Asianet Suvarna News Asianet Suvarna News

'ಪುಷ್ಪ' ಪ್ಲಾಫ್ ಸಿನಿಮಾ, ಎಷ್ಟೋ ಪ್ರದರ್ಶಕರಿಗೆ ದೊಡ್ಡ ನಷ್ಟವಾಗಿದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ

ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ಹಿಟ್ ಅಲ್ಲ, ಅಟ್ಟರ್ ಫ್ಲಾಪ್ ಎಂದು ಖ್ಯಾತ ನಿರ್ದೇಶಕ ರೊಬ್ಬರು ಬಹಿರಂಗ ಪಡಿಸಿದ್ದಾರೆ. ತೆಲುಗು ನಿರ್ದೇಶಕ ತೇಜ ಪುಷ್ಪ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು ಸಿನಿಮಾ ಹಿಟ್ ಆಗಿಲ್ಲ, ಹೇಳಿಕೊಳ್ಳುವಷ್ಟು ಕಲೆಕ್ಷನ್ ಕೂಡ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 

Pushpa Was a Flop film and many exhibitors in Andhra had lost money says director Teja sgk
Author
First Published Oct 2, 2022, 2:59 PM IST

ಪುಷ್ಪ, ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಪುಷ್ಪ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲಾ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಪುಷ್ಪ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಬಾಲಿವುಡ್‌ನಲ್ಲಿ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಸುಕುಮಾರ್ ಸಾರಥ್ಯದಲ್ಲಿ ಬಂದ ಪುಷ್ಪ ಸಿನಿಮಾ ಹಿಟ್ ಅಲ್ಲ, ಅಟ್ಟರ್ ಫ್ಲಾಪ್ ಎಂದು ಖ್ಯಾತ ನಿರ್ದೇಶಕ ರೊಬ್ಬರು ಬಹಿರಂಗ ಪಡಿಸಿದ್ದಾರೆ. ತೆಲುಗು ನಿರ್ದೇಶಕ ತೇಜ ಪುಷ್ಪ ಸಿನಿಮಾದ ಕಲೆಕ್ಷನ್ ಬಗ್ಗೆ ಮಾತನಾಡಿದ್ದು ಸಿನಿಮಾ ಹಿಟ್ ಆಗಿಲ್ಲ, ಹೇಳಿಕೊಳ್ಳುವಷ್ಟು ಕಲೆಕ್ಷನ್ ಕೂಡ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 

ನೇರ ನುಡಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ತೇಜ ಅವರು ಪುಷ್ಪ ಸಿನಿಮಾ ಸಂಪೂರ್ಣ ಹಣವನ್ನು ಹಿಂಪಡೆದಿಲ್ಲ. ಆಂಧ್ರ ಪ್ರದೇಶದ ಅನೇಕ ಪ್ರದರ್ಶಕರು ನಷ್ಟ ಅನುಭವಿಸಿದ್ದಾರೆ. ಪುಷ್ಪ ಸಿನಿಮಾದಿಂದ ಹಣಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪುಷ್ಪ ಸಿನಿಮಾ ಹಿಂದಿಯಲ್ಲಿ ಚೆನ್ನಾಗಿ ಓಡಿದೆ ಹಾಗಾಗಿ ಇದನ್ನು ಬ್ಲಾಕ್ ಬಸ್ಟರ್ ಎಂದು ಕರೆಯಲಾಗಿದೆ. ಆದರೆ ತೆಲುಗಿನಲ್ಲಿ ನಷ್ಟ ಅನುಭವಿಸಿದೆ ಎಂದು ಹೇಳಿದರು. 

Pushpa 2; ಸಮಂತಾ ಅಲ್ಲ, ಅಲ್ಲು ಅರ್ಜುನ್ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ ಈ ಖ್ಯಾತ ನಟಿ

ಮಲ್ಟಿಫ್ಲೆಕ್ಸ್ ಗಳ ಬಗ್ಗೆ ಮಾತನಾಡಿದ ತೇಜ ಅವರು, ಮಲ್ಟಿಫ್ಲೆಕ್ಸ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿರುವುದರಿಂದ ಕುಟುಂಬದ ಪ್ರೇಕ್ಷಕರು ಮಲ್ಟಿಫ್ಲೆಕ್ಸ್ ಗಳಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ಆರೋಪ ಮಾಡಿದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತೇಜ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ತೇಜ ಅವರು ಅಭಿರಾಮ್ ದಗ್ಗುಬಾಟಿ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಹಿಂಸ ಎಂದು ಟೈಟಲ್ ಇಡಲಾಗಿದ್ದು ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಲಾಗಿದೆ. ಅಭಿರಾಮ್ ದಗ್ಗುಬಾಟಿ ರಾಣ ದಗ್ಗುಬಾಟಿ ಅವರ ಸಹೋದರ. 

ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಸಾಯಿ ಪಲ್ಲವಿ: ನಿರ್ಮಾಪಕ ಹೇಳಿದ್ದೇನು?

ಇನ್ನು ಪುಷ್ಪ ಸಿನಿಮಾದ ಬಗ್ಗೆ ಹೇಳುವುದಾರೆ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ಸಿನಿಮಾ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಪುಷ್ಪರಾಜ್ ಅನ್ನುವ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಡಿ ಗ್ಲಾಮ್ ಆಗಿ ಮಿಂಚಿದ್ದರು. ಇದೀಗ ಪುಷ್ಪ-2 ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ. ಪುಷ್ಪ ಸಿನಿಮಾದಲ್ಲಿ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಸಮಂತಾ ಡಾನ್ಸ್ ಮತ್ತು ಹಾಗೂ ಹಾಗು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದರೀಗ ಪುಷ್ಪ-2ಗೆ ಮತ್ತೋರ್ವ ಖ್ಯಾತ ನಟಿಯ ಹೆಸರು ಕೇಳಿಬರುತ್ತಿದೆ. ಹೌದು ಪುಷ್ಪ-2ನಲ್ಲಿ ಸೌತ್ ಸುಂದರಿ ಕಾಜಲ್ ಅಗರ್ವಾಲ್ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆ ಕಾಜಲ್ ಡಾನ್ಸ್ ಮಾಡ್ತಾರಾ ಎಂದು ಕಾದುನೇಡಬೇಕು.  ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ಪುಷ್ಪ-2 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಪುಷ್ಪ-2 ತೆರೆಗೆ ಬರುತ್ತಿದೆ.   

Follow Us:
Download App:
  • android
  • ios