ಮುಂಬೈ: ‘ರೋಡ್‌, ಪ್ಯಾರ್‌ ತೂನೆ‌ ಕ್ಯಾ ಕಿಯಾ’ದಂತಹ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿ ಮನೆ ಮಾತಾಗಿದ್ದ ಮುಖರ್ಜಿ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ನಟ ಮನೋಜ್‌ ಬಾಜಪೇಯಿ ಅವರು ತಿಳಿಸಿದ್ದಾರೆ. 

ಸಮಯಕ್ಕೆ ಬೆಡ್ ಸಿಗದೆ ದೂರವಾದ ಹಿರಿ ಜೀವ, ಕೊನೆ ಕಾಲದಲ್ಲಿಯೂ ಅಣ್ಣಾವ್ರ ಭಜನೆ

ರಜತ್‌ ಮಖರ್ಜಿ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸ್ನೇಹಿತ ರಜತ್‌ ಸುದೀರ್ಘ ಕಾಲ ಅನಾರೋಗ್ಯದ ವಿರುದ್ಧ ಹೋರಾಟ ನಡೆಸಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

ನಿರ್ಮಾಪಕ ಅನಿಶ್‌ ರಾಜನ್‌ ಸೇರಿದಂತೆ ಅನೇಕ ಗಣ್ಯರು ಮುಖರ್ಜಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪತ್ನಿ, ತಾಯಿ, ಸಹೋದರನನ್ನು ಅಗಲಿರುವ ರಜತ್‌ ಮುಖರ್ಜಿ ಅವರಿಗೆ 15 ದಿನಗಳ ಹಿಂದಷ್ಟೇ ಕಿಡ್ನಿಯನ್ನು ತೆಗೆಯಲಾಗಿತ್ತು. ಕೆಲ ದಿನಗಳ ಹಿಂದಷ್ಟೆಮನೆಗೆ ಮರಳಿದ್ದರು ಎಂದು ತಿಳಿಸಿದ್ದಾರೆ.