Asianet Suvarna News Asianet Suvarna News

ಜೇಮ್ಸ್ ಕ್ಯಾಮೆರಾನ್ 'ಅವತಾರ್-2'ಗು ಅಲ್ಲುಅರ್ಜುನ್ 'ಪುಷ್ಪ-2'ಗೂ ಇದೆ ಲಿಂಕ್; ಏನದು?

ಅವತಾರ್-2ಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾಗೂ ಲಿಂಕ್ ಇದೆ ಎನ್ನುವ ಸುದ್ದಿ ವೈರಲ್ ಆಗಿದೆ. 

pushpa 2 Teaser likely to be Attached to Avatar 2 Film sgk
Author
First Published Nov 13, 2022, 1:38 PM IST

ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ನಿರ್ದೇಶನ ಅವತಾರ್-2 ರಿಲೀಸ್‌ಗೆ ಸಜ್ಜಾಗಿದೆ. ಅವತಾರ್-2 ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಅವತಾರ್-2 ಸಿನಿಮಾ ಡಿಸೆಂಬರ್ 16ರಂದು ರಿಲೀಸ್ ಆಗುತ್ತಿದೆ. ಅಂದಹಾಗೆ ಅವತಾರ್-2 ಭಾರತದ ಅನೇಕ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಅವತಾರ್-2 ಬಿಡುಗಡೆಯಾಗುತ್ತಿದೆ. ಈ ಮೊದಲು ಅವತಾರ್-2 ಕನ್ನಡದಲ್ಲಿ ಬರಲು ಸಜ್ಜಾಗಿರಲಿಲ್ಲ. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಅವತಾರ್-2 ಕನ್ನಡಲ್ಲೂ ಬರ್ತಿದೆ. ಇದೀಗ ಅವತಾರ್-2 ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಹಾಲಿವುಡ್ ಅವತಾರ್-2 ಹಾಗೂ ಅಲ್ಲು ಅರ್ಜುನ್ ಪುಷ್ಪ-2ಗೂ ಲಿಂಕ್ ಇದೆ ಎನ್ನಲಾಗಿದೆ. 

ಅವತಾರ್-2ಗೂ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾಗೂ ಲಿಂಕ್ ಇದಿಯಾ ಅಂತ ಅಚ್ಚರಿ ಪಡುತ್ತಿದ್ದೀರಾ? ಅವತಾರ್-2 ಸಿನಿಮಾ ಜೊತೆ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾದ ಟೀಸರ್ ಕೂಡ ಪ್ರಸಾರವಾಗುತ್ತಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಹೌದು ಹಾಲಿವುಡ್ ಸಿನಿಮಾ ಜೊತೆಗೆ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದ ಟೀಸರ್ ನೋಡುವ ಅವಕಾಶ ಕೂಡ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿಗಲಿದೆ. ಈ ಮೂಲಕ ಪುಷ್ಪ-2 ಟೀಸರ್ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನು ಅಧಿಕೃತ ಮಾಹಿತಿ ರಿವೀಲ್ ಮಾಡಿಲ್ಲ.

Pushpa2ಅಲ್ಲು ಅರ್ಜುನ್ ಇಲ್ಲದೇ ‘ಪುಷ್ಪ-2’ ಶೂಟಿಂಗ್ ಶುರು: ಕಾರಣ ಏನು ಗೊತ್ತಾ?

ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಶೂಟಿಂಗ್ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದ್ದು ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ನಲ್ಲಿ ಪುಷ್ಪ-2 ಸಿನಿಮಾದ ಶೂಟಿಂಗ್ ನಡೆಯುತ್ತಿದೆ ಎಂದು ವರದಿಯಾಗಿದೆ. ಅಂದಹಾಗೆ ಈ ಮೊದಲು ಪುಷ್ಪ-2 ಸಿನಿಮಾದ ಶೂಟಿಂಗ್ ಬ್ಯಾಂಕಾಕ್ ಅರಣ್ಯದಲ್ಲಿ ನಡೆಯಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಪುಷ್ಪ-2 ತಂಡ ವಿದೇಶಿ ಚಿತ್ರೀಕರಣವನ್ನು ರದ್ದು ಮಾಡಿ ಹೈದರಾಬಾದ್‌ನಲ್ಲಿ ನಡೆಸುತ್ತಿದೆ. 

ಕನ್ನಡದಲ್ಲೂ ರಿಲೀಸ್ ಆಗಲಿದೆ 'ಅವತಾರ್ -2': ಕನ್ನಡಿಗರ ಆಕ್ರೋಶಕ್ಕೆ ಮಣಿದ ಚಿತ್ರತಂಡ

ಸದ್ಯ ಅಲ್ಲು ಅರ್ಜುನ್ ವಿದೇಶಿ ಪ್ರವಾಸದಿಂದ ವಾಪಾಸ್ ಆಗಿದ್ದು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಬ್ಯಾಂಕಾಕ್ ಹೊರಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಮೈತ್ರಿ ಮೂವೀಸ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಮೊದಲ ಭಾಗ ಸೂಪರ್ ಸಕ್ಸಸ್ ಆದ ಕಾರಣ 2ನೇ ಭಾಗದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಚಿತ್ರದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಕೂಡ ನಾಟಿಸುತ್ತಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಕಾಣಿಸಿಕೊಂಡಿದ್ದ ಫಹಾದ್ 2ನೇ ಭಾಗದಲ್ಲಿ  ಸಂಪೂರ್ಣವಾಗಿ ಇರಲಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.  

Follow Us:
Download App:
  • android
  • ios