ಹಿಂದಿ ಜೀ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರಾವಾಹಿ 'ಕುಂಕುಮ ಭಾಗ್ಯ'ದ ಪ್ರಮುಖ ಪಾತ್ರಧಾರಿ ತೃಪ್ತಿ ಶಂಖಧರೆ ಇದೀಗ ಕಿರುಕುಳ ಆರೋಪದ ಮೇಲೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ತಂದೆಯಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾತನಾಡಿರುವ ವಿಡಿಯೋಗೆ ಯುಪಿ ಪೊಲೀಸರು ಹಾಗೂ ನಟ ಸೋನು ಸೂದ್‌ ಅವರನ್ನು ಟ್ಯಾಗ್ ಮಾಡಿದ್ದಾರೆ.

ರೋಗಿಯ ಜೀವ ಉಳಿಸೋಕೆ ಡಿಫಿಬ್ರಿಲೇಟರ್ ಬದಲು ಬಳಸಿದ್ರು ಬಾತ್‌ರೂಂ ಸ್ಕ್ರಬರ್..!

19 ವರ್ಷದ ತೃಪ್ತಿ ಶಂಖಧರೆ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಲು ತಂದೆ ಒತ್ತಡ ಹೇರುತ್ತಿದ್ದಾರೆ. ಒಪ್ಪದ ಕಾರಣ ಕೊಲ್ಲಲು ಯತ್ನಿಸುತ್ತಿದ್ದಾರೆ, ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೌದು! ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಕಿರುತೆರೆ ನಟಿ ತೃಪ್ತಿ ಮಂಗಳವಾರ ರಾತ್ರೋರಾತ್ರಿ ಶೇರ್ ಮಾಡಿರುವ 6 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆಯಾಗಲು  ತಮ್ಮ ತಂದೆ ರಾಮ ರತನ್ ಶಂಖಧರ್‌ ಒತ್ತಾಯ ಮಾಡುತ್ತಿದ್ದಾರೆ. 28 ವರ್ಷದ ಹುಡುಗನನ್ನು ಮದುವೆಯಾಗಲು, ನಟಿ ನಿರಾಕರಿಸುತ್ತಿದ್ದಾರಂತೆ. 

 

 
 
 
 
 
 
 
 
 
 
 
 
 

Please help #uppolice

A post shared by Tripti Shankhdhar (@triptishankhdhar) on Aug 25, 2020 at 8:41am PDT

ಮಡದಿಗೂ ಕಿರುಕುಳ: 
ರಾಮ್‌ ರತನ್‌ ಪುತ್ರಿಗೆ ಮಾತ್ರವಲ್ಲದೇ, ಪತ್ನಿಗೂ ಕಿರುಕುಳ ನೀಡುತ್ತಿದ್ದಾರಂತೆ. ಮನೆಯಿಂದ ಹೊರ ಬಾರದಂತೆ ಕೋಣೆಯಲ್ಲಿ ಲಾಕ್‌ ಮಾಡಿದ್ದರು ಎನ್ನಲಾಗಿದೆ. ತನಗಿಂತ  9 ವರ್ಷ ಹಿರಿಯ ವ್ಯಕ್ತಿಯನ್ನು ತೃಪ್ತಿ ನಿರಾಕರಿಸಿದಕ್ಕೆ ತಂದೆ ಆಕೆಯ ಕೂದಲು ಹಿಡಿದೆಳೆದು, ಹೊಡೆದಿದ್ದಾರೆ. ಈ ಕಾರಣಕ್ಕೆ ತೃಪ್ತಿ ತಮ್ಮ ತಾಯಿ ಹಾಗೂ ಸಹೋದರನ ಜೊತೆ ಮನೆ ಬಿಟ್ಟು ಯಾರ ಕೈಗೂ ಸಿಗದಂತೆ ದೂರದ ಊರೊಂದರ ಮನೆಯಲ್ಲಿ ವಾಸವಿದ್ದಾರಂತೆ.

ಪಡ್ಡೆ ಹುಡುಗರ ನಿದ್ದೆ ಕೆಡಿಸಿದ 'ಕನ್ನಡತಿ' ಧಾರಾವಾಹಿಯ ಸೌಮ್ಯಾ ಭಟ್ ಯಾರು ಗೊತ್ತಾ?

ತೃಪ್ತಿಗೆ ನಟಿಯಾಗಬೇಕೆಂಬ ಕನಸಿದ್ದ ಕಾರಣ ತಂದೆ ರಾಮ್‌ ಮುಂಬೈಗೆ ಕಳುಹಿಸಿಕೊಟ್ಟಿದ್ದರು. ತಿಂಗಳ ನಂತರ ಆಕೆಯ ದುಡಿಮೆಯ ಸಂಪೂರ್ಣ ಹಣ ನೀಡುವಂತೆ ಒತ್ತಡ ಹಾಕಲು ಶುರು ಮಾಡಿದರು. ತೃಪ್ತಿ ತಂದೆ ರಿಯಲ್ ಎಸ್ಟೇಟ್‌ ಉದ್ಯಮಿ ಆಗಿರುವ ಕಾರಣ ಜನರೊಂದಿಗೆ ಉತ್ತಮ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ಹುಡುಕಿ, ಕೊಲ್ಲುತ್ತಾರೆ. ನಾವು ಕಾಣಿಯಾಗಿದ್ದೀವಿ ಎಂದು ಪೊಲೀಸರಿಗೆ ದೂರು ನೀಡಿ ನಮ್ಮನ್ನು ಹುಡುಕಿಸುತ್ತಾರೆ, ಎಂದು ವಿಡಿಯೋದಲ್ಲಿ ಭಯ ವ್ಯಕ್ತಪಡಿಸಿದ್ದರು.

ತೃಪ್ತಿಯ ಪರ ನಿಂತಿರುವ ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಯನ್ನು ರಕ್ಷಿಸುವಂತೆ ಯುಪಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ನಿಮಗೆ ಯಾವುದೇ ತೊಂದರೆ ಆಗದಂತೆ ನಾವಿದ್ದೀವಿ ಎಂದು ಸಹ ಕಲಾವಿದರು ಧೈರ್ಯ ತುಂಬಿದ್ದಾರೆ.

 

 
 
 
 
 
 
 
 
 
 
 
 
 

#uppolice #yogi #spcity #bareilly #delhi

A post shared by Tripti Shankhdhar (@triptishankhdhar) on Aug 25, 2020 at 8:49am PDT

ಊರಿಗೆ ಹೋಗಿದ್ದ ತೃಪ್ತಿ:
ಮೂಲತಃ ಉತ್ತರ ಪ್ರದೇಶದ ಬರೇಲಿಯವರಾದ ತೃಪ್ತಿ, ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣದಿಂದ ಮುಂಬೈಯಿಂದ ಹುಟ್ಟೂರಿಗೆ ತೆರಳಿದ್ದರು. ಏಕಾಏಕೀ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಕಟ ಹೇಳಿಕೊಂಡು, ವೀಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ತೃಪ್ತಿ ಹಾಗೂ ತಂದೆಗೆ ಠಾಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು.

'ತಂದೆಯ ವಿರುದ್ಧ ಯಾವುದೇ ಕಾನೂನು ಹೋರಾಟಕ್ಕೆ ತೃಪ್ತಿ ಒಪ್ಪದ ಕಾರಣ, ಅವರು ವಿರುದ್ಧ CrPC ಸೆಕ್ಷನ್ 151ರ (Preventive Custody) ಅಡಿಯಲ್ಲಿ ದೂರು ದಾಖಲಿಸಿಕೊಂಡು ಬಿಡುಗಡೆಗೊಳಿಸಿದ್ದಾರದೆ. ಅಲ್ಲದೇ ತೃಪ್ತಿ ಹಾಗೂ ಅವ ತಾಯಿ ತಂದೆಯೊಟ್ಟಿಗೆ  ವಾಸಿಸಲು ನಿರಾಕರಿಸುತ್ತಿದ್ದು, ಅವರ ವ್ಯವಹಾರದಲ್ಲಿ ತಲೆ ಹಾಕುವುದಿಲ್ಲವೆಂದು ಪೊಲೀಸರು ತಂದೆಯಿಂದ ಷರಾ ಬರೆಯಿಸಿಕೊಂಡಿದ್ದಾರೆ,' ಎಂದು ನಗರ ಎಸ್ಪಿ ರವೀಂದ್ರ ಕುಮಾರ್ ತಿಳಿಸಿದ್ದಾರೆ.

'ಗಟ್ಟಿಮೇಳ' ಧಾರಾವಾಹಿಯ ಆದ್ಯಾ ನಿಜಕ್ಕೂ ಸಿನಿಮಾ ನಟಿನಾ?

ಮುಂಬೈಗೆ ಮರಳಿ, ತಮ್ಮ ಕರಿಯರ್‌ನಲ್ಲಿ ಮುಂದುವರೆಯಬೇಕೆಂದು ತೃಪ್ತಿ ಬಯಸಿದ್ದಾರೆ ಎನ್ನಲಾಗಿದೆ. ಮಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ತಂದೆ ರಾಮ ರತನ್, 'ನನ್ನೆರಡು ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಬಯಸಿದ್ದನ್ನೆಲ್ಲವನ್ನೂ ಪಡೆಯುವಂತೆ ಮಾಡಿದ್ದೇನೆ. ನಾನೇ ಖುದ್ದು ಮುಂಬೈಗೆ ಮಗಳನ್ನು ಕರೆದುಕೊಂಡು ಹೋಗಿ, ತನ್ನ ಉದ್ಯೋಗದಲ್ಲಿ ಸೆಟಲ್ ಆಗಲು 10 ಲಕ್ಷ ರೂ. ಖರ್ಚು ಮಾಡಿದ್ದೇನೆ. ಆದರೆ, ಜೀವನದಲ್ಲಿ ಸ್ಥಿರವಾಗಿ ನೆಲೆಯೂರಲು  ಮದುವೆ ಆಗುವಂತೆ ಇತ್ತೀಚೆಗೆ ಹೇಳಿದ್ದು ಹೌದು. ಆದರೆ, ಮಗಳು ಈ ರೀತಿ ತಿರುಗಿ ಬೀಳುತ್ತಾಳೆಂದು ಕನಸು ಮನಸ್ಸಿನಲ್ಲಿಯೂ ಎಂದು ಕೊಂಡಿರಲಿಲ್ಲ,' ಎನ್ನುತ್ತಾರೆ.