Asianet Suvarna News Asianet Suvarna News

ಎರಡು ಜನಪ್ರಿಯ ಧಾರಾವಾಹಿಯಿಂದ ಹೊರ ಬಂದ ನಟಿ ಸುಪ್ರಿಯಾ ಶುಕ್ಲಾ!

ವೃತ್ತಿ ಜೀವನದಲ್ಲಿ ಬ್ರೇಕ್ ಬೇಕೆಂದು ಎರಡು ಜನಪ್ರಿಯ ಧಾರಾವಾಹಿಗಳಿಂದ ಹೊರ ನಡೆದ ಹಿಂದಿ ನಟಿ ಸುಪ್ರಿಯಾ...

Hindi actress Kumkum Bhagya fame Supriya Shukla to give a break from acting vcs
Author
Bangalore, First Published Oct 14, 2021, 4:44 PM IST
  • Facebook
  • Twitter
  • Whatsapp

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ಸುಪ್ರಿಯಾ ಶುಕ್ಲಾ (Supriya Shukla) ಬಣ್ಣದ ಜಗತ್ತಿನಿಂದ ಸಣ್ಣ ಬ್ರೇಕ್‌ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.  ಕುಂಕುಮ ಭಾಗ್ಯ (Kundali Bhagya) ಧಾರಾವಾಹಿಯಲ್ಲಿ 8 ವರ್ಷ ಮತ್ತು ಕುಂಡಲಿ ಭಾಗ್ಯ (Kundali Bhagya) ಧಾರವಾಹಿಯಲ್ಲಿ 4 ವರ್ಷಗಳಿಂದ ನಟಿಸುತ್ತಿದ್ದಾರೆ ಈ ಕಲಾವಿದೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗುತ್ತಿದ್ದ ಸುಪ್ರಿಯಾ ಕುಟುಂಬಕ್ಕೆ (Family) ಸಮಯ ನೀಡಲಾಗದ ಕಾರಣ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ. 

ಎರಡೂ ಧಾರಾವಾಹಿಗಳಲ್ಲಿ ಸರಳಾ ಅರೋರಾ (Sarala Arora) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಪ್ರಿಯಾ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 'ಸರಳಾ ಅರೂರಾ ಒಂದೊಳ್ಳೆ ಪಾತ್ರ. ಕುಂಕುಮ ಭಾಗ್ಯ ಧಾರಾವಾಹಿಯಲ್ಲಿ ನಾನು ಈ ಪಾತ್ರಕ್ಕೆ 8 ವರ್ಷಗಳ ಕಾಲ ಜೀವ ತುಂಬಿರುವೆ. ಶ್ರುತಿ (Sruthi) ಮತ್ತು ಮೃನಾಲ್‌ (Mrunal) ಅವರ ಆನ್‌ಸ್ಕ್ರೀನ್‌ ತಾಯಿ ಆಗಿ ಕಾಣಿಸಿಕೊಂಡ ಸಂತೋಷವಿದೆ. ಈ ಪಾತ್ರಕ್ಕೆ ತುಂಬಾನೇ ಲೇಯರ್‌ಗಳಿದ್ದವು (Layers). ಇಷ್ಟು ವರ್ಷಗಳು ಒಂದೇ ಪಾತ್ರದಲ್ಲಿ ಕಾಣಿಸಿಕೊಂಡು ಈಗ ಅನಿಸುತ್ತಿದೆ, ನನ್ನಿಂದ ಈ ಶೋಗೆ ಯಾವುದೇ ಕಾಂಟ್ರಿಬ್ಯೂಷನ್‌ (Contribution) ಇಲ್ಲ ಎಂದು. ನನ್ನ ಅದೃಷ್ಟದಿಂದ ಕುಂಡಲಿ ಭಾಗ್ಯದಲ್ಲಿ ಸರಳಾ ಪಾತ್ರಕ್ಕೆ ಪ್ರಮುಖ್ಯತೆ ನೀಡಲಾಗಿತ್ತು. ಮತ್ತೆ ಅಲ್ಲೂ ನಾನು ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡೆ. ಇದಾದ ನಂತರ ನಾನು Molkki ಧಾರಾವಾಹಿಯಲ್ಲಿ ನಟಿಸಿದೆ. ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದ ನನಗೆ ಈ ಪ್ಯಾಂಡಮಿಕ್‌ನಿಂದ (Pandemic) ನನ್ನ ಫ್ಯಾಮಿಲಿ ಜೊತೆ ಎಲ್ಲಿಯೂ ಹೊರ ಹೋಗಿಲ್ಲ. ಈಗ ನಾನು ಬೇರೆ ಕೆಲಸಗಳ ಬಗ್ಗೆ ಗಮನ ನೀಡುವ ಸಮಯ ಬಂದಿದೆ. ಸರಳಾ ಪಾತ್ರಕ್ಕೆ ಬ್ರೇಕ್ ಕೊಡುವ ಅವಶ್ಯಕತೆ ಹೆಚ್ಚಿದೆ,' ಎಂದು ಸುಪ್ರಿಯಾ ಮಾತನಾಡಿದ್ದಾರೆ. 

ಗಟ್ಟಿಮೇಳ ಧಾರಾವಾಹಿಯಿಂದ ಹೊರ ಬಂದ ನಟಿ ಸ್ವಾತಿ!

'ನಾನು ಸರಳಾ ಪಾತ್ರ ಮಾಡಲು ಎಂದೂ ಗ್ಲಿಸರಿನ್ (Glycerine) ಬಳಸಿಲ್ಲ. ಕೆಲವೊಂದು ದೃಶ್ಯಗಳಲ್ಲಿ ನಾನು ನೈಜವಾಗಿ ಅತ್ತಿರುವೆ. ದಿನೇ ದಿನೇ ಅಳುವುದು ಹೆಚ್ಚಾಗುತ್ತಿದ್ದಂತೆ ಪಾತ್ರ ನನಗೆ ಸುಸ್ತು ಮಾಡಿತ್ತು. ಎಲ್ಲ ಪಾತ್ರವೂ ಒಂದು ಶೂಗೆ ಸಮವಾಗಿ ತೊಡಗಿಸಿಕೊಳ್ಳಬೇಕು. ಮುಂದೆ ಅಂದರೆ ಭವಿಷ್ಯದಲ್ಲಿ ನಾನು ಒಂದು ದಿನ ಮತ್ತೆ ಸರಳಾ ಪಾತ್ರಕ್ಕೆ ಕಮ್‌ ಬ್ಯಾಕ್ ಮಾಡುವೆ. Molkki ಧಾರಾವಾಹಿಯಲ್ಲಿ ನನ್ನದು ನೆಗೆಟಿವ್ ರೋಲ್. ವರ್ಷಗಳ ಕಾಲ ನಾನು ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಆದರೂ ನನಗೆ ಪ್ರಕಾಶಿ ದೇವಿ (Prakashi Devi) ಪಾತ್ರ ನೀಡಿದ್ದಾರೆ ಅಂದರೆ ಸುಮ್ಮನೆ ಅಲ್ಲ. ನಾನು ನನ್ನ ಜರ್ನಿಯನ್ನು ಒಪ್ಪಿಕೊಂಡಿರುವೆ,' ಎಂದು ಹೇಳಿದ್ದಾರೆ. 

ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ಸುಪ್ರಿಯಾ ಬಾಲಿವುಡ್ 3 ಇಡಿಯಟ್ಸ್‌ (3 Idiots) ಮತ್ತು ಪ್ರಣೀತಾ ಸಿನಿಮಾಗಳಲ್ಲೂ ನಟಿಸಿದ್ದಾರೆ.  'ಏಕ್ತಾ ಕಪೂರ್ (Ekta Kapoor) ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವುದಾಗಲಿ ಅಥವಾ ಟಿವಿ ಶೋಗಳಲ್ಲಿ ನಟಿಸುವುದಾಗಲಿ ನನಗೆ ಒಳ್ಳೆ ಪಾತ್ರ ಸಿಕ್ಕಿದೆ, ಅದೇ ನನಗೆ ಖುಷಿ. ನಿರ್ದೇಶಕರು ಮತ್ತು ನಿರ್ಮಾಪಕರು ನನಗೆ ಸೂಟ್ ಆಗುವ ಪಾತ್ರಗಳನ್ನು ನೀಡುತ್ತಾರೆ, ತಾಯಿ (Mother) ಆಗಿ ಪತ್ನಿಯಾಗಿ ನನ್ನ ಮೇಲಿರುವ ಜವಾಬ್ದಾರಿ ಆವರಿಗೆ ಗೊತ್ತಿದೆ. ಈ ಬ್ರೇಕ್‌ನಲ್ಲಿ ನನ್ನ ಎನರ್ಜಿಯನ್ನು ಫ್ಯಾಮಿಲಿಗೆ ನೀಡುತ್ತೇನೆ' ಎಂದಿದ್ದಾರೆ.

 

Follow Us:
Download App:
  • android
  • ios