ನೀಲಿ ಚಿತ್ರದ ಮಧ್ಯೆ ಶಿಲ್ಪಾ ಶೆಟ್ಟಿಯನ್ನು ಎಳೆದು ತರಬೇಡಿ ಪ್ಲೀಸ್‌: ಉದ್ಯಮಿ ರಾಜ್‌ ಕುಂದ್ರಾ ಕಣ್ಣೀರು!

ನೀಲಿ ಚಿತ್ರದ ಮಧ್ಯೆ ಶಿಲ್ಪಾ ಶೆಟ್ಟಿಯನ್ನು ಎಳೆದು ತರಬೇಡಿ ಪ್ಲೀಸ್‌ ಎಂದು ಪತಿ, ಉದ್ಯಮಿ ರಾಜ್‌ ಕುಂದ್ರಾ ಕಣ್ಣೀರು ಹಾಕುತ್ತಿದ್ದಾರೆ. ಏನಿದು ವಿಷಯ? 
 

Raj Kundra says unacceptable to drag  Shilpa Shetty into unrelated matters  after ED raid suc

ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಿನ್ನೆ ದಾಳಿ ಮಾಡಿದೆ.  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದೆ. ಇದೀಗ ಈ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದಕ್ಕೆ ಕಾರಣ ರಾಜ್‌ ಕುಂದ್ರಾ ಅವರು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಎನ್ನುವ ಕಾರಣಕ್ಕೆ. ಈ ಹಿಂದೆ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರು ಕೂಡ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಈಗಲೂ ಶಿಲ್ಪಾಗೂ ಇದಕ್ಕೂ ಲಿಂಕ್‌ ಇದೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ರಾಜ್‌ ಕುಂದ್ರಾ ಅವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಇದಕ್ಕೂ, ಶಿಲ್ಪಾಗೂ ಲಿಂಕ್‌ ಮಾಡಬೇಡಿ. ಇದರಲ್ಲಿ ಆಕೆಯ ಪಾತ್ರ ಏನೂ ಇಲ್ಲ. ಎಲ್ಲವನ್ನೂ ನ್ಯಾಯಾಲಯದ ನಿರ್ಧರಿಸುತ್ತದೆ. ಇದಾಗಲೇ ಸೂಕ್ತ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ ಎನ್ನುವುದು ಸಾಬೀತಾಗುತ್ತದೆ. ದಯವಿಟ್ಟು ಶಿಲ್ಪಾ ಶೆಟ್ಟಿಯ ಮಾನ ಹರಾಜು ಹಾಕಬೇಡಿ ಎಂದು ರಾಜ ಕುಂದ್ರ ಕಣ್ಣೀರು ಹಾಕಿದ್ದಾರೆ. 

ಅಷ್ಟಕ್ಕೂ, 2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ.  ಇವರ ಪತಿ,  ರಾಜ್​ ಕುಂದ್ರಾ ನೀಲಿ ಚಿತ್ರ ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಲಕ್ಷ್ಮಿನಿವಾಸದ ಚಿನ್ನುಮರಿಯ ರಿಯಲ್​ ಗಂಡನನ್ನು ಮದ್ವೆಗೆ ರೆಡಿ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್​


ಆದರೆ ಕೊನೆಗೆ ರಾಜ್ ಅಶ್ಲೀಲ ದಂಧೆಯಲ್ಲಿ ತೊಡಗಿರುವ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್​) ಕೇಸ್​ನಲ್ಲಿ ಸಿಲುಕಿರುವ ರಾಜ್​ ಕುಂದ್ರಾ ಹಾಗೂ ಅಶ್ಲೀಲ ದಂಧೆಗೆ  ಯಾವುದೇ ನೇರ ಸಂಪರ್ಕ ಇರುವುದು ಇದುವರೆಗೆ ತಿಳಿದುಬಂದಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು. ಬ್ರಿಟನ್​ ಮೂಲದ ಕೆನ್ರಿನ್ ಕಂಪನಿಯ ವಿವಿಧ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಹಣದ ಜಾಡುಗಳ ಮೇಲೆ ಇಡಿ ಗಮನಹರಿಸುತ್ತಿದ್ದು, ಸದ್ಯ ಯಾವುದೇ ನೇರ ವಹಿವಾಟು ನಡೆದಿರುವುದು ತಿಳಿದುಬಂದಿಲ್ಲ ಎಂದಿದ್ದರು. 

ಈ ಹಿನ್ನೆಲೆಯಲ್ಲಿ, ಪೋರ್ನ್​ ವಿಡಿಯೋ ಕೇಸ್​ನಲ್ಲಿ ರಾಜ್​ ಕುಂದ್ರಾ ಅವರು ನೇರವಾಗಿ ಪಾಲ್ಗೊಂಡಿಲ್ಲ ಎನ್ನುವುದು ಸದ್ಯದ ಮಟ್ಟಿಗೆ ತಿಳಿದುಬಂದಿದ್ದು, ಇದರ ತನಿಖೆ ಮುಂದುವರೆಸಿದ್ದರು.  ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ ಕುಂದ್ರಾ ಅವರ ಮುಂಬೈನ ಮನೆ ಮತ್ತು ಕಚೇರಿ ಮೇಲೆ  ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.  
ಬಟ್ಟೆ ಬಿಚ್ಚುವ ಮಾತನಾಡಿ ಪೇಚಿಗೆ ಸಿಲುಕಿದ ಸನಾ ಖಾನ್‌! ಜಾಲತಾಣದಲ್ಲಿ ನಟಿ ಇನ್ನಿಲ್ಲದ ಟ್ರೋಲ್‌...

Latest Videos
Follow Us:
Download App:
  • android
  • ios