ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದೇ ಬ್ರೆಸ್ಟ್ ಪಂಪಿಂಗ್ ಮಾಡಿದ ರಾಧಿಕಾ ಆಪ್ಟೆ ವಿರುದ್ಧ ನೆಟ್ಟಿಗರು ಗರಂ

ಎರಡು ತಿಂಗಳ ಹಿಂದಷ್ಟೇ ಮಗುವಿನ ತಾಯಿಯಾದ ರಾಧಿಕಾ ಆಪ್ಟೆ, ಬಾಫ್ಟಾ ಅವಾರ್ಡ್ಸ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೊ ಇದೀಗ ಟೀಕೆಗೆ ಒಳಗಾಗಿದೆ. 
 

Radhika Apte shares photo of breast pumping and with alcohol glass pav

ಬಾಲಿವುಡ್ ನಟಿ ರಾಧಿಕಾ ಆಪ್ಟೆ (Radhika Apte) ಕಳೆದ ವರ್ಷ ಅಂದ್ರೆ 2024 ರಲ್ಲಿ ತಾಯಿಯಾದರು. ಅವರು ತಮ್ಮ ಮಗುವಿನೊಂದಿಗೆ ಅನೇಕ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಅವರು ಸ್ನಾನಗೃಹದೊಳಗೆ ಮಗುವಿಗಾಗಿ ಬ್ರೆಸ್ಟ್ ಪಂಪ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಟಿ ತಾನು ಬಾಫ್ಟಾ ಅವಾರ್ಡ್  (BAFTA Award) ಸಮಾರಂಭದಲ್ಲಿ ಭಾಗವಹಿಸಿರೋದಾಗಿ ತಿಳಿಸಿದ್ದರು. ಅವರ ಮಗುವಿಗೆ ಕೇವಲ ಎರಡು ತಿಂಗಳು. ರಾಧಿಕಾ ಆಪ್ಟೆ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 'ಈಗ ನನ್ನ ಬಾಫ್ಟಾ ಸಮಾರಂಭದ ರಿಯಾಲಿಟಿಯನ್ನು ನೋಡಿ. ನಾನು ನತಾಶಾಗೆ ಧನ್ಯವಾದ ಹೇಳಲು ಬಯಸುತ್ತೇನೆ, ಅವರಿಂದಾಗಿ ಇವತ್ತು ನಾನು ಇಲ್ಲಿಗೆ ಬರಲು ಸಾಧ್ಯವಾಯಿತು. ಬ್ರೆಸ್ಟ್ ಪಂಪಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ನತಾಶಾ ಶೆಡ್ಯೂಲ್ ಫಿಕ್ಸ್ ಮಾಡಿದ್ದರು. ಬ್ರೆಸ್ಟ್ ಪಂಪಿಂಗ್ (breast pumping) ಮಾಡಲು ಆಕೆಯೂ ನನ್ನೊಂದಿಗೆ ವಾಶ್ ರೂಮ್ ಗೆ ಬಂದಿದ್ದರು, ಅಷ್ಟೇ ಅಲ್ಲ ಆಕೆ ನನಗಾಗಿ ಶಾಂಪೇನ್ ಕೂಡ ತಂದಿದ್ದರು, ಈ ರೀತಿಯಾಗಿ ನಾನು ಆರಾಮಾವಾಗಿರಲು ಸಹಾಯ ಮಾಡಿರುವ ನತಾಶಾಗೆ ಥ್ಯಾಂಕ್ಯೂ ಎಂದು ರಾಧಿಕಾ ಅಪ್ಟೆ ಬರೆದುಕೊಂಡಿದ್ದಾರೆ. 

ನನಗೆ ಮಗು ಇಷ್ಟವಿಲ್ಲ, ಎಲ್ಲರೂ ಸುಳ್ಳೆ ಹೇಳ್ತಾರೆ, ಈ ಹಿಂಸೆ ತಾಳೋಕೆ ಕಷ್ಟವಾಗ್ತಿದೆ: ನಟಿ ರಾಧಿಕಾ ಓಪನ್ ಮಾತು!

