Asianet Suvarna News Asianet Suvarna News

Pushpa Box Office Collection: ಮೊದಲ ದಿನವೇ 50 ಕೋಟಿ ಗಳಿಸಿದ ಪುಷ್ಪಾ

Pushpa Box Office Collection: ಸೌತ್‌ನಲ್ಲಿ ಹವಾ ಹೆಚ್ಚಿಸಿದ ಟಾಲಿವುಡ್ ಸಿನಿಮಾ ಪುಷ್ಪಾ ಸಕ್ಸಸ್‌ಫುಲ್ ಆಗಿ ಓಡುತ್ತಿದೆ. ಓಪನಿಂಗ್ ಡೇಯಲ್ಲಿಯೇ 50 ಕೋಟಿ ಗಳಿಸಿದೆ ಅಲ್ಲು-ರಶ್ಮಿಕಾ ಸಿನಿಮಾ

Pushpa box office collection Day 1 Allu Arjun film collects Rs 50 crore on its opening day dpl
Author
Bangalore, First Published Dec 19, 2021, 3:07 PM IST
  • Facebook
  • Twitter
  • Whatsapp

ಸೌತ್‌ನ ಬಹುನಿರೀಕ್ಷಿತ ಸಿನಿಮಾ ಕೊನೆಗೂ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ(Rashmika Mandanna) ಜೋಡಿ ತೆರೆಯ ಮೇಲೆ ಕಮಾಲ್ ಮಾಡಿದ್ದು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲು ಅರ್ಜುನ್‌ ಇಮೇಜ್ ಬದಲಿಸಿದೆ. ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಡಿಫರೆಂಟ್ ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರು ಅಲ್ಲು ಅವತಾರವನ್ನು ಎಸೆಪ್ಟ್ ಮಾಡಿದ್ದಾರೆ. ಡಾಲಿ ಧನಂಜಯ್, ಫಹದ್ ಫಾಸಿಲ್‌ನಂತಹ ಖ್ಯಾತ ನಟರು ;ಲೀಡ್‌ ರೋಲ್‌ನಲ್ಲಿ ನಟಿಸಿದ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ ?

ಡಿಸೆಂಬರ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್‌ಫುಲ್ ಓಪನಿಂಗ್ ಪಡೆದಿದೆ. ವರದಿಗಳ ಪ್ರಕಾರ, ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ ಗಳಿಸಿದೆ. ತಮಿಳುನಾಡಿನಲ್ಲಿ, ಪುಷ್ಪಾ: ದಿ ರೈಸ್ ತನ್ನ ಆರಂಭಿಕ ದಿನದಲ್ಲಿ 4.06 ಕೋಟಿ ಗಳಿಸಿದೆ. ಸುಕುಮಾರ್ ನಿರ್ದೇಶನದ ಪುಷ್ಪಾ ರಕ್ತ ಚಂದನದ ಕಳ್ಳಸಾಗಾಣಿಕೆದಾರ ಪುಷ್ಪಾ ರಾಜ್ ಅವರ ಕಥೆಯನ್ನು ಬಿಚ್ಚಿಡುತ್ತದೆ.

ಮೊದಲ ಭಾಗ, ಪುಷ್ಪ: ದಿ ರೈಸ್, ಸಾರ್ವಜನಿಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಆರಂಭದಲ್ಲಿ, ಚಿತ್ರವನ್ನು ಕ್ರಿಸ್‌ಮಸ್‌ಗೆ ಬಿಡುಗಡೆ ಮಾಡಬೇಕಿತ್ತು ಎನ್ನಲಾಗಿದೆ. ಆದಾರೂ ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ 83 ರೊಂದಿಗೆ ಘರ್ಷಣೆಯನ್ನು ತಪ್ಪಿಸಲು ಚಿತ್ರದ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸ ಮಾಡಲಾಗಿತ್ತು.

ಸಿಕ್ಕಾಪಟ್ಟೆ ಹಾಟ್ ಎಂದ ಕೇರಳ ಫ್ಯಾನ್ಸ್!

