Asianet Suvarna News Asianet Suvarna News

ಪ್ರಿಯಾಂಕಾ ಚೋಪ್ರಾ ಬಾಯಿಂದ ಇದೆಂಥಾ ಮಾತು, ಲೈಫ್ ರಿಯಾಲಿಟಿ ಅಂದ್ರೆ ಇದೇನಾ..!?

ಕಾಲ ಕಳೆದಂತೆ ನನಗೆ ಜ್ಞಾನೋದಯ ಆಗತೊಡಗಿತು. ಇಲ್ಲಿ, ಎಲ್ಲರೂ ವಿಭಿನ್ನವಾಗಿಯೇ ಇದ್ದಾರೆ. ಒಬ್ಬರಂತೆ ಇನ್ನೊಬ್ಬರಿಲ್ಲ, ಇರಬೇಕಾದ ಅಗತ್ಯವೂ ಇಲ್ಲ. ಜೀವನ ಏಕಾಂಗಿಯಾಗಿಯೇ ನಡೆಯಬೇಕು. ನಾವು ಸಂಗಾತಿಗಳಾಗಿ ಬದುಕುವ ಪ್ರಯತ್ನ ಮಾಡಬಹುದು...

Priyanka chopra talks about her opinion on life and its facts in an interview srb
Author
First Published Aug 18, 2024, 12:08 PM IST | Last Updated Aug 18, 2024, 12:08 PM IST

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಭಾರತದ ಸ್ಟಾರ್ ನಟಿಯಾಗಿದ್ದವರು. ಬಾಲಿವುಡ್ ಚಿತ್ರರಂಗದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರದ್ದು ಅಳಿಸಲಾಗದ ನಟನೆಯ ಛಾಪು! ಇಂಥ ನಟಿ ಪ್ರಿಯಾಂಕಾ ಚೋಪ್ರಾ, ಈಗ ಹಾಲಿವುಡ್‌ ಚಿತ್ರರಂಗದಲ್ಲಿ ಮಿಂಚುತ್ತಿರುವುದು ಹಲವರಿಗೆ ಗೊತ್ತಿರುವ ಸಂಗತಿ. ಅಮೆರಿಕಾದಲ್ಲಿ ಸದ್ಯ ವಾಸಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಚಿತ್ರರಂಗದಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ (Nick Jonas) ಅವರನ್ನು ಮದುವೆಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಲವು ಸಂದರ್ಶನಗಳಲ್ಲಿ ಭಾಗಿಯಾಗುತ್ತಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ನಾನು ಹೀಗಿದ್ದೆ, ಹೀಗಿರಬೇಕಿತ್ತು ಎಂದೆಲ್ಲಾ ಸಲಹೆ-ಸೂಚನೆಗಳನ್ನು ಕೊಡುತ್ತಾರೆ. ಅವುಗಳನ್ನು ಮೆಚ್ಚು ಹಲವರು ಕಾಮೆಂಟ್‌ ಮಾಡುತ್ತಾರೆ. ಕೆಲವರು ನಟಿ ಪ್ರಿಯಾಂಕಾ ಮಾತುಗಳನ್ನು ಪಾಲಿಸುತ್ತಿದ್ದು, ಅದರಿಂದ ಒಳ್ಳೆಯ ರಿಸಲ್ಟ್ ಪಡೆದಿದ್ದೇವೆ ಎಂದು ಕೂಡ ಹೇಳುತ್ತಾರೆ. 

ಬಂಡೆ ಮಹಾಕಾಳಿ ಅಮ್ಮನ ಎದುರು 'ತೀರ್ಥರೂಪ ತಂದೆಯವರಿಗೆ' ಸಿನಿಮಾ ಮುಹೂರ್ತ!

ನಟಿ ಪ್ರಿಯಾಂಕಾ ಚೋಪ್ರಾ ಮಾತನಾಡಿರುವ ವೀಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು 'ನನ್ನ ಜೀವನ ತುಂಬಾ ಕೆಟ್ಟದಾಗಿದೆ ಎಂದೇ ನಾನು ಭಾವಿಸಿದ್ದೆ. ನೋಡಲು ಕಪ್ಪಗಿದ್ದೆ, ದಪ್ಪಗಿದ್ದೆ. ನನ್ನನ್ನು ನೋಡಿ ಹಲವರು ಟೀಕೆ ಮಾಡುತ್ತಿದ್ದರು. ಅದನ್ನೆಲ್ಲಾ ಕೇಳಿ ನನಗೆ ತಲೆ ಕೆಟ್ಟು ಹೋಗುತ್ತಿತ್ತು. ಒಬ್ಬಳೇ ಕುಳಿತು ಅಳುತ್ತಿದ್ದೆ. ನನ್ನ ಪೋಷಕರಿಗೆ ಬೈಯ್ಯುತ್ತಿದ್ದೆ. ನನಗೆ ತುಂಬಾ ಅವಮಾನ ಆಗುತ್ತಿದೆ ಎಂದು ಭಾವಿಸುತ್ತಿದ್ದೆ. 

ಆದರೆ, ಕಾಲ ಕಳೆದಂತೆ ನನಗೆ ಜ್ಞಾನೋದಯ ಆಗತೊಡಗಿತು. ಇಲ್ಲಿ, ಎಲ್ಲರೂ ವಿಭಿನ್ನವಾಗಿಯೇ ಇದ್ದಾರೆ. ಒಬ್ಬರಂತೆ ಇನ್ನೊಬ್ಬರಿಲ್ಲ, ಇರಬೇಕಾದ ಅಗತ್ಯವೂ ಇಲ್ಲ. ಜೀವನ ಏಕಾಂಗಿಯಾಗಿಯೇ ನಡೆಯಬೇಕು. ನಾವು ಸಂಗಾತಿಗಳಾಗಿ ಬದುಕುವ ಪ್ರಯತ್ನ ಮಾಡಬಹುದು. ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ, ಜೀವನದ ಅನುಭವ ಜೀವದಿಂದಲೇ ಬರಬೇಕು. ಜೀವದಿಂದ ಅಂದರೆ ಅನುಭವ ಎಂಬುದನ್ನು ನಾವು ಒಬ್ಬರೇ ಅನುಭಿಸಬೇಕು. 

ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?

ಯಾವುದೂ ಕೂಡ ಶಾಶ್ವತವಲ್ಲ. ಇಲ್ಲಿ ಕೆಲವು ಕ್ಷಣಿಕ, ಕೆಲವು ಸ್ಲ್ಪ ಕಾಲ ಬಾಳುವಂಥದ್ದು. ನಾವು ಹಾಗೂ ಎಲ್ಲವೂ ಕೂಡ ನಿತ್ಯ ನಿರಂತರವೇನೂ ಅಲ್ಲ. ನಮಗಿಂತ ಹೆಚ್ಚು ಕಾಲ ಬದುಕಿ ಬಾಳುವಂಥದ್ದು ಅನೇಕ ವಸ್ತು, ವಿಷಯಗಳು ಹಾಗೂ ಜೀವಿಗಳು ಇವೆ. ಆದರೆ, ಎಲ್ಲಕ್ಕೂ ಒಂದು ಇತಿಮಿತಿ ಇದೆ, ಅಂತ್ಯವಿದೆ. ಹೀಗಾಗಿ ನಮ್ಮ ಅಲ್ಪ ಕಾಲದ ಜೀವನದಲ್ಲಿ ಯಾವುದನ್ನೂ ಅತಿಯಾಗಿ ಯೋಚಿಸಿಬೇಡಿ. ಅದು ಕಷ್ಟವೇ ಇರಲಿ, ಸುಖವೇ ಇರಲಿ, ಎಲ್ಲವೂ ಇಲ್ಲಿ ಶಾಶ್ವತವೇನೂ ಅಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. 

Latest Videos
Follow Us:
Download App:
  • android
  • ios