ಬಟ್ಟೆ ಬಿಚ್ಚುವ ಮಾತನಾಡಿ ಪೇಚಿಗೆ ಸಿಲುಕಿದ ಸನಾ ಖಾನ್‌! ಜಾಲತಾಣದಲ್ಲಿ ನಟಿ ಇನ್ನಿಲ್ಲದ ಟ್ರೋಲ್‌...

ಹಿಂದೊಮ್ಮೆ ಬಿಕಿನಿಯಿಂದಲೇ ಫೇಮಸ್‌ ಆಗಿದ್ದ ನಟಿ ಸನಾ ಖಾನ್‌ ಈಗ ಸಂದರ್ಶನದಲ್ಲಿ ಇಂದಿನ ನಟಿಯರ ಬಗ್ಗೆ ಮಾತನಾಡಿ ಇನ್ನಿಲ್ಲದಂತೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ನಟಿ ಹೇಳಿದ್ದೇನು? 
 

Sana Khan trolled heavily as she talking about todays actresses attire suc

ಸನಾ ಖಾನ್‌, ಈ ಹೆಸರನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ಬಿಕಿನಿ ಡ್ರೆಸ್‌ನಲ್ಲಿರೋ ನಟಿ ಕಾಣಿಸ್ತಾರೆ. ಕಿರುತೆರೆ ನಟಿ ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾದಲ್ಲಿ ನಟಿಸಿರುವ ನಟಿ, ಈಗ ಮೈಪೂರ್ತಿ ಮುಚ್ಚಿಕೊಂಡು ಸಾರ್ವಜನಿಕವಾಗಿ ಹಿಜಾಬ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಒಮ್ಮೆ ಹಾಟ್‌ ನಟಿ ಎಂದೇ ಖ್ಯಾತಿ ಗಳಿಸಿದ್ದವರು. ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ನಾಲ್ಕು ವರ್ಷಗಳಾಗಿವೆ. ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿದ್ದ ಬಾಲಿವುಡ್​ ನಟಿ ಸನಾ ಖಾನ್​  2020ರಲ್ಲಿ ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ಕಳೆದ ವರ್ಷ ಮೊದಲ ಮಗುವಿಗೆ ಜನ್ಮ ನೀಡಿದ್ದ ಸನಾ, ಈಗ ಎರಡನೆಯ ಬಾರಿ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಅವರು ಈಚೆಗೆ, ಪೋಸ್ಟ್‌ ಮಾಡಿ ವಿಷಯ ತಿಳಿಸಿದ್ದರು. ಸರ್ವಶಕ್ತನಾದ ಅಲ್ಲಾಹನ ಆಶೀರ್ವಾದದಿಂದ, ನಮ್ಮ ಮೂವರ ಕುಟುಂಬವು ಸಂತೋಷದಿಂದ ನಾಲ್ಕಕ್ಕೆ ಬೆಳೆಯುತ್ತಿದೆ. ಆಶೀರ್ವಾದವು ದಾರಿಯಲ್ಲಿದೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕರಾಗಿದ್ದಾನೆ. ಪ್ರೀತಿಯ ಅಲ್ಲಾ, ನಮ್ಮ ಹೊಸ ಆಶೀರ್ವಾದವನ್ನು ಸ್ವಾಗತಿಸಲು ಮತ್ತು ಪಾಲಿಸಲು ನಾವು ಕಾಯಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದರು. 

