ಈಗ ತಮ್ಮ ಕಾನ್ಫಿಡೆನ್ಸ್​ನಿಂದಲೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ ಹಿಂದೊಮ್ಮೆ ಹೇಗಿದ್ದರು? ಅಮೆರಿಕದಲ್ಲಿ ಅವರ ಜೀವನ ಹೇಗಿತ್ತು?  

ಬಾಲಿವುಡ್ ನ ಮೋಹನಾಂಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ ನಲ್ಲಿ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಹೈಫೈ ಇಂಗ್ಲಿಷ್‌ನೊಂದಿಗೆ, ಈಕೆ ಪಾಶ್ಚಿಮಾತ್ಯ ಮಹಿಳೆಯರಿಗೆ ಕಡಿಮೆ ಇಲ್ಲದಂತೆ ಗುರುತಿಸಿಕೊಂಡಿದ್ದಾರೆ. ಪಾಪ್ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾದ ಹಾಲಿವುಡ್​ನಲ್ಲಿಯೇ ನೆಲೆ ಕಂಡುಕೊಳ್ಳುವ ಯೋಚನೆ ಈಕೆಯದ್ದು. ಆದರೆ ವಿದೇಶದಲ್ಲಿನ ಅದರಲ್ಲಿಯೂ ಅಮೆರಿಕದಲ್ಲಿನ ಕಹಿ ಘಟನೆಯನ್ನು ಪ್ರಿಯಾಂಕಾ ಈಗ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಹೈಸ್ಕೂಲ್ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದಾಗ ಅನೇಕ ತೊಂದರೆಗಳನ್ನು ಎದುರಿಸಿರುವ ಕುರಿತು ಈಗ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಬಾತ್ ರೂಂನಲ್ಲಿ ಕೂತು ಊಟ ಮಾಡುತ್ತಿರುವ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ತಾವು ಭಾರತೀಯಳು, ಅಮೆರಿಕಾದವಳು ಅಲ್ಲ ಎನ್ನುವ ಭಾವನೆ ಹೆಚ್ಚಿದ್ದರಿಂದ ಹೇಗೆ ಕಷ್ಟವಾಯಿತು ಎಂದಿದ್ದಾರೆ. ತಮ್ಮ ಐಡೆಂಟಿಯನ್ನು ಬದಲಾಯಿಸಿ ಆ ಸ್ಥಳಕ್ಕೆ ಹೊಂದಿಕೊಳ್ಳಲು ತುಂಬಾ ಪ್ರಯತ್ನಿಸಿದ್ದಾರೆ ಪ್ರಿಯಾಂಕಾ ಚೋಪ್ರಾ ಒಪ್ಪಿಕೊಂಡಿದ್ದಾರೆ.

 ಈಗ ತಮ್ಮ ಕಾನ್ಫಿಡೆನ್ಸ್​ನಿಂದಲೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ ಹಿಂದೆ ಹೀಗಿರಲಿಲ್ಲ. ಆಗಿನ ದಿನಗಳನ್ನು ನೆನೆದು ತುಂಬಾ ನೋವನ್ನು ತೋಡಿಕೊಂಡಿದ್ದಾರೆ. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ಹೋದಾಗ ತುಂಬಾ ಕಷ್ಟ ಪಟ್ಟಿದ್ದೆ. ಮೊದಮೊದಲು ಅಲ್ಲಿನ ಹುಡುಗಿಯರ ಜೊತೆ ಸ್ನೇಹ ಮಾಡೋದು ಹೇಗೆ ಅಂತ ಅರ್ಥವಾಗ್ತಿರಲಿಲ್ಲ. ಆಗ ಕ್ಯಾಂಟೀನ್ ಗೆ ಹೋಗಿ ಬರೋದು ಹೇಗೆ ಅಂತ ಗೊತ್ತಿರಲಿಲ್ಲ. ಆಹಾರದ ಬಗ್ಗೆಯೂ ಹೆಚ್ಚಿಗೆ ಅರಿವು ಇರಲಿಲ್ಲ. ನಾನು ವೆಂಡಿಂಗ್ ಮೆಷಿನ್‌ನಿಂದ (Wending Machine) ತಿಂಡಿಗಳನ್ನು ತೆಗೆದುಕೊಂಡು ಯಾರೂ ನನ್ನನ್ನು ನೋಡದೆ ಸ್ನಾನಗೃಹಕ್ಕೆ ಹೋಗುತ್ತಿದ್ದೆ. ಯಾರ ಜೊತೆಗೂ ಹೋಗುತ್ತಿರಲಿಲ್ಲ. ಎಲ್ಲರ ಜೊತೆ ಹೋಗಲು ಭಯವಾಗುತ್ತಿತ್ತು. ಏಕೆಂದರೆ ಆಹಾರಗಳನ್ನು ತಿನ್ನುವುದರ ಬಗ್ಗೆ ನನಗೆ ಹೆಚ್ಚಿನ ಅರಿವು ಇರಲಿಲ್ಲ. ಇದಕ್ಕಾಗಿ ಒಟ್ಟಿಗೆ ಹೋಗಲು ಭಯದಿಂದ ಬಾತ್​ರೂಮ್​ ಒಳಗೆ ಹೋಗಿ ತಿಂಡಿ ತಿನ್ನುತ್ತಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ನಾನು ಊಟವನ್ನೂ ಬಾತ್​ರೂಮ್​ನಲ್ಲಿ ಮಾಡುತ್ತಿದ್ದೆ. ನಾನು ಅಷ್ಟೂ ನರ್ವಸ್ ಆಗಿದ್ದೆ. ಕೆಫೆಟೇರಿಯಾಗೆ ಹೋಗುವುದು ಹೇಗೆಂದು ನನಗೆ ತಿಳಿದಿರಲಿಲ್ಲ. ವೆಂಡಿಂಗ್ ಮೆಷಿನ್​ನಿಂದ ಡೋರ್ಟಿಯಸ್ ತಿನ್ನುತ್ತಿದ್ದೆ ಎಂದಿದ್ದಾರೆ. 

Malti Marie: ಮಗಳನ್ನು ಕಳೆದುಕೊಳ್ಳೋ ಭಯದಲ್ಲಿದ್ರಂತೆ ಪ್ರಿಯಾಂಕಾ ಚೋಪ್ರಾ

ನಾನು ಅಮೆರಿಕದ ಸಂಸ್ಕೃತಿಗೆ ಒಗ್ಗಿಕೊಳ್ಳಲು ತುಂಬಾನೇ ಕಷ್ಟವಾಯಿತು. ಹೆಚ್ಚಿನ ಜನರ ಜೊತೆ ಶಾಮೀಲು ಆಗುವ ಸ್ವಭಾವ ನನ್ನದಾಗಿರಲಿಲ್ಲ. ಈ ಕಾರಣದಿಂದ ನಾನು ಯಾರನ್ನಾದರೂ ಭೇಟಿಯಾಗಲು ಕಿರಿಕಿರಿಯಾಗುತ್ತಿತ್ತು. ಹಾಗಾಗಿ ಸುಮಾರು ನಾಲ್ಕು ವಾರಗಳ ಕಾಲ ಅಲ್ಲಿ ಎಲ್ಲವನ್ನೂ ಗಮನಿಸಿದೆ. ನಂತರ ನನಗೆ ಧೈರ್ಯ ಬಂದಿತು. ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಸ್ನೇಹ ಬೆಳೆಸಲು ನಾನು ಸಾಕಷ್ಟು ಬದಲಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ನಮ್ಮ ಕುಟುಂಬದಲ್ಲಿ ಡೇಟ್‌ಗಳು, ಲೇಟ್ ನೈಟ್ ಪಾರ್ಟಿಗಳು (Late Night party) ಇತ್ಯಾದಿಗಳನ್ನು ಅನುಮತಿಸಲಾಗುತ್ತಿರಲಿಲ್ಲ. ಅವೆಲ್ಲಕ್ಕೂ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾಯಿತು ಎಂದು ಪ್ರಿಯಾಂಕಾ ಚೋಪ್ರಾ ಬಹಿರಂಗಪಡಿಸಿದ್ದಾರೆ.

ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಪ್ರಿಯಾಂಕಾ ಚೋಪ್ರಾ ಸಿಟಾಡೆಲ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಆಕ್ಷನ್ ಎಂಟರ್‌ಟೈನರ್ ಸರಣಿಯಲ್ಲಿ, ಪ್ರಿಯಾಂಕಾ ನಟಿಸುತ್ತಿದ್ದಾರೆ. ನಟಿ ಸದ್ಯ ಪತಿ ನಿಕ್ ಹಾಗೂ ಮಗಳು ಮಾಲ್ತಿ (Malthy Marie) ಜೊತೆ ಲಾಸ್ ಏಂಜಲೀಸ್​ನಲ್ಲಿ ನೆಲೆಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಬಗ್ಗೆ ಮಾತನಾಡುತ್ತಾ, ಮಾಲ್ತಿಯನ್ನು ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ ಸಮಯದ ಕುರಿತು ನೋವು ತೋಡಿಕೊಂಡಿದ್ದಾರೆ. ಆದರೆ ಈಗ ಮಾಲ್ತಿಯನ್ನು ಸಂತೋಷವಾಗಿ ನೋಡುವುದೊಂದೇ ತನ್ನ ಗುರಿ ಎಂದೂ ಅವರು ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಲ್ಯಾಪ್​ಟಾಪ್​ನಲ್ಲಿ ಭದ್ರವಾಗಿದ್ದ ಗುಟ್ಟೊಂದು ರಟ್ಟು!