ತಾಯಿಯಾಗೋದು ಕಷ್ಟದ ಕೆಲಸ ಎಂದ ರಾಧಿಕಾ ಆಪ್ಟೆ 
ಇತ್ತೀಚೆಗೆ ನಟಿ ರಾಧಿಕಾ ಆಪ್ಟೆ, 'ಹೊಸ ತಾಯಿಯಾಗುವುದು ಮತ್ತು ಕೆಲಸ ಮಾಡುವುದು ತುಂಬಾನೆ ಕಠಿಣ. ನಮ್ಮ ಸಿನಿಮಾ ಇಂಡಷ್ಟ್ರಿಯಲ್ಲಿ ಈ ತಾಯ್ತನದ ಬಗ್ಗೆ ಕಾಳಜಿ ವಹಿಸೋದು ಕೂಡ ಕಡಿಮೆ ಎಂದಿದ್ದರು. ಇದೀಗ ಮಗುವಾದ ಬಳಿಕ ರಾಧಿಕಾ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಅವರು ಮಾಡಿರುವ ಕೆಲಸವನ್ನು ನೋಡಿ ನೆಟ್ಟಿಗರು ಕಿಡಿ ಕಾರಿದ್ದು, ನಟಿ ಶೇರ್ ಮಾಡಿರುವ ಫೋಟೊ ತುಂಬಾ ನೆಗೆಟಿವ್ ಕಾಮೆಂಟ್ ಗಳೇ ತುಂಬಿವೆ. ನಟಿ ಒಂದು ಕೈಯಲ್ಲಿ ಬ್ರೆಸ್ಟ್ ಪಂಪ್ ಮಾಡುತ್ತಿದ್ದು, ಮತ್ತೊಂದು ಕೈಯಲ್ಲಿ ಶಾಂಪೇನ್ ಗ್ಲಾಸ್ (champagne glass) ಹಿಡಿದಿರುವ ಫೋಟೊ ಹಂಚಿಕೊಂಡಿದ್ದು, ಮಗುವಿಗೆ ಹಾಲು ಕೊಡುವ ಸಮಯದಲ್ಲಿ ಮದ್ಯಪಾನ ಮಾಡೋದು ತಪ್ಪು ಎಂದು ಜನ ಬುದ್ದಿವಾದ ಹೇಳಿದ್ದಾರೆ. 

ಮದುವೆಯಾಗಿ 12 ವರ್ಷಗಳ ಬಳಿಕ ಮೊದಲ ಮಗು ಸ್ವಾಗತಿಸಿದ ನಟಿ ರಾಧಿಕಾ ಆಪ್ಟೆ

ಸ್ತನ್ಯಪಾನದ ಸಮಯದಲ್ಲಿ ಮದ್ಯಪಾನ ಮಾಡುವುದು ಸುರಕ್ಷಿತವೇ?
ಹಲವು ಸೆಲೆಬ್ರಿಟಿಗಳು ರಾಧಿಕಾ ಆಪ್ಟೆ ಫೋಟೊಗೆ ಪ್ರೀತಿ ತೋರಿದ್ದಾರೆ. ಆದರೆ ಒಬ್ಬ ಬಳಕೆದಾರರು ಬರೆದಿದ್ದಾರೆ, 'ರಾಧಿಕಾ ಮೇಡಂ ನೀವು ತುಂಬಾ ಒಳ್ಳೆಯವರು. ಆ ಗ್ಲಾಸಿನಲ್ಲಿ ಏನಿದೆ? ಬಹುಶಃ ಇದು ಆಪ್ ಫಿಜ್ ಆಗಿರಬಹುದು ಎಂದಿದ್ದಾರೆ. ಇನ್ನೂ ಒಬ್ಬರು ಸ್ತನ್ಯಪಾನ ಮಾಡುವಾಗ ಮದ್ಯಪಾನ ಮಾಡಬೇಡಿ ಎಂದು ಬರೆದಿದ್ದಾರೆ. ಸ್ತನ್ಯಪಾನದ ಸಮಯದಲ್ಲಿ ಮದ್ಯಪಾನ (drinking while breast feeding) ಮಾಡುವುದು ಸರಿಯಲ್ಲ. ಇದರಿಂದ ಮಗುವಿನ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಇನ್ನೂ ಕೆಲವರು ನೀವು ಈ ಫೋಟೊ ಶೇರ್ ಮಾಡುವ ಮೂಲಕ ಜನರಿಗೆ ಕೆಟ್ಟ ಸಂದೇಶ ನೀಡುತ್ತಿದ್ದೀರಿ. ಈ ತಪ್ಪು ಮಾಡಬೇಡಿ ಎಂದಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Radhika (@radhikaofficial)

Latest Videos
Follow Us:
Download App:
  • android
  • ios