Asianet Suvarna News Asianet Suvarna News

Kumkum Bhagya 2K episode: ನಿರ್ಮಾಪಕಿ ಏಕ್ತಾ ಕಪೂರ್ ಸಂಭ್ರಮ!

2000 ಎಪಿಸೋಡ್‌ ತಲುಪಿದ್ದರೂ, ಟಿಆರ್‌ಪಿ ಕಡಿಮೆಯಾಗದ ಧಾರಾವಾಹಿ.  ಜನಪ್ರಿಯ ಹಿಂದಿ ಧಾರಾವಾಹಿ ಬಗ್ಗೆ ನಿರ್ಮಾಪಕಿ ಭಾವುಕ ಮಾತು.....

Producer Ekta Kapoor thanks fans for love Kumkum bhagya completes 2000 episode vcs
Author
Bangalore, First Published Dec 9, 2021, 3:21 PM IST
  • Facebook
  • Twitter
  • Whatsapp

2014ರಿಂದ ಬಾಲಾಜಿ ಪ್ರೊಡಕ್ಷನ್ಸ್‌ನ (Balaji Productions) ಅಡಿಯಲ್ಲಿ ಆರಂಭವಾದ ಕುಂಕುಮ ಭಾಗ್ಯ (Kumkuma Bhagya) ಧಾರಾವಾಹಿ ಕೆಲವು ದಿನಗಳ ಹಿಂದೆ 2000 ಎಪಿಸೋಡ್‌ ಪೂರ್ಣಗೊಳಿಸಿದೆ. ಧಾರಾವಾಹಿ ದೊಡ್ಡ ಮೈಲಿಗಲ್ಲು ಸೃಷ್ಟಿಸಿರುವುದಕ್ಕೆ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ವಿಡಿಯೋ ಹಂಚಿಕೊಂಡು, ಧನ್ಯವಾದ ತಿಳಿಸಿದ್ದಾರೆ. 

'ಕಳೆದ 27 ವರ್ಷಗಳಿಂದ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಸಪೋರ್ಟ್‌ನಿಂದ ಮಾತ್ರ ಈ ಯಶಸ್ಸು ಸಾಧ್ಯವಾಗಿದ್ದು. #2000EpisodesofKumkumBhagya ಯಶಸ್ಸಿಗೆ ನಿಮ್ಮ ಆಶೀರ್ವಾದ ಕಾರಣ. ಹೃದಯದಿಂದ ನಿಮ್ಮಲ್ಲರಿಗೂ ಧನ್ಯವಾದ ತಿಳಿಸುವೆ,' ಎಂದು ಏಕ್ತಾ ಬರೆದುಕೊಂಡಿದ್ದಾರೆ. ಮೊದಲ ಎಪಿಸೋಡ್‌ನಿಂದ ಈವರೆಗೂ ಕುಂಕುಮ ಭಾಗ್ಯ ಟಾಪ್ 5ರ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದೆ. 

ಲೇಖಕಿ ಜಾನ್ ಆಸ್ಟನ್ ಅವರ ಸೆನ್ಸ್‌  ಆ್ಯಂಡ್ ಸೆನ್ಸಿಲಿಟಿ ಕಾದಂಬರಿ ಆಧಾರಿತ ಧಾರಾವಾಹಿ ಇದಾಗಿದ್ದು, ಶಬ್ಬೀರ್, ಅಹ್ಲುವಾಲಿಯಾ, ಶ್ರೀತಿ ಜಾ, ಶಿಖಾ ಸಿಂಗ್, ಲೀಲಾ ಜುಮಾನಿ, ಪೂಜಾ ಬ್ಯಾನರ್ಜಿ, ಮುಗ್ದಾ ಚಾಫೇಕರ್, ಕೃಷ್ಣ ಕೌಲ್, ನೈನಾ ಸಿಂಗ್, ವಿನ್ ರಾಣಾ ಸೇರಿ ಹಲವು ಜನಪ್ರಿಯ ಕಲಾವಿದರು ನಟಿಸಿದ್ದಾರೆ.  2014ರಿಂದ ಪ್ರಸಾರವಾಗುತ್ತಿರುವ ಕಾರಣ ಸಾಕಷ್ಟು ಕಲಾವಿದು ಬಂದು, ಬಂದು ಹೋಗಿದ್ದಾರೆ. 

ಅಭಿಷೇಕ್ ಪ್ರೇಮ್‌ ಮತ್ತು ಪ್ರಗ್ತಾ ಅರೋರಾ ಅವರು ಮದುವೆ ಪ್ರಸಂಗವೇ ಈ ಧಾರಾವಾಹಿಯ ಕಥೆ. ಪ್ರಗ್ಯಾ ಮತ್ತು ಅಭಿಷೇಕ್‌ರನ್ನು ದೂರ ಮಾಡಲು ಅಭಿ ಅವರು ತಂಗಿ ಮತ್ತು ಗೆಳತಿ ತನಿ ಸದಾ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ಕಷ್ಟಗಳನ್ನು ಹೇಗೆ ಎದುರಿಸಿ ಅವರು ಒಂದಾಗಿ ಮದುವೆ ಅಗುತ್ತಾರೆ. ಆನಂತರ ತಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ, ಎಂಬುವುದು ಓನ್ ಲೈನ್ ಕಥೆ ಅಗಿತ್ತು.  ಕೆಲವು ವರ್ಷಗಳಿಂದ ಅವರ ಮಕ್ಕಳ ಮೇಲೆ ಕಥೆ ತಿರುಗುತ್ತಿದೆ. ಸದ್ಯಕ್ಕೆ ಪ್ರಾಜಿ, ರಣಬೀರ್, ರಿಯಾ ಪಾತ್ರಗಳು ಹೆಚ್ಚಿನ ಪ್ರಮುಖ್ಯತೆ ಪಡೆದಿವೆ. 

ಜೀವ ಬೇದರಿಕೆ, ಮದುವೆಗೆ ಒತ್ತಡ; ತಂದೆ ವಿರುದ್ಧ ಕಿರುತೆರೆ ನಟಿ ದೂರು!

ಕುಂಕುಮ ಭಾಗ್ಯ ಧಾರಾವಾಹಿ ವರ್ಷಗಳು ಕಳೆಯುತ್ತಿದ್ದಂತೆ, ಜನಪ್ರಿಯತೆ ಹೆಚ್ಚಿಸಿ ಕೊಂಡಿದೆ. ಹೀಗಾಗಿ 2017ರಲ್ಲಿ ಏಕ್ತಾ ಕುಂಡಲಿ ಭಾಗ್ಯ (Kundali Bhagya) ಧಾರಾವಾಹಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಈಗ ಟಿಆರ್‌ಪಿ ಪಟ್ಟಿಯಲ್ಲಿ ಕುಂಡಲಿ ಭಾಗ್ಯ ಮತ್ತು ಕುಂಕುಮ ಭಾಗ್ಯ ಟಾಪ್‌ 5ರಲ್ಲಿ ಇರುತ್ತವೆ. ಕುಂಡಲಿ ಭಾಗ್ಯದಲ್ಲಿ ಶ್ರದ್ಧಾ ಆರ್ಯ, ದೀರಜ್ ದೂಪರ್, ಸುಪ್ರಿಯಾ ಶುಕ್ಲಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಕುಂಕುಮ ಭಾಗ್ಯ ಕಲಾವಿದರೆ ಸೋಷಿಯಲ್ ಮೀಡಿಯಾದಲ್ಲಿ (Social Media) ಪ್ಯಾನ್‌ ಪೇಜ್‌ಗಳಿವೆ. ಪ್ರಸಾರವಾಗಿ 7 ವರ್ಷ ಕಳೆದರೂ ಧಾರಾವಾಹಿಗಳು ಮತ್ತು ಪಾತ್ರಧಾರಿಗಳು ತಮ್ಮ ಛಾಪು ಕಳೆದುಕೊಂಡಿಲ್ಲ. ಚಿತ್ರೀಕರಣದ ಸಣ್ಣ ಪುಟ್ಟ ವಿಡಿಯೋಗಳನ್ನು ಹಂಚಿಕೊಂಡು, ಅಭಿಮಾನಿಗಳ ಜೊತೆ ಮಾತನಾಡುತ್ತಾ ಯಾವುದಾದರೂ ಒಂದು ರೀತಿಯಲ್ಲಿ ಎಂಗೇಜ್ ಆಗಿಟ್ಟುಕೊಂಡು ಧಾರಾವಾಹಿಯನ್ನು ಪ್ರೀತಿಯಿಂದ ವೀಕ್ಷಿಸುವಂತೆ ಮಾಡಿಕೊಂಡಿದ್ದಾರೆ. 

ಎರಡು ಜನಪ್ರಿಯ ಧಾರಾವಾಹಿಯಿಂದ ಹೊರ ಬಂದ ನಟಿ ಸುಪ್ರಿಯಾ ಶುಕ್ಲಾ!

ಕೆಲವು ದಿನಗಳ ಹಿಂದೆ ಈ ಎರಡೂ ಧಾರಾವಾಹಿಗಳಿಂದ ನಟಿ ಸುಪ್ರಿಯಾ ಶುಕ್ಲಾ ಹೊರ ಬಂದಿದ್ದರು. 'ನಾನು ಸರಳಾ ಪಾತ್ರ ಮಾಡಲು ಎಂದೂ ಗ್ಲಿಸರಿನ್ (Glycerine) ಬಳಸಿಲ್ಲ. ಕೆಲವೊಂದು ದೃಶ್ಯಗಳಲ್ಲಿ ನಾನು ನೈಜವಾಗಿ ಅತ್ತಿರುವೆ. ದಿನೇ ದಿನೇ ಅಳುವುದು ಹೆಚ್ಚಾಗುತ್ತಿದ್ದಂತೆ, ಪಾತ್ರ ನನಗೆ ಸುಸ್ತು ಮಾಡಿತ್ತು. ಎಲ್ಲ ಪಾತ್ರವೂ ಒಂದು ಶೂಗೆ ಸಮವಾಗಿ ತೊಡಗಿಸಿಕೊಳ್ಳಬೇಕು. ಮುಂದೆ ಅಂದರೆ ಭವಿಷ್ಯದಲ್ಲಿ ನಾನು ಒಂದು ದಿನ ಮತ್ತೆ ಸರಳಾ ಪಾತ್ರಕ್ಕೆ ಕಮ್‌ ಬ್ಯಾಕ್ ಮಾಡುವೆ.  Molkki ಧಾರಾವಾಹಿಯಲ್ಲಿ ನನ್ನದು ನೆಗೆಟಿವ್ ರೋಲ್. ವರ್ಷಗಳ ಕಾಲ ನಾನು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಆದರೂ ನನಗೆ ಪ್ರಕಾಶಿ ದೇವಿ (Prakashi Devi) ಪಾತ್ರ ನೀಡಿದ್ದಾರೆ ಅಂದರೆ ಸುಮ್ಮನೆ ಅಲ್ಲ. ನಾನು ನನ್ನ ಜರ್ನಿಯನ್ನು ಒಪ್ಪಿಕೊಂಡಿರುವೆ,' ಎಂದು ಹೇಳಿದ್ದಾರೆ. 

'ಕುಂಕುಮ ಭಾಗ್ಯ'ದ ಪ್ರಮುಖ ಪಾತ್ರಧಾರಿ ತೃಪ್ತಿ ಶಂಖಧರೆ ಕಳೆದ ವರ್ಷ ತಂದೆ ವಿರುದ್ಧ ಕಿರುಕುಳ ಆರೋಪ ಮಾಡಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಕಿರುತೆರೆ ನಟಿ ತೃಪ್ತಿ ಮಂಗಳವಾರ ರಾತ್ರೋರಾತ್ರಿ ಶೇರ್ ಮಾಡಿರುವ 6 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆಯಾಗಲು ತಮ್ಮ ತಂದೆ ರಾಮ ರತನ್ ಶಂಖಧರ್‌ ಒತ್ತಾಯ ಮಾಡುತ್ತಿದ್ದಾರೆ. 28 ವರ್ಷದ ಹುಡುಗನನ್ನು ಮದುವೆಯಾಗಲು, ನಟಿ ನಿರಾಕರಿಸುತ್ತಿದ್ದಾರಂತೆ.  ಈ ಕಾರಣಕ್ಕೆ ತೃಪ್ತಿ ತಮ್ಮ ತಾಯಿ ಹಾಗೂ ಸಹೋದರನ ಜೊತೆ ಮನೆ ಬಿಟ್ಟು ಯಾರ ಕೈಗೂ ಸಿಗದಂತೆ ದೂರದ ಊರೊಂದರ ಮನೆಯಲ್ಲಿ ವಾಸವಿದ್ದಾರಂತೆ.

 

 
 
 
 
 
 
 
 
 
 
 
 
 
 
 

A post shared by Erk❤️rek (@ektarkapoor)

Follow Us:
Download App:
  • android
  • ios