ನಟ ಡಾಲಿ ಧನಂಜಯ್ ಅವರು ಡಾಕ್ಟರ್ ಧನ್ಯತಾ ಅವರನ್ನು ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಶಾಸ್ತ್ರವೊಂದರಲ್ಲಿ ಧನಂಜಯ್ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ಚಿತ್ರರಂಗದ ಟಗರು ಸಿನಿಮಾದಲ್ಲಿ ಶಿವಣ್ಣನಿಗೆ ಖಳನಾಯಕನಾಗಿ ನಟಿಸುವ ಮೂಲಕ ಡಾಲಿ ಎಂದೇ ಖ್ಯಾತಿ ಪಡೆದ ನಟ ಧನಂಜಯ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೆ, ಇತ್ತೀಚೆಗೆ ಅವರು ಮೈಸೂರಿನಲ್ಲಿ ಡಾಕ್ಟರ್ ಧನ್ಯತಾ ಅವರನ್ನು ಅದ್ಧೂರಿಯಾಗಿ ಶಾಸ್ತ್ರಬದ್ಧವಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಈ ವೇಳೆ ಡಾಲಿ ಧನಂಜಯ ಅವರು ಶಾಸ್ತ್ರೊಂದರಲ್ಲಿ ನಡೆದುಕೊಂಡಿರುವ ಮುಗ್ದತೆಯನ್ನು ನೋಡಿ ಇಡೀ ದಕ್ಷಿಣ ಭಾರತದ ಚಿತ್ರರಂಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಮುಕ್ತ ಡಾಲಿ ಧನಂಜಯ್ ಅವರನ್ನು ಪುಷ್ಪ ಸಿನಿಮಾದಲ್ಲಿ ವಿಲನ್ ಮಾಡಿದ್ರಲ್ಲಾ ಸುಕುಮಾರ್ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಶಿವಣ್ಣ ಅವರ ಟಗರು ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ನಾಯಕನಾಗಿ ಹೊರ ಹೊಮ್ಮಿದ ಡಾಲಿ ಧನಂಜಯ್, ಪ್ಯಾನ್ ಇಂಡಿಯಾ ಪಟ್ಟದಲ್ಲಿ ಭಾರೀ ಸದ್ದು ಮಾಡಿದ ತೆಲುಗು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾದ ಮೂಲಕ ಭಾರಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಎಷ್ಟು ಸಿಂಪಲ್ ಆಗಿರುವ ವ್ಯಕ್ತಿ ಎಂದು ಕನ್ನಡಿಗರಿಗೆ ಬಿಟ್ಟರೆ ತೆಲುಗು, ತಮಿಳು ಸೇರಿದಂತೆ ಹಿಂದಿ ಭಾಷಿಕರಿಗೆ ಗೊತ್ತಿಲ್ಲ. ಇತ್ತೀಚೆಗೆ ನಟ ಡಾಲಿ ಧನಂಜಯ ಅವರು ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.
ಗೈನಕಾಲಜಿಸ್ಟ್ ಆಗಿರುವ ಡಾಕ್ಟರ್ ಧನ್ಯತಾ ಅವರನ್ನು ಕುಟುಂಬ ಸದಸ್ಯರು, ಸಿನಿಮಾ ಗಣ್ಯರು, ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಧನಂಜಯ್ ಮದುವೆಯಾಗಿದ್ದಾರೆ. ಇವರಿಬ್ಬರ ಪರಿಚಯ ಪ್ರೇಮವಾಗಿ ಬದಲಾಗಿ ಮದುವೆಗೆ ದಾರಿ ಮಾಡಿಕೊಟ್ಟಿದೆ. ಇವರಿಬ್ಬರ ಮದುವೆಯ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ, ಮದುವೆಯಲ್ಲಿ ಒಂದು ತಮಾಷೆಯ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಡಾಲಿ ಧನಂಜಯ್ ಮದುವೆಗೆ ಇವ್ರೆಲ್ಲಾ ಹೋಗಿಲ್ಲ, ಏನೇನು ಕಾರಣ ಅಂತ ಒಮ್ಮೆ ನೋಡ್ಬಿಡಿ..!
ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆಯ ಶಾಸ್ತ್ರವೊಂದರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗಂಡನ ಕಾಲಿಗೆ ಹೆಂಡತಿ ನಮಸ್ಕರಿಸುವುದು ವಾಡಿಕೆ. ಪೂಜಾರಿ ಧನ್ಯತಾರಿಗೆ ಧನಂಜಯ್ ಪಾದಗಳಿಗೆ ನಮಸ್ಕರಿಸಲು ಹೇಳುತ್ತಾರೆ. ಇದರಿಂದ ಧನ್ಯತಾ ಆತನ ಪಾದಗಳನ್ನು ಮುಟ್ಟಲು ಪ್ರಯತ್ನಿಸುತ್ತಾರೆ. ಆದರೆ ಧನಂಜಯ್ ಬೇಡ ಪರವಾಗಿಲ್ಲ ಎಂದು ಹೇಳುತ್ತಾನೆ. ಆಗ ಪೂಜಾರಿ ಕಾಲುಗಳನ್ನು ಮುಂದೆ ಇಡು ನಾನು ನಮಸ್ಕಾರ ಮಾಡುತ್ತೇನೆ ಎಂದು ಧನ್ಯತಾ ಕೇಳಿಕೊಂಡರೂ ಕೇಳುವುದಿಲ್ಲ.
ಕೊನೆಗೆ ಮದುವೆಗೆ ಹಾಜರಿದ್ದ ಎಲ್ಲ ಕುಟುಂಬ ಸದಸ್ಯರು, ಪೂಜಾರಿ ಹೇಳಿದರೂ ಕೇಳದೇ ಕುಳಿತುಕೊಂಡಾಗ ಇದೊಂದು ಸಂಪ್ರದಾಯ ಅಷ್ಟೇ ಎಂದು ಧನ್ಯತಾ ಅವರು ಕೆನ್ನೆ ಮುಟ್ಟಿ ಸನ್ನೆ ಮಾಡುತ್ತಾರೆ. ಆಗ ಧನಂಜಯ ಅವರು ಕಾಲು ಮುಂದೆ ಚಾಚಿ ನಮಸ್ಕರಿಸಲು ಒಪ್ಪಿಕೊಳ್ಳುತ್ತಾನೆ. ನಂತರ, ಧನ್ಯತಾ ತನ್ನ ಪಾದಗಳಿಗೆ ನಮಸ್ಕರಿಸುತ್ತಾನೆ. ಇದಾದ ತಕ್ಷಣ ಧನಂಜಯ್ ಕೂಡಾ ಆಕೆಯ ಪಾದಗಳಿಗೆ ವಾಪಸ್ ನಮಸ್ಕರಿಸುತ್ತಾನೆ. ಈ ದೃಶ್ಯಗಳು ಬಹಳ ಫನ್ನಿಯಾಗಿದ್ದು, ಕ್ಯೂಟ್ ಆಗಿವೆ.
ಇದನ್ನೂ ಓದಿ: ಡಾಲಿಗೆ ಶುಭ ಹಾರೈಸಿದ ನಟ ಶಿವರಾಜ್ ಕುಮಾರ್! #daalidhananjaya #sandalwood #wedding
ಈ ದಿನಗಳಲ್ಲಿ ಇಂತಹ ಜೋಡಿ ಬಹಳ ಅಪರೂಪ ಎಂದು ನೆಟಿಜನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಫನ್ನಿಯಾಗಿ ಧನಂಜಯ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ಮುಗ್ಧನನ್ನು ಸುಕುಮಾರ್ ಪುಷ್ಪ ಚಿತ್ರದಲ್ಲಿ ವಿಲನ್ ಆಗಿ ಹೇಗೆ ತೋರಿಸಿದ್ರಪ್ಪಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
