ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೊರೋನಾ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕಾಗಿ ನಿಧಿಸಂಗ್ರಹವನ್ನು ಆರಂಭಿಸಿದ್ದಾರೆ. ಶೂಟಿಂಗ್‌ನಿಂದಾಗಿ ಪ್ರಸ್ತುತ ಲಂಡನ್‌ನಲ್ಲಿರುವ ದೇಸಿ ಗರ್ಲ್ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕರೋನವೈರಸ್ ಉಲ್ಬಣದಿಂದ ಭಾರತದ ಭೀಕರ ಪರಿಸ್ಥಿತಿಯನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರೆ.

ಭಾರತದಲ್ಲಿ ಕೊರೋನವೈರಸ್‌ನಿಂದ ಬಳಲುತ್ತಿರುವ ಎಲ್ಲರಿಗೂ ಸಹಾಯ ಮಾಡಲು ಎಷ್ಟು ಸಾಧ್ಯವೋ ಅಷ್ಟು ದೇಣಿಗೆ ನೀಡುವಂತೆ ಸ್ವತಃ ಜನರನ್ನು ಒತ್ತಾಯಿಸುವ ವೀಡಿಯೊವನ್ನು ಪ್ರಿಯಾಂಕಾ ಶೇರ್ ಮಾಡಿದ್ದಾರೆ. ನಟಿ ಮತ್ತು ಅವರ ಪತಿ ಗಾಯಕ ನಿಕ್ ಜೋನಸ್ ಅವರು ಆನ್‌ಲೈನ್ ದೇಣಿಗೆ ನೀಡುವ ವೇದಿಕೆಯಾದ ಗಿವ್‌ಇಂಡಿಯಾ ಸಹಯೋಗದೊಂದಿಗೆ ನಿಧಿಸಂಗ್ರಹವನ್ನು ಸ್ಥಾಪಿಸಿದ್ದಾರೆ.

ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸೀನ್ ಕೊಡಿ: ಅಮೆರಿಕಾಗೆ ಪ್ರಿಯಾಂಕ ಮನವಿ

ಪ್ರಿಯಾಂಕಾ ಚೋಪ್ರಾ ತಮ್ಮ ವೀಡಿಯೊದಲ್ಲಿ, ಆಮ್ಲಜನಕದ ಬಿಕ್ಕಟ್ಟು, ಆಸ್ಪತ್ರೆಯ ಹಾಸಿಗೆಗಳ ಕೊರತೆ ಮತ್ತು ಭಾರತದಲ್ಲಿ COVID-19 ಲಸಿಕೆಗಳು ಮತ್ತು ಔಷಧಿಗಳ ಕೊರತೆಯ ಬಗ್ಗೆ ಮಾತನಾಡಿದ್ದಾರೆ.

ನಾವು ಯಾಕೆ ಕಾಳಜಿ ವಹಿಸಬೇಕು? ಇದೀಗ ತುರ್ತು ಏನು? ನಾನು ಲಂಡನ್‌ನಲ್ಲಿ ಕುಳಿತಿದ್ದೇನೆ. ಆಸ್ಪತ್ರೆಗಳು ಎಷ್ಟು ಸಾಮರ್ಥ್ಯ ಹೊಂದಿವೆ ? ಐಸಿಯುಗಳಲ್ಲಿ ಯಾವುದೇ ಕೊಠಡಿಗಳಿಲ್ಲ, ಆಂಬ್ಯುಲೆನ್ಸ್‌ಗಳು ಬ್ಯುಸಿಯಾಗಿವೆ. ಆಮ್ಲಜನಕದ ಪೂರೈಕೆ ಕಡಿಮೆ ಇದೆ. ಸ್ಮಶಾನಗಳಲ್ಲಿ ಸಾಮೂಹಿಕ ಶವಸಂಸ್ಕಾರ ನಡೆಯುವಂತಿದೆ ಎಂಬ ಬಗ್ಗೆ ಭಾರತದ ನನ್ನ ಸ್ನೇಹಿತರು ಮತ್ತು ಕುಟುಂಬದಿಂದ ನಾನು ಕೇಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ನಟಿ ಹೇಳುವುದನ್ನು ಕೇಳಬಹುದು.

ಬೇಕಾಬಿಟ್ಟಿ ಜನ ಸೇರಿದ್ದ ರಾಜ್ಯದಲ್ಲಿ ಕಂಟ್ರೋಲ್‌ಗೆ ಸಿಕ್ತಿಲ್ಲ ಕೊರೋನಾ..!

ಭಾರತ ನನ್ನ ಮನೆ ಮತ್ತು ಭಾರತದಲ್ಲೀಗ ರಕ್ತಸ್ರಾವವಾಗುತ್ತಿದೆ. ಈ ಬಗ್ಗೆ ಜಾಗತಿಕ ಸಮುದಾಯವಾಗಿ ನಾವು ಕಾಳಜಿ ವಹಿಸಬೇಕಾಗಿದೆ. ನಾವು ಯಾಕೆ ಕಾಳಜಿ ವಹಿಸಬೇಕು ಎಂದು ನಾನು ನಿಮಗೆ ಹೇಳುತ್ತೇನೆ: ಯಾಕೆಂದರೆ ಎಲ್ಲರೂ ಸುರಕ್ಷಿತವಾಗಿರದ ಹೊರತು ಯಾರೂ ಸುರಕ್ಷಿತರಲ್ಲ ಎಂದು ಅವರು ಹೇಳಿದರು.

ತನ್ನ ವಿಡಿಯೋ ಕ್ಯಾಪ್ಶನ್‌ನಲ್ಲಿ ಪ್ರಿಯಾಂಕಾ ಅವರು ಮತ್ತು ನಿಕ್ ಜೊನಸ್ ಅವರು ಈಗಾಗಲೇ ಈ ಕಾರಣಕ್ಕಾಗಿ ದೇಣಿಗೆ ನೀಡಿದ್ದಾರೆ. ಇನ್ನಷ್ಟು ನೆರವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. "ನನ್ನ ಮನೆ ಭಾರತ ವಿಶ್ವದ ಭೀಕರ ಕೋವಿಡ್ ಕಷ್ಟದಿಂದ ನಲುಗುತ್ತಿದೆ. ನಾವೆಲ್ಲರೂ ಸಹಾಯ ಮಾಡಬೇಕಾಗಿದೆ! ಜನರು ದಾಖಲೆಯ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಎಲ್ಲೆಡೆ ಅನಾರೋಗ್ಯವಿದೆ, ಕೊರೋನಾ ಹರಡುವುದು ಮತ್ತು ಕೊರೋನಾ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಪರಿಹಾರವನ್ನು ಒದಗಿಸುವ ಭಾರತದ ಅತಿದೊಡ್ಡ ಸಂಸ್ಥೆಯಾದ ಗಿವ್ಇಂಡಿಯಾದೊಂದಿಗೆ ನಿಧಿಸಂಗ್ರಹವನ್ನು ಮಾಡಿ. ನೀವು ಸ್ವಲ್ಪ ನೀಡಿದರೂ ಅದು ನಿಜವಾಗಿಯೂ ಡೊದ್ದ ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ದೇಣಿಗೆ ನೇರವಾಗಿ ಆರೋಗ್ಯ ಭೌತಿಕ ಮೂಲಸೌಕರ್ಯಗಳಿಗೆ, ವೈದ್ಯಕೀಯ ಉಪಕರಣಗಳು, ಮತ್ತು ಲಸಿಕೆ ಬೆಂಬಲಕ್ಕೆ ಉಪಯೋಗವಾಗುತ್ತದೆ. ದಯವಿಟ್ಟು ದಾನ ಮಾಡಿ. ನಿಕ್ ಮತ್ತು ನಾನು ಈಗಾಗಲೇ ನೆರವು ನೀಡಿದ್ದೇವೆ, ಇನ್ನೂ ನೀಡುತ್ತೇವೆ ಎಂದು ಅವರು ಬರೆದಿದ್ದಾರೆ.

ಕೇಂದ್ರದಿಂದ ಲಸಿಕೆ ವಿತರಣೆ: ಯಾವ ರಾಜ್ಯಕ್ಕೆ ಹೆಚ್ಚು? ಯಾರಿಗೆ ಕಡಿಮೆ?

ಈ ವೈರಸ್ ಎಷ್ಟು ದೂರಕ್ಕೆ ಹರಡಬಹುದೆಂದು ನಾವೆಲ್ಲರೂ ನೋಡಿದ್ದೇವೆ, ನಮ್ಮ ನಡುವಿನ ಸಾಗರವು ಯಾವುದೇ ವ್ಯತ್ಯಾಸ ಮಾಡದು. ಎಲ್ಲರೂ ಸುರಕ್ಷಿತವಾಗಿರದ ಹೊರತು ಯಾರೂ ಸುರಕ್ಷಿತರಲ್ಲ. ಅನೇಕ ಜನರು ಅನೇಕ ರೀತಿಯಲ್ಲಿ ಸಹಾಯ ಮಾಡಲು ಮುಂದಾಗುತ್ತಿರುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ. ಈ ವೈರಸ್ ಸೋಲಿಸಲು ಎಲ್ಲರ ನೆರವಿನ ಅಗತ್ಯವಿದೆ. ಧನ್ಯವಾದಗಳು! ಎಂದಿದ್ದಾರೆ ನಟಿ.

ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಸರಣಿ ಟ್ವೀಟ್‌ಗಳಲ್ಲಿ ತಮ್ಮ ತಾಯ್ನಾಡಿಗೆ ಲಸಿಕೆಗಳು ಮತ್ತು ಆಮ್ಲಜನಕವನ್ನು ವ್ಯವಸ್ಥೆ ಮಾಡಲು ಸಹಾಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಕೋವಿಡ್ ಲಸಿಕೆಗಳ ಸಂಗ್ರಹವನ್ನು ಸರಿಯಾದ ಸಮಯದಲ್ಲಿ ಭಾರತದೊಂದಿಗೆ ಹಂಚಿಕೊಳ್ಳಲು ಅವರು ಅಮೆರಿಕಾಗೆ ಮನವಿ ಮಾಡಿದ್ದಾರೆ. ಭಾರತದಲ್ಲಿ ಗುರುವಾರ 3 ಲಕ್ಷ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ವೈರಸ್‌ಗೆ ತುತ್ತಾಗಿದ್ದಾರೆ.

ಕೊರೋನವೈರಸ್ ಎರಡನೇ ಅಲೆಯಿಂದ ದೇಶವು ತತ್ತರಿಸಿರುವ ಕಾರಣ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಾಸ್ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ಸ್ ಭಾರತವನ್ನು ಬೆಂಬಲಿಸಲು ಮುಂದೆ ಬರಬೇಕೆಂದು ಒತ್ತಾಯಿಸಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ತಮ್ಮ ಪ್ರಿಯಾಂಕಾ ಚೋಪ್ರಾ ಜೊನಸ್ ಫೌಂಡೇಶನ್ ಮೂಲಕ ಭಾರತಕ್ಕೆ ಬೆಂಬಲವನ್ನು ನೀಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by NICK JONɅS (@nickjonas)

ಗುರುವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಭಾರತಕ್ಕೆ ನಮ್ಮ ಸಹಾಯ ಬೇಕು. ದಯವಿಟ್ಟು ನಿಮಗೆ ಸಾಧ್ಯವಾದದ್ದನ್ನು ನೀಡಿ ಎಂದು ಬರೆದಿದ್ದಾರೆ. ಬಹಳಷ್ಟು ಜನ ಕಮೆಂಟ್ ಬಾಕ್ಸ್‌ನಲ್ಲಿ ನಿಕ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಕೆಲವರು ಥ್ಯಾಂಕ್ಸ್ ಭಾವ ಎಂದು ನಿಕ್ ಭಾರತದ ಅಳಿಯ ಅನ್ನೋದನ್ನು ನೆನಪಿಸಿಕೊಂಡಿದ್ದಾರೆ.