ನಗೆಪಾಟಲಿಗೆ ಗುರಿಯಾಗಿದ್ದವ ಈಗ ಹಾಲಿವುಡ್ ಸ್ಟಾರ್…ಒಂದೇ ಒಂದು ವಿಡಿಯೋ ಬದಲಿಸ್ತು ಹಣೆಬರಹ!

ನೋವು, ಸಮಸ್ಯೆ ಪ್ರತಿಯೊಬ್ಬನಿಗೂ ಇದ್ದಿದ್ದೆ. ಕೆಲವೊಬ್ಬರು ತಮ್ಮ ನೋವನ್ನು ಹಂಚಿಕೊಂಡು ತಮಾಷೆಯ ವಸ್ತುವಾದ್ರೆ ಮತ್ತೆ ಕೆಲವರಿಗೆ ಇದೇ ವಿಡಿಯೋ ಅವರ ಅದೃಷ್ಟ ಬದಲಿಸುತ್ತೆ. ಈ ಹುಡುಗನ ಹಣೆಬರಹವನ್ನೂ ಈ ವಿಡಿಯೋ ಬದಲಿಸಿದೆ. 
 

Quaden Bayles Now Hollywood Actor Once Bullied In School Over Height Mother Made Viral Crying Video roo

ಸೋಶಿಯಲ್ ಮಿಡಿಯಾಗಳು ಜನರ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮ ಬೀರುತ್ತವೆ. ಕೆಲ ಬಡ ಜನರ ಅಥವಾ ನೋವಿನಲ್ಲಿರುವ ಜನರಿಗೆ ಸೋಶಿಯಲ್ ಮೀಡಿಯಾ ಆಸರೆಯಾಗಿದೆ. ಕೋಟ್ಯಾಂತರ ಜನರಿಗೆ ಈ ವಿಡಿಯೋ ತಲುಪೋದಲ್ಲದೆ ರಾತ್ರೋರಾತ್ರಿ ಅವರು ಪ್ರಸಿದ್ಧಿ ಪಡೆದು, ಅವರ ಪ್ರತಿಭೆಗೆ ತಕ್ಕಂತೆ ಹಣ ಸಂಪಾದನೆ ಮಾಡಿದ್ದಿದೆ. ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಜನರಿದ್ದಾರೆ. 2020ರಲ್ಲಿ ಈ ಹುಡುಗ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ. ಆತನ ಒಂದು ವಿಡಿಯೋ ಲಕ್ಷಾಂತರ ಮಂದಿ ಕಣ್ಣಲ್ಲಿ ನೀರು ತರಿಸಿತ್ತು. ದೇಹದ ಆಕಾರ ಮಕ್ಕಳಿಗೆ ಎಷ್ಟೆಲ್ಲ ನೋವು ನೀಡುತ್ತದೆ ಎಂಬುದನ್ನು ಈ ಒಂದು ವಿಡಿಯೋ ಹೇಳಿತ್ತು. ಆದ್ರೆ ಅದೊಂದೇ ವಿಡಿಯೋ ಬಾಲಕನ ಭವಿಷ್ಯ ಬದಲಿಸಿದೆ. ಈಗ ಆತನನ್ನು ತೆಗಳುವ ಬದಲು ಹೊಗಳುವ ಜನರ ಸಂಖ್ಯೆ ಹೆಚ್ಚಿದೆ. ಬಾಲಕ ತನ್ನೆಲ್ಲ ನೋವು ಮರೆತು ಖುಷಿಯಾಗಿದ್ದಾನೆ. 

ಬಾಲಕನ ಹೆಸರು ಕ್ವಾಡೆನ್ ಬೇಲ್ಸ್. ಆತನಿಗೆ 13 ವರ್ಷ ವಯಸ್ಸು (Age). ಆತನ ಎಲ್ಲ ಮಕ್ಕಳಿಗಿಂತ ಕುಳ್ಳಗಿದ್ದಾನೆ. ಆತನ ಎತ್ತರವೇ ಆತನ ನೋವಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣ (Social media ) ದಲ್ಲಿ ಕ್ವಾಡೆನ್ ಬೇಲ್ಸ್ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಕ್ವಾಡೆನ್ ಬೇಲ್ಸ್ ಅಳೋದನ್ನು ಕಾಣ್ಬಹುದು. ತನ್ನ ಎತ್ತರ ನೋಡಿ ಶಾಲೆಯಲ್ಲಿ ಮಕ್ಕಳು (Kids) ಹಿಂಸೆ ನೀಡುತ್ತಾರೆ ಎಂದಿದ್ದ ಬಾಲಕ, ತನ್ನನ್ನು ಕೊಲ್ಲುವಂತೆ ಹೇಳಿದ್ದ. ಕ್ವಾಡೆನ್‌ನ ತಾಯಿ ಶಾಲೆಯಲ್ಲಿ ನಡೆಯುವ ರ್ಯಾಕಿಂಗ್ ಬಗ್ಗೆ ಜನರಿಗೆ ಅರಿವು ಮೂಡಿಸಲು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಶಾಲೆಯಲ್ಲಿ ನಡೆಯುವ ಇಂಥ ಘಟನೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಅದ್ರಲ್ಲೂ ವಿಕಲಾಂಗರ (Physically Handicapped) ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ನಡೆಸಿದ್ದರು. 

