Asianet Suvarna News Asianet Suvarna News

ಚೂಡಿದಾರ್ ಧರಿಸಿ ಕೇನ್ಸ್ ಫೆಸ್ಟಿವಲ್​ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪಂಜಾಬಿ ಗಾಯಕಿ: ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಕೇನ್ಸ್ ಚಲನಚಿತ್ರೋತ್ಸವ ಅಂದರೆ ಅಲ್ಲಿ ಪಾಶ್ಚಿಮಾತ್ಯ ಧಿರಿಸಿಗೆ ಪ್ರಾಮುಖ್ಯತೆ ಜಾಸ್ತಿ, ಆದರೆ ಇದೆಲ್ಲಾ ಸ್ಟಿರಿಯೋ ಟೈಪ್ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಹೊಸ ಇತಿಹಾಸ ಬರೆದಿದ್ದಾರೆ ಪಂಜಾಬ್ ಗಾಯಕಿ ಸುನಂದಾ ಶರ್ಮಾ. 

Punjabi singer Sunanda Sharma stepped on red carpet of Cannes festival wearing chudidar gets huge appreciation from netizens akb
Author
First Published May 21, 2024, 12:01 PM IST

ನವದೆಹಲಿ: ಕೇನ್ಸ್ ಚಲನಚಿತ್ರೋತ್ಸವ ಅಂದರೆ ಅಲ್ಲಿ ದೇಶ ವಿದೇಶಗಳ ವಿವಿಧ ಭಾಷೆಗಳ ಸಿನಿಮಾ ನಟ ನಟಿಯರು ನಿರ್ದೇಶಕರು, ಉದ್ಯಮಿಗಳು ಭಾಗಿಯಾಗುತ್ತಾರೆ.  ಇಲ್ಲಿ ತಮ್ಮ ವಿಶಿಷ್ಠವಾದ ಧಿರಿಸಿನಿಂದಲೇ ಎಲ್ಲರೂ ನೆರೆದಿದ್ದವರ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಎಲ್ಲರಿಗಿಂತ ತಮ್ಮ ಧಿರಿಸು ಉತ್ತಮವಾಗಿರಬೇಕು ಎಂದು ಈ ಚಿತ್ರೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಬಯಸುತ್ತಾರೆ. ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಬಹುತೇಕ ಭಾರತೀಯ ನಟ ನಟಿಯರು ನಮ್ಮ ಭಾರತೀಯ ಧಿರಿಸಿಗಿಂತ ವಿದೇಶಿ ಪ್ರಾಮುಖ್ಯದ ಭುಜ ತೋರಿಸುವ ಲಾಂಗ್ ಗವನ್ ಅನ್ನೇ ತೊಡುವುದು ಹೆಚ್ಚು. ಸೀರೆ, ಚೂಡಿದಾರ್, ಲಂಗದಾವಣಿ ಮುಂತಾದ ಭಾರತೀಯ ಧಿರಿಸನ್ನು ಕೇನ್ಸ್‌ನಂತಹ ಚಲನಚಿತ್ರೋತ್ಸವದಲ್ಲಿ ನೋಡುವುದನ್ನು ಕೆಲವರು ಊಹೆಯೂ ಮಾಡುವುದಿಲ್ಲ, ಆದರೆ ಇದೆಲ್ಲಾ ಸ್ಟಿರಿಯೋ ಟೈಪ್ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಹೊಸ ಇತಿಹಾಸ ಬರೆದಿದ್ದಾರೆ ಪಂಜಾಬ್ ಗಾಯಕಿ ಸುನಂದಾ ಶರ್ಮಾ. 

