Asianet Suvarna News Asianet Suvarna News

ಇಬ್ಬರೂ ಓಕೆ ಅಂದ್ಮೇಲೆ ಇನ್ನೇಕೆ ತಡ? ಗೌತಮ್​-ಭೂಮಿಕಾ ಸೋಬಾನಕ್ಕೆ ಮುಹೂರ್ತ ಫಿಕ್ಸ್​!


ಗೌತಮ್​  ಮತ್ತು ಭೂಮಿಕಾ ಫಸ್ಟ್​ ನೈಟ್​ಗೆ ಅಜ್ಜಿ ಮುಹೂರ್ತ ಫಿಕ್ಸ್ ಮಾಡಿಯಾಗಿದೆ. ಇಬ್ಬರೂ ಇದಕ್ಕೆ ಸಮ್ಮತಿ ಸೂಚಿಸಿಯೂ ಆಗಿದೆ. ಮುಂದೆ?
 

Granny fixed Muhurtam for  Gautham and Bhoomikas first night Both  agreed suc
Author
First Published Jun 3, 2024, 12:15 PM IST

ಭೂಮಿಕಾ  ಮತ್ತು ಗೌತಮ್​ ಒಂದಾಗುವ ಕಾಲ ಬಂದಿದೆ. ಈ ಮೂಲಕ ಅಭಿಮಾನಿಗಳ ಆಸೆ ಅತಿ ಶೀಘ್ರದಲ್ಲಿ ನೆರವೇರುವ ನಿರೀಕ್ಷೆ ಕಾಣಿಸುತ್ತಿದೆ. ಮಧ್ಯೆ ಶಕುಂತಲಾ ದೇವಿ ಏನಾದರೂ ಕುತಂತ್ರ ಮಾಡದೇ ಹೋದರೆ ಇಬ್ಬರೂ ದಂಪತಿಯಂತೆ ಬಾಳ್ವೆ ನಡೆಸುವುದು ಬಹುತೇಕ ಫಿಕ್ಸ್ ಆಗಿದೆ. ಇದಕ್ಕಾಗಿ ಅಜ್ಜಿ ಮುಹೂರ್ತನೂ ಫಿಕ್ಸ್​ ಮಾಡಿಬಿಟ್ಟಿದ್ದಾಳೆ. ಈ ಮುಹೂರ್ತ ಯಾಕೆ ಎಂದು ಗೌತಮ್​ ಪ್ರಶ್ನಿಸಿದಾಗ ಅಜ್ಜಿ ನಿಮ್ಮಿಬ್ಬರ ಸೋಬಾನಕ್ಕೆ ಅಂದಿದ್ದಾಳೆ. ಗೌತಮ್​ಗೆ ಶಾಕ್​ ಆಗಿದೆ. ಇದೆಲ್ಲಾ ಯಾಕೆ ಎಂದಿದ್ದಾನೆ. ಆದರೆ ಅಜ್ಜಿ ಇದು ನಿಮಗಲ್ಲ, ನಿಮ್ಮಮ್ಮ ಶಕುಂತಲಾಗಾಗಿ. ಅವಳಿಗೋಸ್ಕರ ನೀವಿಬ್ಬರೂ ಒಂದಾಗಬೇಕು, ಇಲ್ಲದಿದ್ರೆ ಸತ್ತೇ ಹೋಗ್ತಾಳೆ ಅಂದಿದ್ದಾಳೆ. ಪಾಪ ಅವಳಿಗೇನು ಗೊತ್ತು, ಇವರಿಬ್ಬರು ಒಂದಾದರೆ ಅವಳು ಶಾಕ್​ನಿಂದ ಸಾಯಬಹುದು ಎಂದು. ಆದರೆ ಚಿಕ್ಕಮ್ಮನ ಮೇಲೆ ಪ್ರೀತಿಯನ್ನೇ ಇಟ್ಟುಕೊಂಡಿರುವ ಗೌತಮ್​, ಚಿಕ್ಕಮ್ಮನ ಹೆಸರು ಹೇಳುತ್ತಿದ್ದಂತೆಯೇ ಒಪ್ಪಿಕೊಂಡಿದ್ದಾನೆ.

