Asianet Suvarna News Asianet Suvarna News

'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ಆಕ್ರೋಶ, ಬ್ಯಾನ್‌ಗೆ ಹೆಚ್ಚಿದ ಒತ್ತಾಯ; ಅಂತದ್ದೇನಿದೆ ಈ ಚಿತ್ರದಲ್ಲಿ?

ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದ ವಿವಾದ ಹುಟ್ಟುಹಾಕಿದೆ. ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಇದೀಗ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. 

Producer Vipul Shah reacts to controversy of The Kerala Story sgk
Author
First Published Dec 27, 2022, 2:35 PM IST

ದಿ ಕೇರಳ ಸ್ಟೋರಿ ಸಿನಿಮಾ ದೊಡ್ಡ ಮಟ್ಟದ ವಿವಾದ ಹುಟ್ಟುಹಾಕಿದೆ. ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಚಿತ್ರದ ವಿರುದ್ಧ ಆಕ್ರೋಶ ಕೇಳಿ ಬರುತ್ತಿದೆ. ಈ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್‌ಗೆ ಅನುಮತಿ ಕೊಡಬಾರದು ಎಂದು ಕೇರಳ ಸಿಮಂ‌ಗೆ ಪತ್ರ ಕೂಡ ಬರೆಯಲಾಗಿದೆ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ನಟಿ ಅದಾ ಶರ್ಮಾ ಬುರ್ಕ ಧರಿಸಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಅಷ್ಟಕ್ಕೂ ವಿವಾದ ಸೃಷ್ಟಿಸಲು ಕಾರಣವಾಗಿದ್ದು ಯಾಕೆ ಅಂತೀರಾ?, ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂದು ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾ ವಿರುದ್ಧ ಕೇರಳದ ಅನೇಕ ಮಂದಿ ಕಿಡಿ ಕಾರುತ್ತಿದ್ದು ಇದು ಸುಳ್ಳು, ಆಧಾರ ರಹಿತವಾಗಿ ಸಿನಿಮಾ ಮಾಡಲಾಗಿದೆ ಎನ್ನುತ್ತಿದ್ದಾರೆ. 

ಟೀಸರ್‌ನಲ್ಲಿ ಅದಾ ಶರ್ಮಾ ಬುರ್ಕ ಧರಿಸಿದ್ದಾರೆ. ಶಾಲಿನಿ ಉನ್ನಿಕೃಷ್ಣನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಈಗ ನಾನು ಫಾತಿಮಾ ಬಾ, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಐಎಸ್ ಭಯೋತ್ಪಾದಕಿ' ಎಂದು ಹೇಳುತ್ತಾರೆ. '32,000 ಹುಡುಗಿಯರು ಸಹ ತನ್ನಂತೆ ಐಸ್‌ಗೆ ನೇಮಕಗೊಂಡು ಮತಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಈ ಸಿನಿಮಾದ ವಿರುದ್ಧ ಕೇರಳದ ಕೆಲವು ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪತ್ರಕರ್ತರೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದು ಈ ಬಗ್ಗೆ ತನಿಖೆ ಮಾಡಬೇಕೆಂದು ಕೋರಿದ್ದಾರೆ. 

ಪತ್ನಿಗೆ ದುಲ್ಕರ್ ಸ್ವೀಟ್ ವಿಶ್; ಬಿಳಿ ಕೂದಲು, ಮಗಳ ಸ್ಕೂಲ್‌, ಹೊಸ ಮನೆ....ವೈರಲ್ ಪೋಸ್ಟ್‌

ಅಂದಹಾಗೆ ದಿ ಕೇರಳ ಸ್ಟೋರಿ ಸಿನಿಮಾಗೆ ಸುದೇಪ್ತೊ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ವಿಪುಲ್ ಅಮೃತ್‌ಲಾಲ್ ಷಾ ಬಂಡವಾಳ ಹೂಡಿದ್ದಾರೆ. ವಿವಾದ ದೊಡ್ಡದಾಗುತ್ತಿದ್ದಂತೆ ಸಿನಿಮಾದ ನಿರ್ಮಾಪಕ ವಿಪುಲ್ ಪ್ರತಿಕ್ರಿಯೆ ಮಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನಾವು ಈ ಆರೋಪವನ್ನು ಸರಿಯಾದ ಸಮಯಕ್ಕೆ ಪರಿಹರಿಸುತ್ತೇವೆ. ಪುರಾವೆ ಇಲ್ಲದೆ ಯಾವುದನ್ನು ಹೇಳಿಲ್ಲ. ನಾವು ಸತ್ಯ ಮತ್ತು ಅಂಕಿ ಅಂಶಗಳನ್ನು ಪ್ರಸ್ತುತಪಡಿಸಿದಾಗ ಜನರಿಗೆ ಉತ್ತರ ಸಿಗುತ್ತದೆ. ಬಳಿಕ ಅವರು ಅದನ್ನು ಒಪ್ಪಿಕೊಳ್ಳಬೇಕೊ ಅಥವಾ ಬೇಡವೊ ಎಂಬುದು ಅವರ ಆಯ್ಕೆಯಾಗಿದೆ. ನಿರ್ದೇಶಕ ಸುದೀಪ್ತೋ ಸೇನ್ ಸಿನಿಮಾ ಆರಂಭಿಸುವ ಮುನ್ನ ನಾಲ್ಕು ವರ್ಷಗಳ ಕಾಲ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ' ಎಂದು ಹೇಳಿದರು. 

ಆಸ್ಪತ್ರೆ ಕಟ್ಟಿಸುತ್ತಿರುವ ಸಾಯಿ ಪಲ್ಲವಿ; ನಟನೆಗೆ ಗುಡ್ ಬೈ ಹೇಳುತ್ತಿರುವುದು ನಿಜವೇ?

'ನಾವು ದೊಡ್ಡ ದುರಂತದ ಮೇಲೆ ಚಿತ್ರ ಮಾಡುತ್ತಿದ್ದೇವೆ. ಒಬ್ಬ ಸಿನಿಮಾ ನಿರ್ಮಾಪಕನಾಗಿ ನಾನು ಈ ಕಥೆಯನ್ನು ಹೇಳಲು ಬಯಸುತ್ತೇನೆ ಎಂದು ನಾನು ಭಾವಿಸಿದರೆ, ನಾನು ಪರ ಇದ್ದೀನೋ ಅಥವಾ ಇಲ್ಲವೋ ಎಂಬ ಚರ್ಚೆಯು ವ್ಯಕ್ತಿಯ ದೃಷ್ಟಿಕೋನವನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ ನಾನು ನನ್ನ ಹೃದಯ ಸ್ಪರ್ಶಿಸುವ ಕಥೆಯ ಬಗ್ಗೆ ಮಾತ್ರ ಯೋಚಿಸುತ್ತೇನೆ' ಎಂದು ಹೇಳಿದರು. ದಿ ಕೇರಳ ಸ್ಟೋರಿ ಸಿನಿಮಾ ಬ್ಯಾನ್ ಆಗುತ್ತಾ, ಈ ವಿವಾದ ಎಲ್ಲಿಗೆ ಹೋಗಿ ಮುಟ್ಟುತ್ತೊ ಕಾದುನೋಡಬೇಕು. 

Follow Us:
Download App:
  • android
  • ios