ಹೌದು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಚೂಡಿದಾರ್( ಸಲ್ವಾರ್ ಕಮೀಜ್) ಧರಿಸುವ ಮೂಲಕ ಪಂಜಾಬಿ ಮೂಲದ 32 ವರ್ಷದ ಗಾಯಕಿ ಸುನಂದಾ ಶರ್ಮಾ ಎಲ್ಲರ ಕತ್ತು ತಮ್ಮತ್ತ ತಿರುಗಿಸುವಂತೆ ಮಾಡುವ ಜೊತೆಗೆ ಹೊಸ ಇತಿಹಾಸ ಬರೆದಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಕೇನ್ಸ್ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ  ಸುನಂದಾ ಅವರು ಸಂಪ್ರದಾಯಿಕ ಚೂಡಿಧಾರ್ ಧರಿಸಿ ತಮ್ಮತನವನ್ನು ಎಲ್ಲೂ ಬಿಟ್ಟುಕೊಡದೇ ರಾಣಿಯಂತೆ ಮೆರೆದಿದ್ದಾರೆ. ದಂತದ ಬಣ್ಣದ ಚೂಡಿದಾರ್ ಧರಿಸಿದ್ದ ಅವರು ಅದಕ್ಕೆ ದುಪಟ್ಟವನ್ನು ಹಾಕಿ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಗೊಂಬೆಯಂತೆ ಹೆಜ್ಜೆ ಇಟ್ಟಿದ್ದಾರೆ.

ಕೇನ್ಸ್ ಫೆಸ್ಟಿವಲ್​ನಲ್ಲಿ ವೇಶ್ಯೆ ಪಾತ್ರಧಾರಿ ಶೋಭಿತಾ: ಗೋಲ್ಡನ್​ ಡ್ರೆಸ್​ನಲ್ಲಿ ಮತ್ಸ್ಯಕನ್ಯೆಯಂತೆ ಕಂಡ ನಟಿ

ಇದರ ಜೊತೆಗೆ ಅವರು ಭಾರತೀಯ ನಾರಿಯನ್ನು ಪ್ರತಿನಿಧಿಸುವಂತೆ ನೆತ್ತಿ ಬೊಟ್ಟು (maang tikka) ಮೂಗಿಗೆ ನತ್ತು ಧರಿಸಿ ಎಲ್ಲರ ಗಮನ ಸೆಳೆದಿದ್ದು, ಸುನಂದಾ ಅವರ ಈ ದಿಟ್ಟ ನಿರ್ಧಾರಕ್ಕೆ ಈಗ ಎಲ್ಲೆಡೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.  ಕೇನ್ಸ್‌ ಚಲನಚಿತ್ರೋತ್ಸವ ಅಂದರೆ ಸುಮ್ಮನೆ ಅಲ್ಲ, ಭಾರತದ ಐಶ್ವರ್ಯಾ ರೈ ಸೇರಿದಂತೆ ವಿವಿಧ ದೇಶಗಳ ಗಣ್ಯರು ತ್ಮಮ ಅತಿರಂಜಿತ ಗೌನ್‌ಗಳು ಮತ್ತು ಮಿನುಗುವ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇಲ್ಲಿ ಪಾಶ್ಚಿಮಾತ್ಯ ಶೈಲಿಯ ಧಿರಿಸಿಗೆ ಪ್ರಾಮುಖ್ಯತೆ ಹೆಚ್ಚು ಹೀಗಿರುವಾಗ ಇಲ್ಲಿ ಶರ್ಮಾ ಅವರು ಸೊಗಸಾದ ದಂತದ ಬಣ್ಣದ ಸೂಟ್ ಧರಿಸಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದು, ಭಾರಿ ಪ್ರಶಂಸೆಗೆ ಪಾತ್ರವಾಗಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಗ್ಲ ಮಾಧ್ಯಮವೊಂದು ಅವರ ಪ್ರತಿಕ್ರಿಯೆ ಕೇಳಿದ್ದು, ಈ ವೇಳೆ ಫೋನ್ ಮೂಲಕ ಮಾತನಾಡಿದ ಅವರು, 
ಕೇನ್ಸ್‌ನಲ್ಲಿ ಸಾಂಪ್ರದಾಯಿಕ ಸೂಟ್ ಧರಿಸಲು ಬಯಸಿದ ನನ್ನ ಈ ನಿರ್ಧಾರವು ಎಲ್ಲಾ ಪಂಜಾಬಿಗಳಿಗೆ ಮತ್ತು ನಮ್ಮ ದೇಶದವರಿಗೆ ನೀಡಿದ ಗೌರವವಾಗಿದೆ, ಅವರು ತಮ್ಮ ಗುರುತನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಕೇನ್ಸ್‌ಗೆ ಹಾಜರಾಗಲು ನನಗೆ ಆಹ್ವಾನ ಬಂದಾಗ ಸೂಟ್ ಹೊರತುಪಡಿಸಿ ಯಾವುದೇ ಗೌನ್ ಅಥವಾ ಯಾವುದೇ ಪಾಶ್ಚಿಮಾತ್ಯ ಧಿರಿಸು ಧರಿಸುವ ಬಗ್ಗೆ ನನ್ನ ಮನಸ್ಸಿಗೆ ಬರಲಿಲ್ಲ ಎಂದು ಅವರು ಹೇಳಿದರು.

Cannes 2024: ಕೈ ಮುರ್ಕೊಂಡ್ರೂ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ರೈ ಮಾರ್ಜಾಲ ನಡಿಗೆ

ಪಂಜಾಬ್‌ನ ಗಡಿ ಜಿಲ್ಲೆ ಗುರುದಾಸ್‌ಪುರದ ಸಣ್ಣ ಪಟ್ಟಣವಾದ ಫತೇಘರ್‌ನ ಚುರಿಯನ್‌ ಮೂಲದವರಾದ ಶರ್ಮಾ ಅವರು, ಕ್ಯಾನೆಸ್‌ನಲ್ಲಿನ ತನ್ನ ಧಿರಿಸು ಉದ್ದನೆಯ ಕತ್ತಿನ ಹಂಸದ ಲುಕ್‌ನಿಂದ ಪ್ರೇರಿತವಾಗಿದೆ ಎಂದು ಹೇಳಿದರು. ಈ ಬಿಳಿ ಸೂಟ್ ಧರಿಸಲು ಸ್ಫೂರ್ತಿ ಸುಂದರವಾದ ಬರ್ಡ್ ಹ್ಯಾನ್ಸ್ (ಹಂಸ) ನಿಂದ ಬಂದಿದೆ ಎಂದು ಅವರು ಹೇಳಿದ್ದಾರೆ. 

ಇನ್ನು ಸುನಂದಾ ಶರ್ಮಾ ಅವರ ಸಂಗೀತಾ ಸಾಧನೆ ಬಗ್ಗೆ ಹೇಳುವುದಾದರೆ,  ಅವರು ಸ್ಯಾಂಡಲ್, ಬಿಲ್ಲಿ ಆಖ್, ತೇರೆ ನಾಲ್ ನಾಚ್ನಾ ಸೇರಿದಂತೆ ಹಲವು ಫೇಮಸ್ ಹಾಡುಗಳಿಗೆ ದನಿ ನೀಡಿದ್ದಾರೆ. ಪಂಜಾಬಿ ಮಹಿಳೆಯರ ಸರಳತೆ ಮತ್ತು ಸೌಂದರ್ಯವನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸುವುದು ತನ್ನ ಉದ್ದೇಶವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಈ ಲುಕ್‌ಗಾಗಿ ನಾನು ಯಾವುದೇ ವಿಶಿಷ್ಠ ಪ್ರಯತ್ನ ಮಾಡಿಲ್ಲ, ನಾನು ಅಥವಾ ಯಾವುದೇ ಪಂಜಾಬಿ ಮಹಿಳೆ ವಿಶೇಷ ಸಂದರ್ಭದಲ್ಲಿ ಹೀಗೆಯೇ ರೆಡಿ ಆಗ್ತಾರೆ ಎಂದು ಶರ್ಮಾ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios