Rashmika Mandanna Bold Look: ಸಿಕ್ಕಾಪಟ್ಟೆ ಹಾಟ್ ಎಂದ ಕೇರಳ ಫ್ಯಾನ್ಸ್!
ಪುಷ್ಪಾ (Pushpa) ಚಿತ್ರದ ಪ್ರಚಾರದ ಭರಾಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅವರ ಕೇರಳ ಕಾರ್ಯಕ್ರಮದ ಲುಕ್ ವೈರಲ್ ಆಗುತ್ತಿದೆ. ಮೊದಲಿಗಿಂತ ತುಸು ಬೋಲ್ಡ್ ಆಗಿಯೇ ಕಾಣಿಸಿಕೊಂಡಿರುವ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.
ಸ್ಟ್ರಿಂಗ್ ಬ್ಲೌಸ್ನೊಂದಿಗೆ ಸುಂದರವಾದ ಕಪ್ಪು ಸ್ಯಾಟಿನ್ ಸೀರೆಯಲ್ಲಿ ಲುಕ್ ತೋರಿಸಿದ ನಟಿ ಸಿಂಪಲ್ ಆಗಿದ್ದರೂ ಹಾಟ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದರು.
ಇದಕ್ಕೂ ಒಂದು ಕೈ ಜಾಸ್ತಿ ಎನ್ನುವಂತೆ ಕೇರಳದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ರಶ್ಮಿಕಾ ಅವರ ಲುಕ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ.
ನಾಯಕ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಸಿನಿಮಾದ ವಿಶೇಷಗಳನ್ನು ತೆರೆದಿಟ್ಟರು.
Rashmika Mandanna Saree Style: ಸಿಂಪಲ್ ಸೀರೆಯಲ್ಲಿ ಕಿರಿಕ್ ಚೆಲುವೆ..! ಮೋಹಕ ಲುಕ್
ಈ ವೇಳೆ ಮಾತನಾಡಿದ ರಶ್ಮಿಕಾ ನಾನು ಕೊಡಗಿನವಳು ಅಂದರೆ ನಿಮ್ಮ ನೆರೆಯ ಊರಿನವಳು ಎಂದು ಕೇರಳದವರ ಮನಸಿಗೆ ಲಗ್ಗೆ ಹಾಕುವ ಕೆಲಸ ಮಾಡಿದರು. ಪುಷ್ಪಾ ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡವನ್ನು ಕಡೆಗಳಿಸಲಾಗಿದೆ ಎನ್ನುವ ಆರೋಪಗಳು ಸಹ ಬಂದಿವೆ. ಚಿತ್ರಕ್ಕೆ ಯಾವ ರೀತಿ ಓಪನಿಂಗ್ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬೇರೆ ಭಾಷೆಗಳಯತ್ತ ಹೋದ ಮೇಲೆ ನನಗೆ ಕನ್ನಡವೇ ಕಷ್ಟವಾಗುತ್ತಿದೆ ಎಂದು ನಟಿ ಹೇಳಿದ್ದು ಕನ್ನಡಿಗರನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಅತಿ ಹೆಚ್ಚಿನ ಟ್ರೋಲ್ ಗೂ ಗುರಿಯಾಗಿದ್ದರು.
Risks Major Wardrobe Malfunction : ಕಾಣಬಾರದ್ದನ್ನು ಕಾಣಿಸಿ ಟ್ರೋಲಿಗರ ಕೈಗೆ ಸಿಕ್ಕಿದ್ದ ಪಾಯಲ್ ಗೆ ಮುಗಿಯದ ಕಾಟ!
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಟಿ ನಂತರ ತೆಲುಗು ಕಡೆ ಹೋದರು. ಅಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ.
ದಕ್ಷಿಣದ ಸುಂದರಿ ರಶ್ಮಿಕಾ ಮಂದಣ್ಣ ಸಿನಿಮಾ ಪುಷ್ಪ ದಿ ರೈಸ್ನ ಪ್ರೀ-ರಿಲೀಸ್ ಈವೆಂಟ್ನಲ್ಲಿ ಸಖತ್ ಬ್ಲಾಕ್ ಸೀರೆಯಲ್ಲಿ ಮಿಂಚಿದ್ದರು. ಬೆಂಗಳೂರಿನ ಕಾರ್ಯಕ್ರಮ ದೊಡ್ಡ ಸುದ್ದಿಯಾಗಿತ್ತು.
Pushpa Bangalore Press meet: ತೆಲುಗು ಮಾತಾಡಿ ಕನ್ನಡನೇ ಬರ್ತಿಲ್ಲ ಎಂದ ರಶ್ಮಿಕಾ