ಸಾಲು ಸಿನಿಮಾ ಸೋತಾಗ ಭಯವಾಗಿತ್ತು, ಯಾಕಂದ್ರೆ ನಾನು ನೆಪೋ ಕಿಡ್ ಅಲ್ಲ; ಪ್ರಿಯಾಂಕಾ ಚೋಪ್ರಾ

ಸಾಲು ಸಿನಿಮಾ ಸೋತಾಗ ಭಯವಾಗಿತ್ತು, ಯಾಕಂದ್ರೆ ನಾನು ನೆಪೋ ಕಿಡ್ ಅಲ್ಲ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. 

Priyanka Chopra says I am not a nepo baby reveals her 6 films did not do well sgk

ಬಾಲಿವುಡ್ ಸ್ಟಾರ್ ನಟಿ, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹೋಗಿದ್ದೇಕೆ ಎಂದು ಬಹಿರಂಗ ಪಡಿಸಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದಾರೆ. ಪ್ರಿಯಾಂಕಾ ಹೇಳಿಕೆಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಪ್ರಿಯಾಂಕಾ ಹಾಲಿವುಡ್‌ನಲ್ಲಿ ಬ್ಯುಸಿಯಾಗಿ ಅನೇಕ ವರ್ಷಗಳೇ ಆಗಿವೆ. ಆದರೆ ಈಗ ಬಾಲಿವುಡ್ ತೊರೆದ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಸಿನಿಮಾರಂಗದಲ್ಲಿ ಇರುವ ಕೆಲವು ಲೋಪಗಳ ಬಗ್ಗೆಯೂ ಮಾತನಾಡಿದ್ದಾರೆ.  

ಸ್ವಜನಪಕ್ಷಪಾತರದ ಬಗ್ಗೆಯೂ ಪ್ರಿಯಾಂಕಾ ಮೊದಲ ಬಾರಿಗೆ ಮಾತನಾಡಿದ್ದಾರೆ. 'ಆ 6 ಸಿನಿಮಾಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ನಾನು ಭಯಭೀತಳಾಗಿದ್ದೆ ಏಕೆಂದರೆ ನಾನು ನೆಪೋ ಕಿಡ್ ಅಲ್ಲ. ಬಾಲಿವುಡ್‌ನಲ್ಲಿ ದೊಡ್ಡ ರೀತಿಯಲ್ಲಿ ಬೆಂಬಲ ನನಗೆ ಇರಲಿಲ್ಲ' ಎಂದು ಹೇಳಿದ್ದಾರೆ. ಅನೇಕ ಪೀಳಿಗೆ ಕಲಾವಿದರು ಹೊರಗಿನಿಂದ ಬರುವ ಕಲಾವಿದರಿಗಿಂತ ಹೆಚ್ಚಿನ ಅವಕಾಶ ಪಡೆಯುತ್ತಾರೆ. ನಾವು ಅದನ್ನು ಪಡೆಯಬೇಕು ಮತ್ತು ಅದಕ್ಕಾಗಿ ಹರಸಾಹಸ ಪಡಬೇಕು' ಎಂದು ಹೇಳಿದ್ದಾರೆ. 