ಟ್ರ್ಯಾಕರ್ಸ್ ಪ್ರಕಾರ, ಪುಷ್ಪಾ 50 ಕೋಟಿ ರೂ ಗಳಿಸಿದೆ ಎನ್ನಲಾಗಿದೆ. ಟ್ರೇಡ್ ವಿಶ್ಲೇಷಕ ಎಲ್‌ಎಂ ಕೌಶಿಕ್ ನಿಜಾಮ್‌ನಲ್ಲಿ ರೂ 11.45 ಕೋಟಿ ಸಂಗ್ರಹಿಸಿದೆ ಎಂದು ಬರೆದಿದ್ದಾರೆ. ಅಲ್ಲು ಅರ್ಜುನ್ ಆಲ್ ಟೈಮ್ ರೆಕಾರ್ಡ್ ಅಲರ್ಟ್! @alluarjun #PushpaTheRise ನೊಂದಿಗೆ NIZAM ತೆಲಂಗಾಣದಲ್ಲಿ ಬಾಕ್ಸ್ ಆಫೀಸ್ ಬಿರುಗಾಳಿಯನ್ನು ಸೃಷ್ಟಿಸಿದ್ದಾರೆ. ಇದು 11.45 ರ ಮೊದಲ ಎರಡಂಕಿಯ ಪಾಲನ್ನು ದಾಖಲಿಸಿದೆ. ಪ್ರದೇಶದ ಇತಿಹಾಸದಲ್ಲಿಯೇ 16.5 ಕೋಟಿ ಗಳಿಸಿದೆ ಎಂದಿದ್ದಾರೆ. ತಮಿಳುನಾಡಿನಲ್ಲಿ ಪುಷ್ಪಾ 4.06 ಕೋಟಿ ಕಲೆಕ್ಷನ್ ಮಾಡಿದ್ದರೆ, ಚೆನ್ನೈ ನಗರದಲ್ಲಿ ಚಿತ್ರ 46 ಲಕ್ಷ ರೂ. ಗಳಿಸಿದೆ.

ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಡಿಸೆಂಬರ್ 17 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯ ಎರಡನೇ ಭಾಗವು 2022 ರಲ್ಲಿ ತೆರೆಗೆ ಬರಲಿದೆ. ಶೇಷಾಚಲಂ ಅರಣ್ಯದಲ್ಲಿನ ಕೆಂಪು ಚಂದನದ ಸ್ಮಗ್ಲರ್‌ಗಳ ಜೀವನವನ್ನು ಆಧರಿಸಿದ ಚಿತ್ರ ಇದಾಗಿದೆ. ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.

ಪುಷ್ಪ: ದಿ ರೈಸ್ ಅನ್ನು ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಮಲಯಾಳಂ ಹಾರ್ಥ್ರೋಬ್ ಫಹಾದ್ ಫಾಸಿಲ್ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಪುಷ್ಪಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೂರದ ಭಾಗಗಳಲ್ಲಿ ಕೆಂಪು ಚಂದನದ ಕಳ್ಳಸಾಗಣೆಯ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ.

ಸಿನಿಮಾ ವಿರುದ್ಧ ಕೇಸ್:

ತೆಲುಗು ಸಿನಿಮಾ 'ಪುಷ್ಪ: ದಿ ರೈಸ್' ನಿರ್ಮಾಪಕರು ಭಾನುವಾರ 5,000 ಜನರ ಅನುಮತಿಯನ್ನು ಹೊಂದಿದ್ದ ಚಿತ್ರದ ಪ್ರಿ-ರಿಲೀಸ್ ಸಮಾರಂಭದಲ್ಲಿ 15,000 ಜನರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರದಿಯಲ್ಲಿ, ಇನ್ಸ್‌ಪೆಕ್ಟರ್ ಎಸ್ ರಾಜಶೇಖರ್ ರೆಡ್ಡಿ, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಪಾಸ್‌ಗಳನ್ನು ಹಿಡಿದಿದ್ದರು. ಚಿತ್ರತಂಡ ಪೊಲೀಸರ ದಾರಿ ತಪ್ಪಿಸಿತು. ಪರಿಣಾಮವಾಗಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios