ್ರಾ ಅವರು ಮುಂಬೈನ ಪಂಚತಾರಾ ಹೋಟೆಲ್‌ಗಳಲ್ಲಿ ನಟಿಯರನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳನ್ನು ತಯಾರಿಸುತ್ತಿದ್ದರು ಎಂದು ಮಹಾರಾಷ್ಟ್ರದ ಸೈಬರ್‌ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

Raj kundra was shooting blue film in a hotel for OTT: Charge sheet by cyber police akb
Author
First Published Nov 21, 2022, 10:05 AM IST

ಮುಂಬೈ: ಕರ್ನಾಟಕ ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಪತಿ ರಾಜ್‌ ಕುಂದ್ರಾ ಅವರು ಮುಂಬೈನ ಪಂಚತಾರಾ ಹೋಟೆಲ್‌ಗಳಲ್ಲಿ ನಟಿಯರನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳನ್ನು ತಯಾರಿಸುತ್ತಿದ್ದರು ಎಂದು ಮಹಾರಾಷ್ಟ್ರದ ಸೈಬರ್‌ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನಟಿ ರೂಪದರ್ಶಿಯರಾದ ಶೆರ್ಲಿನ್‌ ಚೋಪ್ರಾ (Sherlyn Chopra), ಪೂನಂ ಪಾಂಡೆ (Poonam Pandey), ಚಿತ್ರ ನಿರ್ಮಾಪಕ ಮೀತಾ ಜುಂಜುನ್‌ವಾಲಾ (Meeta Jhunjhunwala) ಹಾಗೂ ಕ್ಯಾಮೆರಾಮ್ಯಾನ್‌ ರಾಜು ದುಬೆ (cameraman Raju Dubey) ಎಂಬುವರು ಕುಂದ್ರಾ ಜತೆ ಸೇರಿಕೊಂಡು ಪಂಚತಾರಾ ಹೋಟೆಲ್‌ಗಳಲ್ಲಿ (five-star hotels) ಅಶ್ಲೀಲ ಸಿನಿಮಾಗಳನ್ನು ಚಿತ್ರಿಸುತ್ತಿದ್ದರು. ಇದನ್ನು ಹಣಕಾಸು ಲಾಭಕ್ಕೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು (OTT platforms) ಬಿಡುಗಡೆ ಮಾಡುತ್ತಿದ್ದವು ಎಂದು ಕಳೆದ ವಾರ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ (chargesheet) ಉಲ್ಲೇಖಿಸಲಾಗಿದೆ.

‘ಪ್ರೇಮ್‌ ಪಗ್ಲಾನಿ’ (Prem Paglani) ಎಂಬ ಅಶ್ಲೀಲ ವೆಬ್‌ಸೀರಿಸ್‌ ತಯಾರಿಸಿ, ಒಟಿಟಿಗೆ ಅಪ್‌ಲೋಡ್‌ ಮಾಡಲಾಗಿತ್ತು. ಪೂನಂ ಪಾಂಡೆ ‘ದ ಪೂನಂ ಪಾಂಡೆ’ ಎಂಬ ಸ್ವಂತ ಆ್ಯಪ್‌ ಹೊಂದಿದ್ದರು. ತನ್ನ ವಿಡಿಯೋ ಸೆರೆ ಹಿಡಿದು, ಕುಂದ್ರಾ ಕಂಪನಿ ಸಹಾಯದಿಂದ ಅದನ್ನು ಬಿಡುಗಡೆ ಮಾಡುತ್ತಿದ್ದರು ಎಂದು 450 ಪುಟಗಳ ಚಾರ್ಜ್‌ಶೀಟ್‌  ಹೇಳುತ್ತದೆ. 2021ರ ಫೆಬ್ರವರಿಯಲ್ಲಿ ಮಧ್‌ ದ್ವೀಪದ (Madh Island) ಬಂಗಲೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಾಗಿ ವ್ಯಾಪಕ ಚರ್ಚೆಯಾಗಿತ್ತು. ಕುಂದ್ರಾ 100ಕ್ಕೂ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ತಯಾರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಬಳಿಕ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. 2 ತಿಂಗಳು ಜೈಲುವಾಸ ಬಳಿಕ 2021ರ ಸೆಪ್ಟೆಂಬರ್‌ನಲ್ಲಿ ಕುಂದ್ರಾ ಬಿಡುಗಡೆಯಾಗಿದ್ದರು.

Raj Kundra ಅವರ ಫುಲ್‌ ಮಾಸ್ಕ್‌ ಆವತಾರ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್‌

ಬ್ಲೂಫಿಲಂ ಕೂಪಕ್ಕೆ ತಳ್ಳಿದ್ದು ಕುಂದ್ರಾ: ಪೂನಂ, ಶೆರ್ಲಿನ್‌ ಆರೋಪ!

ಬೋಲ್ಡ್‌ ಆವತಾರದಲ್ಲಿ ರಸ್ತೆಗಿಳಿದ ಪೂನಂ ಪಾಂಡೆ ನೋಡಿ ಕಿಡಿಕಾರುತ್ತಿರುವ ಜನ!

Follow Us:
Download App:
  • android
  • ios