ಕೊನೆಗೆ ಈ ವಿಷಯವನ್ನು ಭೂಮಿಕಾಗೂ ಹೇಳಿದ್ದಾಳೆ ಅಜ್ಜಿ. ನಾಚಿ ನೀರಾಗಿದ್ದಾಳೆ ಭೂಮಿಕಾ. ಆದರೆ ಗೌತಮ್​ ಇದಕ್ಕೆ ಒಪ್ಪಲ್ಲ ಎನ್ನುವುದು ಅವಳಿಗೆ ಗೊತ್ತು. ಕೊನೆಗೆ ಅಜ್ಜಿ ಗೌತಮ್​ ಇದಕ್ಕೆ ಓಕೆ ಅಂದಿದ್ದಾನೆ ಎಂದ ಮೇಲೆ ಅವರು ಓಕೆ ಅಂದ್ರೆ ನನಗೂ ಓಕೆ ಎಂದಿದ್ದಾಳೆ. ಒಟ್ಟಿನಲ್ಲಿ ಇವರಿಬ್ಬರೂ ಸೋಬಾನ ಫಿಕ್ಸ್ ಆಗಿದೆ. ಇದೀಗ ಶಕುಂತಲಾ ದೇವಿ ಏನು ಕುತಂತ್ರ ಮಾಡುತ್ತಾಳೋ ನೋಡಬೇಕಿದೆ. ಅಷ್ಟಕ್ಕೂ ಭೂಮಿಕಾ ಮತ್ತು ಗೌತಮ್​ ಹನಿಮೂನ್​ ಏನೋ ಮುಗಿಸಿ ಬಂದಿದ್ದಾರೆ. ಆದರೆ ಹನಿಮೂನ್​ನಲ್ಲಿ ಏನು ಆಗಬೇಕೋ ಅವೆಲ್ಲಾ ಆಗಿಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಚೆನ್ನಾಗಿ ಗೊತ್ತಿದೆ. ಅಜ್ಜಿ ಮತ್ತು ಆನಂದ್​ ದಂಪತಿ ಸೇರಿ ಹೇಗಾದರೂ ಮಾಡಿ ಇವರಿಬ್ಬರ ಮನಸ್ಸಷ್ಟೇ ಅಲ್ಲದೇ, ದೇಹವನ್ನೂ ಒಂದು ಮಾಡಬೇಕು ಎನ್ನುವ ಆಸೆ. ಅದಕ್ಕಾಗಿ ಇದಾಗಲೇ ಸಾಕಷ್ಟು ಬಾರಿ ಸರ್ಕಸ್​ ಮಾಡಿದರೂ ಈ ಜೋಡಿ ಹಾಗೆ ಮಾಡಲು ಹಿಂದೇಟು ಹಾಕುತ್ತಲೇ ಇದೆ. ಪ್ರೀತಿಯ ನಿವೇದನೆ ಮಾಡಿಕೊಳ್ಳಲಿಕ್ಕೇ ವರ್ಷವಾಗುತ್ತಾ ಬಂತು. ಇನ್ನು ಪತಿ-ಪತ್ನಿಯಂತೆ ಬಾಳಲು ಇನ್ನೆಷ್ಟು ಕಾಲ ಬೇಕೋ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದಾರೆ. ಅಜ್ಜಿ, ಆನಂದ್​ರಂತೆ ಅಮೃತಧಾರೆ ಫ್ಯಾನ್ಸ್​ಗೂ ಇವರಿಬ್ಬರೂ ಒಟ್ಟಾಗಿ ಇರಬೇಕು ಎನ್ನುವ ಆಸೆ.

ಇನ್ನೂ ಕೈ-ಕೈ ಟಚ್​ ಮಾಡೋದ್ರಲ್ಲೇ ಇದ್ದಾರೆ, ನೀವು ನೋಡಿದ್ರೆ... ಕಿಲಾಡಿ ಅಜ್ಜಿಗೆ ಗುಟ್ಟು ಹೇಳ್ತಿರೋ ಫ್ಯಾನ್ಸ್​!

ಇದೀಗ ಅಜ್ಜಿಗೆ ಇವರಿಬ್ಬರ ಮಧ್ಯೆ ಫುಲ್​ ಡೌಟ್​ ಶುರುವಾಗಿದೆ. ಭೂಮಿಕಾ ಬಳಿ ಹನಿಮೂನ್​ನಲ್ಲಿ ಏನಾಯ್ತು ಕೇಳಿದ್ದಾಳೆ. ಅವಳು ಹೇಳಿ ಕೇಳಿ ಭೂಮಿಕಾ. ಅಜ್ಜಿಯ ಮಾತನ್ನು ಅರ್ಥ ಮಾಡಿಕೊಂಡು ಏನೂ ಹೇಳದೇ ನಾಚಿಕೊಂಡು ಹೋದಳು. ಈ ಕಿಲಾಡಿ ಅಜ್ಜಿಗೆ ಇವೆಲ್ಲಾ ಗೊತ್ತಾಗದೆಯೇ ಇರುತ್ತಾ? ಭೂಮಿಕಾ ನಾಟಕ ಮಾಡುತ್ತಿದ್ದಾಳೆ ಎನ್ನುವ ಡೌಟ್​ ಬಂದು ನೇರವಾಗಿ ಗೌತಮ್​ಗೇ ಕಾಲ್​  ಮಾಡಿದ್ದಾಳೆ. ಹನಿಮೂನ್​ನಲ್ಲಿ ಏನೂ ಆಗೇ ಇಲ್ವಂತೆ ಎಂದು ಡೈರೆಕ್ಟ್​ ಆಗಿಯೇ ಕೇಳಿದ ಅಜ್ಜಿ, ಉಡುಗೊರೆ ಯಾವಾಗ ಕೊಡ್ತಿಯಾ ಎಂದು ಪ್ರಶ್ನಿಸಿದ್ದಾಳೆ. ಗೌತಮ್​ಗೆ ತಲೆ ಬುಡ ಅರ್ಥವಾಗಲಿಲ್ಲ. ಏನು ಉಡುಗೊರೆ ಎಂದು ಪ್ರಶ್ನಿಸಿದಾಗ ಮೊಮ್ಮಗು ಎಂದಿದ್ದಾಳೆ ಅಜ್ಜಿ. ಇದನ್ನು ಕೇಳುತ್ತಿದ್ದಂತೆಯೇ ಗೌತಮ್​ಗೆ ತಲೆ ತಿರುಗಿದೆ.
 
ಅದೇ ಇನ್ನೊಂದೆಡೆ ಇವರಿಬ್ಬರೂ ಒಟ್ಟಾಗಿಯೇ ಮಲಗುತ್ತಾರೋ ಇಲ್ವೋ ಎಂದು ನೋಡಲು ಅಜ್ಜಿ ಪದೇ ಪದೇ ಇವರ ಕೋಣೆಗೆ ಹೋಗಿದ್ದಾಳೆ. ಬಾಗಿಲು ತಟ್ಟಿದ ಶಬ್ದ ಆಗುತ್ತಲೇ ಕೆಳಗೆ ಹಾಸಿದ್ದ ಹಾಸಿಗೆಯನ್ನು ಭೂಮಿಕಾ ಮಡಚಿ ಕಪಾಟಿನಲ್ಲಿ ಇಟ್ಟು ಬಾಗಿಲು ತೆರೆದಿದ್ದಾಳೆ. ಅಜ್ಜಿ  ಏನೇನೋ ನೆಪ ಹೇಳಿ ಹೋದವಳು ಮತ್ತು ವಾಪಸ್​ ಬಂದಾಗಲೂಹೀಗೆಯೇ ಆಗಿದೆ. ಅಜ್ಜಿ ಏಕೆ ಹೀಗೆ ಮಾಡುತ್ತಿದ್ದಾಳೆ ಎನ್ನುವುದು ಇವರಿಬ್ಬರಿಗೂ ಗೊತ್ತು. ಅದಕ್ಕಾಗಿಯೇ ಗೌತಮ್​, ಅಜ್ಜಿ ಯಾವಾಗಾದ್ರೂ ಬರಬಹುದು. ಅದಕ್ಕೇ ಮೇಲೆ ಮಲಗಿಕೊಳ್ಳಿ ಅಂದಿದ್ದಾನೆ. ನಾಚಿಕೆ ಹಾಗೂ ಅಚ್ಚರಿಯಿಂದ ಭೂಮಿಕಾ ಒಪ್ಪಿ ಮಲಗಿದ್ದಾಳೆ. ಅಷ್ಟೊತ್ತಿಗೆ ಕತ್ತಲಾಗುತ್ತದೆ ಇವರಿಬ್ಬರ ಕೈ-ಕೈ ತಾಗಿದೆ. ಅಷ್ಟೇ... ಈಗ ಇಬ್ಬರೂ ಒಂದಾಗುವ ಕಾಲ ಬಂದಿದೆ. 
 

ತಿಳಿಯದೇ ತಪ್ಪಾಗೋಯ್ತು, ಪ್ಲೀಸ್​ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ

Latest Videos
Follow Us:
Download App:
  • android
  • ios