ತಾಯ್ತನ ಮತ್ತು ಕೆಲಸದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಿರುತ್ವೆ. ದೀಪಿಕಾ ಪಡುಕೋಣೆ ಹೇಳಿಕೆಯೊಂದು ಮತ್ತೆ ಈ ಚರ್ಚೆ ಹುಟ್ಟುಹಾಕಿದೆ. ದೀಪಿಕಾ ವಿವಾದದ ಬಗ್ಗೆ ರಾಧಿಕಾ ಆಪ್ಟೆ ಹೇಳಿದ್ದೇನು?
ಅಮ್ಮ (mother)ನಾದ್ಮೇಲೆ ವೃತ್ತಿ ಜೀವನಕ್ಕೆ ಮರಳೋದು ಸುಲಭದ ಕೆಲ್ಸವಲ್ಲ. ಉದ್ಯೋಗದ ಜೊತೆ ಮಕ್ಕಳು, ಮನೆಯನ್ನು ಸಂಭಾಳಿಸೋದು ತಾಯಂದಿರಿಗೆ ದೊಡ್ಡ ತಲೆನೋವು. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಸ್ಟಾರ್ ನಟಿಯರ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆಯೊಂದಿದೆ. ಕೈಗೊಬ್ಬರು, ಕಾಲಿಗೊಬ್ಬರು ಕೆಲ್ಸದವರಿರ್ತಾರೆ, ಮಕ್ಕಳನ್ನು ನೋಡಿಕೊಳ್ಳೋಕೆ ಪ್ರತ್ಯೇಕ ಜನರನ್ನು ನೇಮಿಸಿಸ್ತಾರೆ, ಡಯಟ್ ಪಾಲನೆ ಮಾಡಿ, ಮಗು ಹುಟ್ಟಿದ ವಾರಕ್ಕೇ ಕೆಲಸಕ್ಕೆ ಬರ್ತಾರೆ. ನಮಗೆ ಹಾಗಾಗುತ್ತಾ ಅಂತ ಅನೇಕರು ಪ್ರಶ್ನೆ ಮಾಡ್ತಾರೆ. ಬಾಲಿವುಡ್ ಸ್ಟಾರ್ ಆಗಿರಲಿ, ಸ್ಯಾಂಡಲ್ವುಡ್ ನಟಿಯಾಗಿರಲಿ, ಅಮ್ಮನಾದ್ಮೇಲೆ ಅಮ್ಮನ ಜವಾಬ್ದಾರಿ ನಿಭಾಯಿಸ್ಲೇಬೇಕು. ಮಕ್ಕಳಿಗೆ ಅಮ್ಮ ನೀಡುವ ಪ್ರೀತಿಯನ್ನು ಯಾರಿಂದಲೂ ನೀಡೋಕೆ ಸಾಧ್ಯವಿಲ್ಲ. ಸದ್ಯ ದೀಪಿಕಾ ಪಡುಕೋಣೆ (Deepika Padukone) ಈ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗಿದ್ದಾರೆ. ಅನೇಕರು ದೀಪಿಕಾ ಪರ ಮಾತನಾಡಿದ್ರೆ ಮತ್ತೆ ಕೆಲವರು ಅವರ ವಿರುದ್ಧ ಮಾತನಾಡಿದ್ದಾರೆ. ಈ ಮಧ್ಯೆ ನಟಿ ರಾಧಿಕಾ ಆಪ್ಟೆ (Radhika Apte), ತನ್ನ ನೋವನ್ನು ತೋಡಿಕೊಂಡಿದ್ದಾರೆ. ತಾಯಿಯಾದ್ಮೇಲೆ ವೃತ್ತಿ ಜೀವನ ಸಂಭಾಳಿಸೋದು ಅವರಿಗೆ ಎಷ್ಟು ಕಷ್ಟವಾಗಿದೆ ಎಂಬುದನ್ನು ಹೇಳಿದ್ದಾರೆ.
