Asianet Suvarna News Asianet Suvarna News

Radhe Shyam ಸಾಂಗ್ ರಿಲೀಸ್: ಫ್ಯಾಂಟಸಿ ಲೋಕದಲ್ಲಿ ಪ್ರಭಾಸ್-ಪೂಜಾ ಹೆಗ್ಡೆ

ಧನಂಜಯ್ ರಂಜನ್ ಸಾಹಿತ್ಯದಲ್ಲಿ ಯಾರೋ ಇವರ್ಯಾರೋ ಕನವರಿಸೋ ಪ್ರೇಮಿಗಳಾ, ಯಾರೋ ಇವರ್ಯಾರೋ ಕೊನೆಯಿರದ ಪಯಣಿಗರಾ ಎಂಬ ಹಾಡು ಮೂಡಿಬಂದಿದ್ದು, ಸಿನಿರಸಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Radhe Shyam movie Ee Reethile Lyrical Video Song out starrer prabhas gvd
Author
Bangalore, First Published Nov 17, 2021, 3:02 PM IST

'ರಾಧೆ ಶ್ಯಾಮ್' (Radhe Shyam) ಟಾಲಿವುಡ್‌ (Tollywood) ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್​ ಅ್ಯಂಡ್​ ಔಟ್ ಲವ್ ಕಮ್​​ ರೊಮ್ಯಾಂಟಿಕ್​ ಸಿನಿಮಾ. ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೀಸರ್‌ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಇದೀಗ ಚಿತ್ರತಂಡ ಚಿತ್ರದ ಲಿರಿಕಲ್ ಹಾಡನ್ನು (Lyrical Song) ಬಿಡುಗಡೆ ಮಾಡಿದೆ. ಈ ಬಗ್ಗೆ ಚಿತ್ರದ ನಾಯಕ ಪ್ರಭಾಸ್, ರಾಧೆಶ್ಯಾಮ್ ಸಂಗೀತ ಪಯಣದಲ್ಲಿ ನನ್ನೊಂದಿಗೆ ಸೇರಲು ನೀವು ಇಷ್ಟಪಡುತ್ತೀರಿ ಎಂದು ಲಿರಿಕಲ್ ವಿಡಿಯೋವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ.

ಧನಂಜಯ್ ರಂಜನ್ ಸಾಹಿತ್ಯದಲ್ಲಿ 'ಯಾರೋ ಇವರ್ಯಾರೋ ಕನವರಿಸೋ ಪ್ರೇಮಿಗಳಾ, ಯಾರೋ ಇವರ್ಯಾರೋ ಕೊನೆಯಿರದ ಪಯಣಿಗರಾ' ಎಂಬ ಹಾಡು ಮೂಡಿಬಂದಿದ್ದು, ಸಿನಿರಸಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರೋ ಇವರ್ಯಾರೋ ಹಾಡನ್ನು ಸಂಪೂರ್ಣ ಆ್ಯನಿಮೇಷನ್​ನಲ್ಲಿ ಚಿತ್ರೀಕರಣ ಮಾಡಿದ್ದು, ಹೊಸ ಫ್ಯಾಂಟಸಿ ಲೋಕವನ್ನೇ ಸೃಷ್ಟಿ ಮಾಡಿದೆ. ಅಲ್ಲದೇ ಸಾಹಿತ್ಯಕ್ಕೆ ತಕ್ಕ ಹಾಗೆ ಹಾಡಿನಲ್ಲಿ ಬಳಸಿರುವ ಗ್ರಾಫಿಕ್ಸ್​  ಎದ್ದು ಕಾಣುತ್ತದೆ. ನಿಹಾಲ್ ಸಾದಿಕ್, ಹರಿಣಿ ಇವತುರಿ ಹಾಡಿಗೆ ದನಿಯಾಗುವ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಬಿಡುಗಡೆಯಾಗಿದೆ.

'ರಾಧೆ ಶ್ಯಾಮ್'ನಲ್ಲಿ ವಿಕ್ರಮಾದಿತ್ಯನ ಲುಕ್‌ ರಿವೀಲ್

ಇತ್ತಿಚೆಗಷ್ಟೇ, ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರದ ಮೊದಲ ಲಿರಿಕಲ್ ಹಾಡನ್ನು ಕನ್ನಡ, ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಕುತೂಹಲಕಾರಿ ಪೋಸ್ಟರ್‌ನ್ನು (Poster) ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟರ್‌ ಗಮನಿಸಿದಾಗ ಫ್ಯಾಂಟಸಿ ಲೋಕದ ಅಳವಾದ ನೀಲಿ ಸಾಗರದಲ್ಲಿ ದೂರದಿಂದ ಕಾರೊಂದು ಬರುತ್ತಿರುವುದನ್ನು ಕಾಣಬಹುದಾಗಿತ್ತು. ಈ ಹಿಂದೆ ಚಿತ್ರತಂಡ ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಮಾದಿತ್ಯನ ಲುಕ್‌ನ್ನು ಪರಿಚಯಿಸಿತ್ತು. 
 

 
 
 
 
 
 
 
 
 
 
 
 
 
 
 

A post shared by Prabhas (@actorprabhas)


'ನೀನು ನನಗೆ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಪ್ರೀತಿಯಲ್ಲಿ ನಿನ್ನ ಮನಸು ಯಾವಾಗ ಹೊಡೆದೋಗುತ್ತೊ ನನಗೆ ಗೊತ್ತು, ಆದರೆ ನಿನಗೆ ಹೇಳಲ್ಲ. ನಿನ್ನ ಸೋಲುಗಳು ನನಗೆ ಕಾಣುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನಿನ್ನ ಸಾವಿನ ಅರಿವು ನನಗಾಗುತ್ತೆ, ಆದರೆ ನಾನು ನಿನಗೆ ಹೇಳಲ್ಲ. ನನಗೆಲ್ಲಾ ಗೊತ್ತು, ಆದರೆ ನಾನು ನಿನಗೆ ಹೇಳಲ್ಲ. ಯಾಕೆಂದರೆ ಅದು ನಿನಗೆ ಹೇಳಿದರೂ  ಅರ್ಥ ಆಗಲ್ಲ. ನನ್ನ ಹೆಸರು ವಿಕ್ರಮಾದಿತ್ಯ. ನಾನು ದೇವರಲ್ಲ, ಆದರೆ ನಾನು ನಿಮ್ಮಲ್ಲೊಬ್ಬನು ಅಲ್ಲ' ಎಂದು ಪ್ರಭಾಸ್ ಖಡಕ್ ಡೈಲಾಗ್ ಹೇಳಿದ್ದರು.

Radhe Shyam: ಕುತೂಹಲಕಾರಿ ಪೋಸ್ಟರ್‌ ಹಂಚಿಕೊಂಡ ನಟ ಪ್ರಭಾಸ್

ರಾಧಾ ಕೃಷ್ಣ ಕುಮಾರ್ (Radha Krishna Kumar) ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಕುಮಾರ್, ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜನೆ, ಮನೋಜ್ ಪರಮಹಂಸ ಛಾಯಾಗ್ರಹಣ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಚಿತ್ರಕ್ಕಿದೆ.  ಸಚಿನ್ ಖೇಡೇಕರ್, ಭಾಗ್ಯಶ್ರೀ, ಕುನಾಲ್ ರಾಯ್ ಕಪೂರ್, ಸತ್ಯನ್, ಪ್ರಿಯದರ್ಶಿ, ಮುರಳಿ ಶರ್ಮಾ, ಸಶಾ ಚೆಟ್ರಿ, ರಿದ್ಧಿ ಕುಮಾರ್ ಸೇರಿದಂತೆ ಇತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವು 2022ರ ಜನವರಿ 14ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
 

Follow Us:
Download App:
  • android
  • ios