Asianet Suvarna News Asianet Suvarna News

Pushpa Movie: ಟ್ರೇಲರ್ ದಿನಾಂಕದ ಜೊತೆಗೆ ವಿಡಿಯೋ ತುಣುಕನ್ನು ಹಂಚಿಕೊಂಡ ಅಲ್ಲು ಅರ್ಜುನ್

ಸುಕುಮಾರ್ ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'ಪುಷ್ಪ' ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

Pushpa Movie trailer release date announced starrer Allu Arjun gvd
Author
Bangalore, First Published Dec 5, 2021, 9:51 PM IST
  • Facebook
  • Twitter
  • Whatsapp

ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹುನಿರೀಕ್ಷಿತ  'ಪುಷ್ಪ' (Pushpa) ಚಿತ್ರದ ಮೊದಲ ಭಾಗವು 'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಹೆಸರಿನಲ್ಲಿ ಡಿಸೆಂಬರ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಈ ಬಗ್ಗೆ ಚಿತ್ರದ ನಾಯಕ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ (Social Media) ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ 'ಪುಷ್ಪ' ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದು, 'ಬಾಹುಬಲಿ' (Bahubali), 'ಕೆಜಿಎಫ್' (KGF) ಹಾದಿಯಲ್ಲಿ ಸಾಗಿರುವ ಚಿತ್ರ 2 ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಟ್ರೇಲರ್‌ನ್ನು ಡಿಸೆಂಬರ್ 6ರಂದು ಬಿಡುಗಡೆ ಮಾಡುವುದಾಗಿ ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಮಾಡಿದ್ದು, ಚಿತ್ರದ ಸಣ್ಣ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 'ಪುಷ್ಪ' ಚಿತ್ರದಲ್ಲಿ ಬರುವ ಪಾತ್ರಗಳನ್ನು ಹೈಲೈಟ್ ಮಾಡಿ ತೋರಿಸಿದ್ದು, ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಮುಖ್ಯವಾಗಿ ಈ ವಿಡಿಯೋವನ್ನು ವೀಕ್ಷಿಸಿದ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡು ಚಿತ್ರಕ್ಕೆ ಶುಭಕೋರಿದ್ದಾರೆ.

pushpa: 'ಏ ಮಗಾ ಇದು ನನ್ನ ಜಾಗ' ಎಂದು ಅಬ್ಬರಿಸಿದ ಅಲ್ಲು ಅರ್ಜುನ್

ವಿಶೇಷವಾಗಿ 'ಪುಷ್ಪ' ಚಿತ್ರದಲ್ಲಿ ಟಾಲಿವುಡ್ ನಟಿ ಸಮಂತಾ (Samantha) ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ್ದು, ಇತ್ತೀಚೆಗೆ ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಹಂಚಿಕೊಂಡಿತ್ತು. 'ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸಮಂತಾ ಪ್ರಭು ದೈತ್ಯಾಕಾರದ ಸೆಟ್‌ನಲ್ಲಿ ಹೆಜ್ಜೆ ಹಾಕಿರುವುದನ್ನು ಚಿತ್ರೀಕರಿಸಲಾಗಿದೆ. ಶೀಘ್ರದಲ್ಲಿಯೇ ಈ ವರ್ಷದ ರಾಕಿಂಗ್ ಹಾಡನ್ನು ನೋಡಲು ಸಿದ್ಧರಾಗಿ' ಎಂದು ಚಿತ್ರತಂಡ ಸಮಂತಾ ಬೆನ್ನು ತೋರಿಸಿ ನಿಂತಿದ್ದು, ನೀಲಿ ಬಣ್ಣದ ಬಟ್ಟೆಯನ್ನು ಧರಿಸಿರುವ ಪೋಸ್ಟರನ್ನು ಶೇರ್ ಮಾಡಿಕೊಂಡಿತ್ತು. 

Pushpa Movie trailer release date announced starrer Allu Arjun gvd

ಈ ಪೆಪ್ಪಿ ಹಾಡಿಗೆ ಗಣೇಶ್ ಆಚಾರ್ಯ (Ganesh Acharya) ಮತ್ತು ದೇವಿ ಶ್ರೀ ಪ್ರಸಾದ್‌ (Devi Sri Prasad) ನೃತ್ಯ ಸಂಯೋಜಿಸಿದ್ದಾರೆ. ಇನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದು, ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದಾರೆ. 

Item Song: 'ಪುಷ್ಪ' ಚಿತ್ರದ ಹಾಡಿಗೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರೆ ಸಮಂತಾ

ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಅಭಿನಯಿಸುತ್ತಿದ್ದು, ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಡಾಲಿ ಧನಂಜಯ್, ಟಾಲಿವುಡ್ ವಿಲನ್ ಜಗಪತಿ ಬಾಬು, ಪ್ರಕಾಶ್ ರಾಜ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಇದೇ ಡಿಸೆಂಬರ್ 17 ರಂದು ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ 'ಪುಷ್ಪ' ತೆರೆಗೆ ಬರಲಿದೆ.
 

Follow Us:
Download App:
  • android
  • ios