ರಾಧಿಕಾ ಆಪ್ಟೆ ಮಗು ಜನಿಸಿದ ಒಂದು ವಾರದ ನಂತ್ರ ಕೆಲಸಕ್ಕೆ ವಾಪಸ್ ಆಗಿದ್ರು. ಆದ್ರೆ ತಿಂಗಳುಗಳ ಬಳಿಕ ಇದ್ರ ಬಗ್ಗೆ ಅಚ್ಚರಿಯ ವಿಷಯಗಳನ್ನು ಹೇಳಿದ್ದಾರೆ. ಈಗಷ್ಟೆ ತಾಯಿಯಾಗಿರುವ ನಟಿಯರಿಗೆ ಸಿನಿಮಾ ರಂಗ ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಧಿಕಾ ಆಪ್ಟೆ, ಸೂಕ್ತವೆಂದು ನಾನು ಭಾವಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಾನು ಅದನ್ನು ಹೇಗೆ ನಿಭಾಯಿಸ್ತೇನೆ ಎಂಬುದು ನನಗೆ ಗೊತ್ತಿಲ್ಲ ಎಂದು ರಾಧಿಕಾ ಹೇಳಿದ್ದಾರೆ. ಸಿನಿಮಾ ಶೂಟಿಂಗ್, ದೀರ್ಘ ಕಾಲ ಕೆಲಸ ಮತ್ತು ಮಗುವಿನ ಜೊತೆ ಕಳೆಯುವ ಸಮಯದ ಕೊರತೆ ಬಗ್ಗೆ ಮಾತನಾಡಿದ್ದಾರೆ. ತಾಯಿಯಾಗಿ ಕೆಲ್ಸ ಮಾಡೋದು ತುಂಬಾ ಕಷ್ಟ ಎಂದು ರಾಧಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂಬೈ ಮತ್ತು ಲಂಡನ್ ನಡುವೆ ತಮ್ಮ ಸಮಯವನ್ನು ವಿಭಜಿಸಿರುವ ರಾಧಿಕಾಗೆ ಅಲ್ಲಿಂದ ಇಲ್ಲಿಗೆ ಓಡಾಡೋದು ಕೂಡ ಒಂದು ಸಮಸ್ಯೆಯಾಗಿದೆ ಎಂದಿದ್ದಾರೆ.
ಅಮ್ಮನಾಗಿ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ನಾವು ಶೂಟಿಂಗ್ ನಲ್ಲಿ ಸಾಕಷ್ಟು ಸಮಯ ಕಳೆಯುತ್ತೇವೆ. ಕೆಲಸ ಮಾಡುವ ರೀತಿ ಕೂಡ ತುಂಬಾ ಕಷ್ಟಕರವಾಗಿರುತ್ತೆ. ಕೆಲವೊಮ್ಮೆ ನಮಗೆ ಮಗುವನ್ನು ನೋಡಲು ಅವಕಾಶ ಸಿಗುವುದಿಲ್ಲ. ಇದರ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ. ರಾಧಿಕಾ ಹೆರಿಗೆಗೆ ಒಂದು ದಿನ ಮೊದಲೂ ಕೆಲಸಕ್ಕೆ ಹಾಜರಾಗಿದ್ದರು. ಹೆರಿಗೆಯಾಗಿ ಒಂದು ವಾರದ ನಂತ್ರ ಜೂಮ್ ಕಾಲ್ ನಲ್ಲಿ ಮೀಟಿಂಗ್ ಗೆ ಹಾಜರಾಗಿದ್ದರು.
ದೀಪಿಕಾ ಪಡುಕೋಣೆ ಮತ್ತು ಸಂದೀಪ್ ರೆಡ್ಡಿ ಜೊತೆ ವಿವಾದ : ಮಾತೃತ್ವ ಮತ್ತು ಕೆಲಸದ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ರಾಧಿಕಾ ಇಂಥ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ, ದೀಪಿಕಾ ಪಡುಕೋಣೆ ಮತ್ತು ಸಂದೀಪ್ ವಂಗಾ ರೆಡ್ಡಿ ನಡುವೆ ಕೆಲಸದ ಸಮಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಕೇಳಿ ಬಂದಿದೆ ಎಂಬ ವರದಿ ಆಗಿತ್ತು. ದೀಪಿಕಾ ಬೇಡಿಕೆಗೆ ಮಣಿಯದ ಸಂದೀಪ್, ಅವರನ್ನು ಸಿನಿಮಾದಿಂದ ಹೊರಗಿಟ್ಟಿದ್ದರು. ದೀಪಿಕಾ ಪಡುಕೋಣೆ, ನಿಗದಿತ ಗಂಟೆಗಳ ಕಾಲ ಕೆಲಸ ಮಾಡುವ ಷರತ್ತು ಹಾಕಿದ್ದರು ಎನ್ನಲಾಗಿದೆ. ಆದ್ರೆ ಅದನ್ನು ಸಂದೀಪ್ ತಿರಸ್ಕರಿಸಿದ್ದರು. ನಟ-ನಿರ್ಮಾಪಕ ಅಜಯ್ ದೇವಗನ್ ಟ್ರೇಲರ್ ಬಿಡುಗಡೆ ವೇಳೆ, ಎಲ್ಲರೂ ಎಂಟು ಗಂಟೆ ಕೆಲ್ಸ ಮಾಡ್ಬೇಕು ಎಂದಿದ್ದರು. ಇಬ್ಬರು ಮಕ್ಕಳ ತಾಯಿ ಆಗಿರುವ ಕಾಜೋಲ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸೈಫ್ ಅಲಿಖಾನ್ ಕೂಡ ಈ ಬೇಡಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


