Asianet Suvarna News Asianet Suvarna News

Pushpa Box Office Collection: 300 ಕೋಟಿ ಕೆಲಕ್ಷನ್, 2021ರ ನಂ.1 ಸಕ್ಸಸ್ ಸಿನಿಮಾ

  • Pushpa Success: ದಾಖಲೆ ಬರೆದ ಪುಷ್ಪಾ ಸಿನಿಮಾ
  • 2021ರಲ್ಲಿ ಅತ್ಯಧಿಕ ಲಾಭ ಗಳಿಸಿದ್ದು ಸೌತ್ ಸಿನಿಮಾ
  • ಅಲ್ಲು-ರಶ್ಮಿಕಾ ಸಿನಿಮಾ ಗಳಿಸಿದ್ದು ಬರೋಬ್ಬರಿ 300 ಕೋಟಿ
Pushpa grosses 300 crore globally Indias biggest earner in 2021 dpl
Author
Bangalore, First Published Jan 4, 2022, 10:52 AM IST

ಸೌತ್‌ನ ಸಕ್ಸಸ್‌ಫುಲ್ ಸಿನಿಮಾ ಪುಷ್ಪಾ(Pushpa) ವಿಮರ್ಶಾತ್ಮಕವಾಗಿ ಹಾಗೂ ಕಲೆಕ್ಷನ್ ವಿಚಾರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಸಿನಿಮಾದಲ್ಲಿ ಡಾಲಿ ಧನಂಜಯ್, ಫಹದ್ ಫಾಸಿಲ್‌ನಂತಹ(Fahad Fasil) ಪ್ರತಿಭಾನ್ವಿತ ನಟರು ನಟಿಸಿದ್ದಾರೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಸಿನಿಮಾ ಗಳಿಸಿದ್ದು ಕೆಲವು ಕೋಟಿಗಳಲ್ಲ, ಭರ್ತಿ 300 ಕೋಟಿ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹ 300 ಕೋಟಿ ಗಳಿಸಿದ್ದು ನಂತರ 2021 ರಲ್ಲಿ ಭಾರತದಲ್ಲಿ  ಅತ್ಯಧಿಕ ಲಾಭ ಗಳಿಸಿದ ಸಿನಿಮಾ ಆಗಿದೆ. ತೆಲುಗು ಭಾಷೆಯ ಆಕ್ಷನ್-ಡ್ರಾಮಾ ಸಿನಿಮಾ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಬಿಡುಗಡೆಯಾಗಿದೆ. 'ಪುಷ್ಪಾ: ದಿ ರೈಸ್' ಸಿನಿಮಾ ಹಿಂದಿ ಭಾಷೆಯಲ್ಲಿ ₹ 70 ಕೋಟಿಗೂ ಹೆಚ್ಚು ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಹಿಂದಿಯಲ್ಲಿ ಯಾವುದೇ ಪ್ರಚಾರವಿಲ್ಲದೆ ಭರ್ಜರಿ ಗಳಿಕೆ ಮಾಡಿದ ಸಿನಿಮಾ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷದ ಸಂಭ್ರಮದ ಮಧ್ಯೆ ಬಾಕ್ಸ್‌ ಆಫೀಸ್‌ನಲ್ಲಿ(Box Office) ಮೂರನೇ ವಾರಾಂತ್ಯದಲ್ಲಿಯೂ ಭರ್ಜರಿ ಗಳಿಕೆ ಹೊಂದಿತ್ತು ಪುಷ್ಪಾ. ಸಿನಿಮಾ ರಿಲೀಸ್ ಆಗಿ ಮೂರನೇ ವಾರಾಂತ್ಯದಲ್ಲಿ 33.75 ಕೋಟಿ ರೂ. ಎರಡನೇ ಚೌಕಟ್ಟಿನಲ್ಲಿ 34.80 ಕೋಟಿ ರೂ ಗಳಿಸಿದೆ. ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಈಗ ಹದಿನೇಳು ದಿನಗಳ ಬಾಕ್ಸ್‌ ಆಫೀಸ್ ರನ್‌ನಲ್ಲಿ 270 ಕೋಟಿ ರೂ ಗಳಿಸಿದೆ.

ಇದುವರೆಗಿನ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಪುಷ್ಪ: ದಿ ರೈಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಹೀಗಿವೆ:

ಒಂದು ವಾರ - ರೂ. 178.75 ಕೋಟಿ ಅಂದಾಜು
ಎರಡು ವಾರ - ರೂ. 57.50 ಕೋಟಿ ಅಂದಾಜು

3 ನೇ ಶುಕ್ರವಾರ - ರೂ. 6 ಕೋಟಿ
3ನೇ ಶನಿವಾರ - ರೂ. 14 ಕೋಟಿ
3ನೇ ಭಾನುವಾರ - ರೂ. 13.75 ಕೋಟಿ

ಒಟ್ಟು - ರೂ. ಅಂದಾಜು 270 ಕೋಟಿ

ಹೊಸ ವರ್ಷದ ದಿನದಂದು ಈ  ಸಿನಿಮಾ ದಕ್ಷಿಣ ಭಾರತದಲ್ಲಿ ಕಲೆಕ್ಷನ್‌ಗಳಲ್ಲಿ ಭಾರಿ ಏರಿಕೆಯನ್ನು ಕಂಡಿತ್ತು. ಆಂಧ್ರಪ್ರದೇಶದಲ್ಲಿ, ಶನಿವಾರದಂದು ಶುಕ್ರವಾರದ ಸಂಖ್ಯೆಗಿಂತ 5-6 ಪಟ್ಟು ಹೆಚ್ಚು ಕೆಲಕ್ಷನ್ ದಾಖಲಿಸಲು ಕೇಂದ್ರಗಳಿವೆ. ಭಾನುವಾರದಂದು, ಈ ಸ್ಥಳಗಳಲ್ಲಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ.

ಬಾಲಿವುಡ್ ನಿರ್ಮಾಪಕರನ್ನೇ ಅಚ್ಚರಿಗೊಳಿಸಿದ ಸಕ್ಸಸ್

ಬಾಲಿವುಡ್ ನಿರ್ದೇಶಕ  ಕರಣ್ ಜೋಹರ್ (Karan Johar) ದಕ್ಷಿಣ ಭಾರತದ (South India) ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ( Allu Arjun)ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪಾ (Pushpa)ಸಿನಿಮಾದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೋನಾ ನಂತರದ ಸಂದರ್ಭದಲ್ಲಿ ಹಿಂದಿ (Bollywood) ಸಿನಿಮಾಗಳೇ ಉತ್ತಮವಾಗಿ ಓಡುತ್ತಿಲ್ಲ. ಆದರೆ ಈ ನಡುವೆ ತೆಲುಗು  ಸಿನಿಮಾಗಳು ಸದ್ದು ಮಾಡುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. 

ಅಲ್ಲು ಅರ್ಜುನ್  ಪುಷ್ಪಾ ಚಿತ್ರದ ಯಶಸ್ಸನ್ನು ಕರಣ್ ಉಲ್ಲೇಖ ಮಾಡಿದರು.  ಕಮರ್ಷಿಯಲ್ ಆಗಿ ತೆಲುಗು ಚಿತ್ರರಂಗ ಸಾಧನೆ  ಮಾಡುತ್ತಿದೆ ಎಂದರು. ವಿಶೇಷ ಪ್ರಮೋಶನ್ ಮಾಡಲಿಲ್ಲ, ಪೋಸ್ಟರ್ ಗಳನ್ನು ಹಂಚಲಿಲ್ಲ ಆದರೂ ಪುಷ್ಪಾ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಕೊಂಡಾಡಿದರು. ಟ್ರೇಲರ್ ಮೂಲಕವೇ  ಚಿತ್ರ ಸದ್ದು ಮಾಡಿತು.  ನೀವು ಈ ಸಿನಾರಿಯೋವನ್ನು ಹಿಂಬಾಲಿಲೇಬೇಕು.  ಇದನ್ನೇ ಪಾನ್ ಇಂಡಿಯಾ ಕ್ರೇಜ್ ಎಂದು ಕರೆಯಬಹುದು ಎಂದಿದ್ದಾರೆ.

Follow Us:
Download App:
  • android
  • ios