ಬಾಲಿವುಡ್ ತೊರೆದಿದ್ದು ಯಾಕೆಂದ ಪ್ರಿಯಾಂಕಾ 

ಡಾಕ್ಸ್ ಶೆಫರ್ಡ್ ಅವರ ಪಾಡ್‌ಕಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡದ  ಪ್ರಿಯಾಂಕಾ ಭಾರತ ಬಿಟ್ಟು ಯಾಕೆ ಬಂದೆ ಎಂದು ಬಹಿರಂಗಪಡಿಸಿದ್ದಾರೆ. 'ನಾನು ಇಂಡಸ್ಟ್ರಿಯಲ್ಲಿ (ಬಾಲಿವುಡ್) ಮೂಲೆಗೆ ತಳ್ಳಲ್ಪಟ್ಟಿದ್ದೆ, ನನ್ನನ್ನು ಯಾವುದೇ ಸಿನಿಮಾಗೆ ಆಯ್ಕೆ ಮಾಡುತ್ತಿರಲಿಲ್ಲ. ನಾನು ಬಾಲಿವುಡ್ ಜನರ ಜೊತೆ ಗೋಮಾಂಸ ತಿಂದಿದ್ದೇನೆ. ನನಗೆ ಆ ಆಟದಲ್ಲಿ ಆಡಲು ಇಷ್ಟವಿರಲ್ಲ. ಆ ರಾಜಕೀಯದಿಂದ ಬೇಸತ್ತಿದ್ದೆ ಮತ್ತು ನನಗೆ ಬ್ರೇಕ್ ಬೇಕಿತ್ತು' ಎಂದು ಬಹಿರಂಗ ಪಡಿಸಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಮಾತಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ನಿರ್ದೇಶಕ ಅಗ್ನಿಹೋತ್ರಿ ಇಬ್ಬರೂ ಬೆಂಬಲ ನೀಡಿದ್ದಾರೆ. ಕಂಗನಾ ಈ ಮೊದಲಿನಿಂದನೂ ಸ್ವಜನಪಕ್ಷಪಾತ, ಬೆದರಿಸುವ ಗ್ಯಾಂಗ್ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಪ್ರಿಯಾಂಕಾ ಬಹಿರಂಗ ಪಡಿಸಿದ ಬಳಿಕ ಮತ್ತೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.

ಕರಣ್ ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತು; ಭಾರತ ಬಿಟ್ಟ ಬಗ್ಗೆ ಪ್ರಿಯಾಂಕಾ ಮಾತಿಗೆ ಕಂಗನಾ ಪ್ರತಿಕ್ರಿಯೆ

'ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಕೂಡ ಇದನ್ನೇ ಹೇಳುತ್ತಿದ್ದಾರೆ. ಜನರ ಗುಂಪು ಪ್ರಿಯಾಂಕಾ ವಿರುದ್ಧ ತಿರುಗಿಬಿತ್ತು. ಆಕೆಯನ್ನು ಬೆದರಿಸಿದರು. ಅವಳನ್ನು ಓಡಿಸಿದರು. ಸಿನಿಮಾರಂಗದ ಸ್ವಯಂ ನಿರ್ಮಿತ ಮಹಿಳೆಯನ್ನು ಭಾರತದಿಂದ ಓಡಿಸಿದರು. ಕರಣ್ ಜೋಹರ್ ಆಕೆಯನ್ನು ಬ್ಯಾನ್ ಮಾಡಿದ್ದರು ಎನ್ನುವುದು ಕೂಡ ಪ್ರತಿಯೊಬ್ಬರಿಗೂ ಗೊತ್ತು' ಎಂದು ಹೇಳಿದ್ದಾರೆ. 

ಕೆಲವರು ಬಿಟ್ಟೋದ್ರು, ಇನ್ನು ಕೆಲವರು ಡ್ರಗ್ಸ್ ತೆಗೆದುಕೊಳ್ತಿದ್ದಾರೆ; ಪ್ರಿಯಾಂಕಾ ಬೆಂಬಲಕ್ಕೆ ನಿಂತ ಅಗ್ನಿಹೋತ್ರಿ

ಅಗ್ನಿಹೋತ್ರಿ ಪ್ರತಿಕ್ರಿಯೆ

ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿ. 'ದೊಡ್ಡ ಗುಂಪು ಬೆದರಿಸಿದಾಗ ಕೆಲವರು ಮಂಡಿಯೂರಿದರು, ಕೆಲವರು ಶರಣಾದರು. ಕೆಲವರು ಬಿಟ್ಟು ಹೊರಟು ಹೋದರು. ಕೆಲವರು ಡ್ರಗ್ಸ್ ಸೇವಿಸುತ್ತಿದ್ದಾರೆ, ಇನ್ನೂ ಕೆಲವರು ಪ್ರಾಣ ಕಳೆದುಕೊಂಡರು. ಬುಲ್ಲೀಸ್ ವಿರುದ್ಧ ನಿಲ್ಲುವುದು ಕಷ್ಟ. ಕೆಲವೇ ಕೆಲವರು ಯಶಸ್ಸು ಕಂಡಿದ್ದಾರೆ. ಅವರು ನಿಜಕ್ಕೂ ರಿಯಲ್ ಲೈಫ್ ಸ್ಟಾರ್ ಆಗಿದ್ದಾರೆ' ಎಂದು ಹೇಳಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಬೆಂಬಲ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಾಧನೆಯನ್ನು ಹೊಗಳುತ್ತಿದ್ದಾರೆ. 

Latest Videos
Follow Us:
Download App:
  • android
  • ios