ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ನಿರ್ದೇಶಕ ಸುಕುಮಾರ್ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. 

'ಪುಷ್ಪ' ಪ್ಯಾನ್ ಇಂಡಿಯಾ ಸಿನಿಮಾವಾಗಿ ಯಶಸ್ವಿಯಾದ ನಂತರ ಇದೀಗ ಅದರ ಸ್ವಿಕೆಲ್ ಬರುತ್ತಿದ್ದು, ನಿರ್ದೆಶಕ ಸುಕುಮಾರ್ ಪುಷ್ಪ 2(pushpa 2) ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ‌. ಆದರೆ ಟ್ವಿಸ್ಟ್ ಏನೆಂದರೆ ನಟ ಅಲ್ಲು ಅರ್ಜುನ್(allu arjun) ಇಲ್ಲದೇ ಸಿನಿಮಾ ಶೂಟಿಂಗ್ ಶುರುವಾಗಿದೆ. ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ರೆಡ್ಡಿ(sneha reddy) ಮತ್ತು ಮಕ್ಕಳೊಂದಿಗೆ ಸ್ನೇಹಿತರೊಬ್ಬರ ಮದುವೆಗಾಗಿ ಹೈದರಾಬಾದ್‌(hyderabad)ನಿಂದ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದು, 4-5 ದಿನಗಳಲ್ಲಿ ವಾಪಸ್ ಬರಲಿದ್ದಾರೆ. 

Add Asianetnews Kannada as a Preferred SourcegooglePreferred

ಸುಕುಮಾರ್(sukumar) ಈಗ ಆರ್‌ಎಫ್‌ಸಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌(set)ನಲ್ಲಿ ಪುಷ್ಪ 2 ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಕೆಲವು ಪಾತ್ರ ಕಲಾವಿದರು ಮತ್ತು ಇತರ ಪ್ರಮುಖ ನಟರನ್ನು ಒಳಗೊಂಡ ದೃಶ್ಯ(scene)ಗಳನ್ನು ಇಲ್ಲಿ ಚಿತ್ರೀಕರಿಸಲಾಗುತ್ತಿದೆ.

ಅಲ್ಲು ಅರ್ಜುನ್(allu arjun)ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಚಿತ್ರೀಕರಣದಲ್ಲಿ(shooting)ಭಾಗಿಯಾಗಲಿದ್ದಾರೆ. ಸೆಟ್‌ಗೆ ಹೋಗಲು ಬಹಳ ಸಮಯದಿಂದ ಕಾಯುತ್ತಿದ್ದರಿಂದ ಇಡೀ ತಂಡವು ಚಿತ್ರೀಕರಣದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿದ ನಂತರ ತಂಡವು ಪ್ರಮುಖ ಅರಣ್ಯ (forest)ದೃಶ್ಯಗಳ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್ ಮತ್ತು ಚೀನಾಕ್ಕೆ ಹಾರುವ ಸಾಧ್ಯತೆಯಿದೆ.

ಸಿನಿಮಾದ ಮೊದಲ ಭಾಗದಲ್ಲಿ ಸುಕುಮಾರ್ ಬ್ಯಾಂಕಾಕ್ (bangkok)ಕಾಡುಗಳಲ್ಲಿ ಚಿತ್ರೀಕರಣ ಮಾಡಲು ಬಯಸಿದ್ದರು. ಆದರೆ ಕೋವಿಡ್ ಕಾರಣ, ಆಂಧ್ರಪ್ರದೇಶ(andhra pradesh)ದ ಮರೆಡುಮಿಲ್ಲಿಯಲ್ಲಿ ಚಿತ್ರೀಕರಿಸಿದ್ದರು. ಆದರೆ ಈಗ ಅವರು ಕೆಲವು ಆಕ್ಷನ್(action)ಸೀಕ್ವೆನ್ಸ್‌ಗಳನ್ನು ಚಿತ್ರಿಸಲು ಚೀನಾ ಮತ್ತು ಬ್ಯಾಂಕಾಕ್‌ನ ಕಾಡುಗಳಿಗೆ ಹೋಗಲಿದ್ದಾರೆ.