ಆ್ಯಂಕರ್​ ಅನುಶ್ರೀ ಹರಟೆಕಟ್ಟೆಯಲ್ಲಿ ಅದಿತಿ-ಖುಷಿ-ಅಮೃತಾ 'ಸೀಕ್ರೆಟ್' ಶೇರ್ ಮಾಡಿಕೊಂಡ್ರು!

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಕ್ವಾಡೆನ್ ಬೇಲ್ಸ್‌ಗೆ ಅನೇಕರು ನೆರವು ನೀಡಿದ್ದರು. ಅನೇಕ ಹಾಲಿವುಡ್ ಸೆಲೆಬ್ರಿಟಿಗಳು (Bollywood Celebrities) ಬಾಲಕನ ನೆರವಿಗೆ ಬಂದಿದ್ದರು. ಹಾಸ್ಯನಟ ಬ್ರಾಡ್ ವಿಲಿಯಮ್ಸ್ ಕ್ವಾಡೆನ್‌ಗಾಗಿ GoFundMe ಪುಟವನ್ನು ಸಹ ರಚಿಸಿದ್ದರು. ಬಾಲಕ ಮತ್ತು ಆತನ ತಾಯಿ ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್‌ಗೆ ಹೋಗಲು ಸಹಾಯವಾಗ್ಲಿ ಎಂದು ಬ್ರಾಡ್  10 ಸಾವಿರ ಡಾಲರ್ ಸಂಗ್ರಹಿಸುವ ಪ್ರಯತ್ನ ನಡೆಸಿದ್ದರು.  ಆದ್ರೆ ಈ ಸಮಯದಲ್ಲಿ  4 ಲಕ್ಷ 70 ಸಾವಿರ ಡಾಲರ್ ಸಂಗ್ರಹವಾಗಿತ್ತು. ನಿರೀಕ್ಷೆಗಿಂತ ಹೆಚ್ಚು ಹಣ ಸಂಗ್ರಹವಾಗಿತ್ತು. ಕ್ವಾಡೆನ್ ಬೇಲ್ಸ್ ಹಾಗೂ ಆತನ ತಾಯಿ ಈ ಹಣವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳಲಿಲ್ಲ. ಚಾರಿಟಿಗೆ ನೀಡುವ ಮೂಲಕ ಅವರು ಮತ್ತೊಂದಿಷ್ಟು ಮಂದಿ ಗಮನ ಸೆಳೆದಿದ್ದರು. 

ಅಷ್ಟೇ ಅಲ್ಲ, ಕ್ವಾಡೆನ್ ಬೇಲ್ಸ್ ಅಳುವ ವಿಡಿಯೋವನ್ನು ಚಿತ್ರ ನಿರ್ಮಾಪಕ ಜಾರ್ಜ್ ಮಿಲ್ಲರ್ ನೋಡಿದ್ದರು. ಅವರು ಕ್ವಾಡೆನ್‌ಗೆ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ದರು. ಕ್ವಾಡೆನ್ ನಟಿಸಿದ ಸಿನಿಮಾ Three Thousand Years of Longing  2022 ರಲ್ಲಿ ಬಿಡುಗಡೆಯಾಗಿತ್ತು. ಈಗ  ಕ್ವಾಡೆನ್ ಫ್ಯೂರಿಯೋಸಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. 

ಇಬ್ಬರೂ ಓಕೆ ಅಂದ್ಮೇಲೆ ಇನ್ನೇಕೆ ತಡ? ಗೌತಮ್​-ಭೂಮಿಕಾ ಸೋಬಾನಕ್ಕೆ ಮುಹೂರ್ತ ಫಿಕ್ಸ್​!

ಕ್ವಾಡೆನ್ ಬೇಲ್ಸ್ ಈಗ ಎಲ್ಲರ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣದಲ್ಲೂ ಕ್ವಾಡೆನ್ ಬೇಲ್ಸ್ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಬಳಕೆದಾರರು ಕ್ವಾಡೆನ್ ಬೇಲ್ಸ್ ಗೆ ಶುಭಕೋರಿದ್ದಾರೆ. ಶುಭಕೋರಿದ್ದ ಬಳಕೆದಾರನೊಬ್ಬ, ಕೇವಲ ಸಿನಿಮಾ ಮಾಡ್ತಿರೋದಕ್ಕಲ್ಲ, ಜೀವನದಲ್ಲಿ ಕಣ್ಣಿಗೆ ಕಾಣೋದಕ್ಕಿಂತ ಹೆಚ್ಚಿನದನ್ನು ನೋಡಿದ್ದಕ್ಕಾಗಿ ಎಂದು ಬರೆದಿದ್ದಾರೆ. ಮತ್ತೆ ಕೆಲವೊಂದಿಷ್ಟು ಮಂದಿ ಕ್ವಾಡೆನ್ ಬೇಲ್ಸ್ ಸಿನಿಮಾ ನೋಡಲು ಕಾತುರದಿಂದ ಕಾಯ್ತಿರೋದಾಗಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios