ಬಾಡಿಗೆ ತಾಯ್ತನದ ಮೂಲಕ ಮಗುವಿನ ಅಮ್ಮನಾಗಿರುವ ಪ್ರಿಯಾಂಕಾ ಚೋಪ್ರಾ ಮಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದೆ ಎಂದು ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

ಕಳೆದ ವರ್ಷ ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ ತಾಯಿಯಾಗಿದ್ದರು. ಬಾಡಿಗೆ ತಾಯ್ತನದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಿಯಾಂಕಾ ಅವರಿಗೆ ಅಂದದ್ದುಂಟು. ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಬಗ್ಗೆ ಮೌನ ಮುರಿದಿದ್ದರು. ತಾಯಿಯಾಗಲು ತಾನು ಬಾಡಿಗೆ ತಾಯ್ತನವನ್ನು ಏಕೆ ಆಶ್ರಯಿಸಿದೆ ಎಂದು ನಟಿ ಹೇಳಿದ್ದರು. 'ನನಗೂ ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರಲಿಲ್ಲ. ಹಲವಾರು ವೈದ್ಯಕೀಯ ಸಮಸ್ಯೆಗಳು (Medical Problems) ಇದ್ದವು. ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಇಚ್ಛಿಸಿದೆವು. ನಮ್ಮ ಮಗುವಿನ ಬಾಡಿಗೆ ತಾಯಿಯಾಗಲು ಬಯಸುವಾಕೆ ತುಂಬಾ ದಯೆ ಉಳ್ಳವರೂ, ಸುಂದರಿಯೂ, ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ತಮ್ಮ ಗರ್ಭದಲ್ಲಿ ನೋಡಿಕೊಂಡರು' ಎಂದಿದ್ದರು ಪ್ರಿಯಾಂಕಾ.

 ಇದೀಗ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ನಾಮಕರಣ ಮಾಡಲಾಗಿದೆ. ಈಗ ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಬಗ್ಗೆ ಮಾತನಾಡುತ್ತಾ, ಮಾಲ್ತಿಯನ್ನು ಕಳೆದುಕೊಳ್ಳುತ್ತೇನೆ ಎಂದು ಭಾವಿಸಿದ ಸಮಯದ ಕುರಿತು ನೋವು ತೋಡಿಕೊಂಡಿದ್ದಾರೆ. ಆದರೆ ಈಗ ಮಾಲ್ತಿಯನ್ನು ಸಂತೋಷವಾಗಿ ನೋಡುವುದೊಂದೇ ತನ್ನ ಗುರಿ ಎಂದೂ ಅವರು ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಲ್ಯಾಪ್​ಟಾಪ್​ನಲ್ಲಿ ಭದ್ರವಾಗಿದ್ದ ಗುಟ್ಟೊಂದು ರಟ್ಟು!

ಮಗಳು ಕುರಿತು ಕೆಲವೊಂದು ಕುತೂಹಲದ ವಿಷಯ ಶೇರ್‌ ಮಾಡಿಕೊಂಡ ಪ್ರಿಯಾಂಕಾ, ಮಾಲ್ತಿ (Malti Marie), ನನ್ನ ಕೈಯನ್ನು ತನ್ನ ಬೆರಳಿಗೆ ಸುತ್ತಿಕೊಳ್ಳುತ್ತಾಳೆ. ಅವಳು ಹುಟ್ಟಿದಾಗ, ಅವಳಿಗೆ ಹೇಗೆ ಮತ್ತು ಏನು ಕಲಿಸಬೇಕೆಂದು ನನಗೆ ತಿಳಿದಿರಲಿಲ್ಲ. ಏಕೆಂದರೆ ನನಗೆ ಯಾವ ಅರಿವೂ ಇರಲಿಲ್ಲ, ನಾನು ಎಷ್ಟೋ ಬಾರಿ ಅವಳನ್ನು ಕಳೆದುಕೊಳ್ಳುತ್ತೇನೆಯೋ ಎನ್ನುವ ಭಯ ಕಾಡುತ್ತಿತ್ತು. ಅವಳು ಯಾವ ಸಮಯದಲ್ಲಿ ಏನು ಮಾಡುತ್ತಾಳೆ ಎಂದೇ ತಿಳಿಯುವುದಿಲ್ಲ. ಅದಕ್ಕಾಗಿ ತುಂಬಾ ಭಯ. ಅವಳಿಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. ಒಟ್ಟಿನಲ್ಲಿ ಆಕೆ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ಪ್ರಿಯಾಂಕಾ. 

 'ಮಗಳು ಮಾಲ್ತಿ ಅತ್ಯಂತ ಸಂತೋಷದಿಂದ ಇರಬೇಕೆಂದು ನಾನು ಬಯಸುತ್ತೇನೆ. ಅವಳು ಸೂಪರ್ ಸ್ಮೈಲಿ, ಹ್ಯಾಪಿ ಬೇಬಿ. ನನ್ನ ಏಕೈಕ ಗುರಿ ಅವಳನ್ನು ಯಾವಾಗಲೂ ನಗುತ್ತಿರುವಂತೆ ಇಡುವುದು. ಪ್ರತಿ ಬಾರಿ ಅವಳು ನಗುತ್ತಾಳೆ, ಅದು ನನ್ನ ಜಗತ್ತನ್ನು ಬೆಳಗಿಸುತ್ತದೆ ಎಂದಿದ್ದಾರೆ. ಈ ಹಿಂದೆ ಕೂಡ ಮಗಳು ಹುಟ್ಟಿದಾಗ ಆದ ತೊಂದರೆ ಕುರಿತು ಪ್ರಿಯಾಂಕಾ ಹೇಳಿದ್ದರು. ನಮ್ಮ ಮಗಳು ಸಮಯಕ್ಕೂ ತುಂಬಾ ಮುಂಚೆಯೇ ಜನಿಸಿದಳು. ಅವಳು ಹೊರಗೆ ಬಂದಾಗ ನಾನು ಆಪರೇಷನ್ ರೂಮ್​(Operation room)ನಲ್ಲಿದ್ದೆ. ಅವಳು ತುಂಬಾ ಚಿಕ್ಕವಳಿದ್ದಳು, ನನ್ನ ಕೈಗಿಂತ ಚಿಕ್ಕ ಗಾತ್ರದಲ್ಲಿದ್ದಳು. ಅವಳು ಜನಿಸಿದಾಗ ನಿಕ್ ಮತ್ತು ನಾನು ಇಬ್ಬರೂ ಅಲ್ಲಿಯೇ ನಿಂತಿದ್ದೆವು. ಅವಳು ತುಂಬಾ ಚಿಕ್ಕವಳಿದ್ದಳು. ವೈದ್ಯರು ಅವಳನ್ನು ಹೇಗೆ ನೋಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ ನಾವು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆವು' ಎಂದಿದ್ದರು. 

Karan v/s Priyanka: ಹಾಗ್ಯಾಕೆ ಕಾಲು ತಿಕ್ಕುತ್ತಾ ನುಲಿತೀರಿ... ನೀವೇನು ಅವ್ರಾ? ಎಂದಿದ್ದ ವಿಡಿಯೋ ವೈರಲ್!

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2 ಡಿಸೆಂಬರ್ 2018 ರಂದು ಉದಯಪುರದ ಉಮೈದ್ ಭವನದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ನಂತರ 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ತಾಯಿಯಾದರು. ವೈದ್ಯರು ನೀಡಿದ ದಿನಾಂಕಕ್ಕಿಂತ 12 ವಾರಗಳ ಮೊದಲು ಪ್ರಿಯಾಂಕಾಗೆ ಹೆಣ್ಣು ಮಗು ಜನಿಸಿತ್ತು. ಈ ಕಾರಣದಿಂದಾಗಿ, ಮಾಲ್ತಿ ಅವಧಿಪೂರ್ವವಾಗಿ ಜನಿಸಿದ್ದಳು ಮತ್ತು ಹಲವಾರು ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಪ್ರಿಯಾಂಕಾ ಶೀಘ್ರದಲ್ಲೇ ದಿ ರುಸ್ಸೋ ಬ್ರದರ್ಸ್ ಅವರ ಮುಂಬರುವ ಸರಣಿ 'ಸಿಟಾಡೆಲ್' (Citadel) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.