ಸ್ಟಾರ್ ಸುವರ್ಣ 'ಜಾಕ್‌ಪಾಟ್'ಕಾಂಟೆಸ್ಟ್ ನಲ್ಲಿ ಭಾರೀ ಬಹುಮಾನ ಗೆದ್ದ ಹಾಸನದ ಮಹಿಳೆ

ಗ್ರಾಂಡ್ ಓಪನಿಂಗ್ ಸಂಚಿಕೆಯ ಕೊನೆಯಲ್ಲಿ ವಾಹಿನಿ ಕೇಳಿರುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಹಾಸನ ಜಿಲ್ಲೆಯ ಶ್ರೀಮತಿ ಮಲ್ಲಿಕಾ ಎಂಬವರು ವಿಜೇತರಾಗಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ  ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ಗೆದ್ದಿದ್ದಾರೆ. 

Hassan Mallika wins star suvarna jackpot reality show contest srb

ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಹೀಗಾಗಿ ನೋಡುಗರಿಗೆ ಇನ್ನಷ್ಟು ಮನೋರಂಜನೆ ನೀಡಲು ಶುರುಮಾಡಿದ ವಿಭಿನ್ನ ಕಾನ್ಸೆಪ್ಟ್ ನ  ಹೊಚ್ಚ ಹೊಸ ಸೆಲೆಬ್ರಿಟಿ ಗೇಮ್ ಶೋ "ಸುವರ್ಣ Jackpot". ಜೊತೆಗೆ ವೀಕ್ಷಕರಿಗೆ ಗೋಲ್ಡನ್ ನಂಬರ್ ಕಾಂಟೆಸ್ಟ್ ನಲ್ಲಿ ಭಾಗವಹಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶವನ್ನು ನೀಡಿತ್ತು. 

ಹೀಗಾಗಿ ಗ್ರಾಂಡ್ ಓಪನಿಂಗ್ ಸಂಚಿಕೆಯ ಕೊನೆಯಲ್ಲಿ ವಾಹಿನಿ ಕೇಳಿರುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಹಾಸನ ಜಿಲ್ಲೆಯ ಶ್ರೀಮತಿ ಮಲ್ಲಿಕಾ ಎಂಬವರು ವಿಜೇತರಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಏರ್ ಕೂಲರ್, ಮಿಕ್ಸರ್ ಗ್ರೈಂಡರ್, ಫ್ಯಾನ್, ಹೋಂ ಥಿಯೇಟರ್, ಓವನ್, ಮೊಬೈಲ್, ಟ್ಯಾಬ್, ವ್ಯಾಕ್ಯೂಮ್ ಕ್ಲೀನರ್ ಈ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ಗೆದ್ದಿದ್ದಾರೆ. 

ಪವಾಡಗಳು ಸಂಭವಿಸುತ್ತವೆ, ನಾನು ಲೆಜೆಂಡ್ ಆಗುವುದಕ್ಕೆ ಅದೇ ಕಾರಣ; ಸೂಪರ್ ಸ್ಟಾರ್ ನಟ ರಜನಿಕಾಂತ್
.
ಇದೀಗ ಸ್ಟಾರ್ ಸುವರ್ಣ ವಾಹಿನಿಯು ಈ ಕಾಂಟೆಸ್ಟ್ ನ ಮಿಸ್ ಮಾಡಿಕೊಂಡವರಿಗೆ  ಮತ್ತೊಂದು ಸುವರ್ಣಾವಕಾಶ ನೀಡಲು ಸಜ್ಜಾಗಿದೆ. ಇದೇ ಭಾನುವಾರ (3/12/2023) ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ "ಸುವರ್ಣ Jackpot" ಸಂಚಿಕೆಯನ್ನು ತಪ್ಪದೇ ವೀಕ್ಷಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ. ಅದೃಷ್ಟದ ಬಾಗಿಲು ತೆರೆದು ಯಾರು ಜಾಕ್ ಪಾಟ್ ಹೊಡೆಯುತ್ತಾರೆ ಎಂಬುದನ್ನು ನೋಡಬೇಕು.

ಜೀವನ, ಹೋರಾಟದ ಬಗ್ಗೆ ಅಮಿತಾಭ್ ಬಚ್ಚನ್ ಹೀಗೆಲ್ಲಾ ಮಾತಾಡ್ತಾ ಇದ್ದಾರೆ ನೋಡಿ!

ಅಂದಹಾಗೆ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜಾಕ್‌ಪಟ್ ಶೋವನ್ನು ನಟಿ, ನಿರೂಪಕಿ ಅನುಪಮಾ ಗೌಡ ಅವರು ಹೋಸ್ಟ್ ಮಾಡುತ್ತಿದ್ದಾರೆ. ಈ ಶೋದಲ್ಲಿ ಬಹಳಷ್ಟು ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ. ಗ್ರಾಂಡ್‌ ಶೋ ಇದಾಗಿದ್ದು, ಇನ್ಮುಂದೆ ಬಹಳಷ್ಟು ಸೆಲೆಬ್ರಟಿಗಳು ಭಾಗವಗಿಸಲಿದ್ದಾರೆ. ಪ್ರತರಿ ಸಂಚಿಕೆಯಲ್ಲಿ ಹೊಸತನ ನೀಡಲಿರುವುದಾಗಿ ಜಾಕ್‌ಪಾಟ್ ಶೋ ಪ್ರಸಾರ ಮಾಡುತ್ತಿರುವ ಸುವರ್ಣ ವಾಹಿನಿ ಹೇಳಿಕೊಂಡಿದೆ. ಇತ್ತೀಚೆಗಷ್ಟೇ ಶುರುವಾಗಿರುವ ಈ ರಿಯಾಲಿಟಿ ಶೋ, ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. 

Latest Videos
Follow Us:
Download App:
  • android
  • ios