ಇದೀಗ ಸನಾ ಖಾನ್‌, ಈಗಿನ ನಟಿಯರಿಗೆ ಬುದ್ಧಿ ಹೇಳಲು ಹೋಗಿ ಸಕತ್‌ ಟ್ರೋಲ್‌ಗೆ ಒಳಗಾಗಿದ್ದಾರೆ. ಅರ್ಧಂಬರ್ಧ ಡ್ರೆಸ್‌ ಹಾಕುವುದನ್ನೇ ಈಗಿನ ನಟಿಯರು ಮಹಿಳಾ ಸಬಲೀಕರಣ ಎಂದುಕೊಂಡಿದ್ದಾರೆ. ನಗ್ನರಾಗುವುದೇ ಮಹಿಳಾ ಶಕ್ತಿ ಎಂದುಕೊಂಡಿರುವುದು ಸ್ವಲ್ಪವೂ ಸರಿಯಲ್ಲ. ಇದನ್ನು ನಾನು ಖಂಡಿಸುತ್ತೇನೆ. ಟಾಪ್‌ ಟೆನ್‌ ಹಾಟೆಸ್ಟ್‌ ನಟಿ ಎನ್ನಿಸಿಕೊಳ್ಳಲು ಛೇ ಇವರೆಲ್ಲಾ ಯಾವ ರೀತಿ ಬಟ್ಟೆ ಧರಿಸುತ್ತಾರೆ. ಅವರ ಚಿತ್ರಗಳನ್ನು ಒಮ್ಮೆ ನೋಡಿ, ಅವರಿಗೂ ಗೊತ್ತಿರಲಿಲ್ಲ, ಇಂಥದ್ದನ್ನೆಲ್ಲಾ ತಾವು ಯಾಕೆ ಮಾಡುತ್ತಿದ್ದೇವೆ ಎನ್ನುವುದು. ಇವೆಲ್ಲಾ ಬೇಕಾ ಎಂದು ಪ್ರಶ್ನಿಸಿದ್ದಾರೆ. ನಟಿ ರುಬಿನಾ ಅವರ ಚಾಟ್‌ ಷೋನಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ಮಹಿಳೆರು ತಾವು ತುಂಬಾ ಸ್ಟ್ರಾಂಗ್‌ ಅಂತೆಲ್ಲಾ ಹೇಳುತ್ತಾರೆ, ಬಟ್ಟೆಯನ್ನು ಬಿಚ್ಚುವುದರಲ್ಲಿ ಮಹಿಳಾ ಸಬಲೀಕರಣ ಇದೆಯಾ ಎಂದು ಪ್ರಶ್ನಿಸಿದ್ದಾರೆ. 

ಇವ್ರ ಮಾತನ್ನು ಸರಿಯಾಗಿ ಕೇಳಿಸ್ಕೊಳಿ... ಈಕೆ ಹಿಜಾಬ್‌ ಧರಿಸ್ತಿರೋದಕ್ಕೆ ನಾನ್‌ ಕಾರಣ ಅಲ್ಲ ಎಂದ ಸನಾ ಪತಿ

 ಇನ್ನು ಟ್ರೋಲಿಗರು ಕೇಳಬೇಕೆ? ನೀವು ಹಿಂದೆ ಹೇಗಿದ್ರಿ ಎನ್ನುವುದನ್ನು ಮರೆತುಬಿಟ್ರಾ ತಾಯಿ ಎಂದುಪ್ರಶ್ನಿಸುತ್ತಿದ್ದಾರೆ.  ಬಿಕಿನಿಯಿಂದಲೇ ಫೇಮಸ್‌ ಆಗಿದ್ದ ನಟಿ, ಹಿಜಾಬ್‌ ಧರಿಸಿ ಫುಲ್‌ ಕವರ್‍‌ ಮಾಡಿಕೊಂಡಿರುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಥರಹೇವಾರಿ ರೀತಿಯಲ್ಲಿ ಕಮೆಂಟ್ಸ್‌ ಸುರಿಮಳೆಯಾಗುತ್ತಲೇ ಇದೆ. ಅದರ ನಡುವೆಯೇ ಈಗ ತಮ್ಮ ಮೂಲವನ್ನೇ ಮರೆತು ಇಂದಿನ ನಟಿಯರ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿರುವಿರಾ ಎಂದು ಪ್ರಶ್ನಿಸುತ್ತಿದ್ದಾರೆ! ಕೆಲವರು ಸನಾ ಖಾನ್‌ ಸರಿಯಾಗಿ ಮಾತನಾಡಿದ್ದಾರೆ ಎಂದೂ ಹೇಳುತ್ತಿದ್ದಾರೆ. ಆದರೆ ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಟೈಪ್‌ ಮಾಡಿ ನೋಡಿ ಎಂದು ಹಲವರು ನಟಿಯ ಕಾಲೆಳೆಯುತ್ತಿದ್ದಾರೆ. 
 
ಅಷ್ಟಕ್ಕೂ, ಸನಾ ಅವರು, ಮದುವೆಗೂ ಮುನ್ನ ನಟಿ, ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ (Sana Khan) ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ,  ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು.

4ನೇ ಹಂತದ ಕ್ಯಾನ್ಸರ್ ಗೆದ್ದ ಕಾರಣ ನೀಡಿದ ಸಿಧು ಪತ್ನಿಗೆ 850 ಕೋಟಿ ರೂ. ಲೀಗಲ್ ನೋಟಿಸ್‌!

Latest Videos
Follow Us:
Download App:
  • android
  • ios