Asianet Suvarna News Asianet Suvarna News

Priyanka Chopra ಅಮೇರಿಕನ್‌ನನ್ನು ಮದ್ವೆ ಆಗಿದ್ದಕ್ಕೆ ಅವಕಾಶ ಕಳೆದುಕೊಂಡ್ರಾ ಪಿಗ್ಗಿ? ಫೇಕ್‌ ಜನರ ಬಗ್ಗೆ ಮಾತು

ಸಿನಿ ಜರ್ನಿ ಆರಂಭದಲ್ಲಿ ಎಷ್ಟೆಲ್ಲಾ ಕಷ್ಟ ಪಡಬೇಕಿತ್ತು ಎಂದು ಸತ್ಯ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ? ಬುದ್ಧಿವಂತರು ಮತ್ತು ಫೇಕ್‌ ಜನರು ತುಂಬಿದ್ದಾರೆ.
 

Priyanka Chopra reveals how she tackled her debutante journey vcs
Author
First Published Oct 13, 2022, 12:45 PM IST

ಏಷ್ಯಾದ ಮೋಸ್ಟ್‌ ಬ್ಯೂಟಿಫುಲ್ ವುಮೆನ್‌ ಕಿರೀಟ ಪಡೆದುಕೊಂಡಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಚಿತ್ರರಂಗದ ಬಹು ಬೇಡಿಕೆಯ ನಟಿ. ಸ್ಟಾರ್ ನಟರ ಜೊತೆ ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಕಡಿಮೆ ಅವಧಿಯಲ್ಲಿ ಬಣ್ಣದ ಲೋಕದಲ್ಲಿ ಹಣ ಮಾಡಿದ ನಟಿ ಎನ್ನುವ ಹೆಸರಿದೆ. ವೃತ್ತಿ ಜೀವನ ಪೀಕ್‌ನಲ್ಲಿರುವ ಮದುವೆ ಆಗುವ ನಿರ್ಧಾರ ಮಾಡಿದ್ದು ಎಷ್ಟು ಸರಿ? ಇದ್ದಕ್ಕಿದ್ದಂತೆ ಅವಕಾಶ ಕಳೆದುಕೊಳ್ಳಲು ಕಾರಣವೇನು?

2018 ಜುಲೈ 19ರಂದು ಪಿಗ್ಗಿ ಹುಟ್ಟು ಹಬ್ಬದ ದಿನ ಗ್ರೀಸ್‌ನಲ್ಲಿ ನಿಕ್‌ ಪ್ರಪೋಸ್ ಮಾಡುತ್ತಾರೆ ಆಗಸ್ಟ್‌ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಜೈಪೂರದಲ್ಲಿ ಹಿಂದು ಮತ್ತು ಕ್ರಿಸ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. 2022ರಲ್ಲಿ ಸರೋಗೆಸಿ ಮೂಲಕ ಹೆಣ್ಣು ಮಗುವಿಗೆ ತಾಯಿ ಆಗುತ್ತಾರೆ

ಇಂಡಸ್ಟ್ರಿ ಕಷ್ಟಗಳು:

'ಆರಂಭದಲ್ಲಿ ತುಂಬಾನೇ ಕಷ್ಟ ಆಗುತ್ತಿತ್ತು ನಾನ ಯಾರನ್ನೂ ನಂಬುತ್ತಿರಲಿಲ್ಲ ಯಾವ ಸಿನಿಮಾ ಹಿಟ್ ಕೊಡುತ್ತದೆ ಯಾವ ರೀತಿ ಕಥೆಗಳು ಸಂಕಷ್ಟವನ್ನು ಮನೆ ಬಾಗಿಲಿಗೆ ತರುತ್ತದೆ ಗೊತ್ತಿರಲಿಲ್ಲ. ಒಂದು ಹಂತದಲ್ಲಿ ನನ್ನ ಯಾವ ಸಿನಿಮಾನೂ ಹಿಟ್ ಆಗುತ್ತಿರಲಿಲ್ಲ...ಜೀವನದಲ್ಲಿ ಏನಾಗುತ್ತಿದೆ ಈ ರೀತಿ ಆಗಲು ಕಾರಣವೇನು ಎಂದು ನಾನು ಆಲೋಚನೆ ಮಾಡಲು ಶುರು ಮಾಡಿದೆ. ಸಿನಿಮಾ ಬೇಡ ಮತ್ತೆ ಕಾಲೇಜ್‌ಗೆ ಕಾಲಿಡಬೇಕು ಎಂದು ನಿರ್ಧಾರ ಮಾಡಿಕೊಂಡೆ ಆದರೆ ಆಗ Andaaz ಕೈ ಹಿಡಿಯಿತ್ತು' ಎಂದು ಪ್ರಿಯಾಂಕಾ 2006ರ ಸಂದರ್ಶನವೊಂದರಲ್ಲಿ ಮಾತನಾಡಿದ್ದರಂತೆ.

Priyanka Chopra reveals how she tackled her debutante journey vcs

ಅಂದಾಜ್ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ. 2003ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮತ್ತು ಲಾರಾ ದತ್ತ ಅಭಿನಯಿಸಿದ್ದಾರೆ. ಗಾಡ್‌ಫಾದರ್‌ ಇಲ್ಲದೆ ಚಿತ್ರರಂಗಕ್ಕೆ ಬಂದಿರುವುದಕ್ಕೆ ಹೇಗೆ ಇದೆಲ್ಲಾ ಮ್ಯಾನೇಜ್ ಮಾಡಿದ್ದರು ಎಷ್ಟು ಸ್ಟ್ರಾಂಗ್ ಆಗಿದ್ದಾರೆ ಎಂದು ಕೂಡ ಹೇಳಿದ್ದಾರೆ.

ಮಗಳ ಜೊತೆಯ ಕ್ಯೂಟ್‌ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ!

'ಒಂದುವರೆ ವರ್ಷಗಳ ಕಾಲ ನನಗೆ ಹಿಂದಿ ಸಿನಿಮಾ ರಂಗದಲ್ಲಿ ದೊಡ್ಡ ರಿಜೆಕ್ಷನ್ ಆಯ್ತು. ಏನೇ ಆದರೂ ಮನಸ್ಸಿನ ಮೇಲೆ ಹೆಚ್ಚಿಗೆ ಪರಿಣಾಮ ಬೀರುವ ವಯಸ್ಸು, 18ನೇ ವಯಸ್ಸಿಗೆ ನಾನು ರಿಜೆಕ್ಟ್‌ ಆದೆ ಯಾರಿಗೂ ನನ್ನ ಜೊತೆ ಕೆಲಸ ಮಾಡುವುದಕ್ಕೆ ಇಷ್ಟವಿರಲಿಲ್ಲ' ಎಂದಿದ್ದಾರೆ ಪಿಗ್ಗಿ.

'ನನ್ನ ಸುತ್ತ ತುಂಬಾ ಫೇಕ್ ಜನರಿದ್ದಾರೆ. ಆದರೆ ಅಷ್ಟೇ ಬುದ್ಧಿವಂತರು ಕೂಡ ಇದ್ದಾರೆ. ಕೆಲವೊಂದು ಸಮಯದಲ್ಲಿ ಇದನ್ನು ತಡೆದುಕೊಳ್ಳಬೇಕಿತ್ತು. ಒಂದು ಹಂತದಲ್ಲಿ ನಾನು ನಾನಾಗಿ ಇರಲಿಲ್ಲ' ಎಂದು ಹೇಳುವ ಪ್ರಿಯಾಂಕಾ ಫರಾನ್ ಅಕ್ತರ್ ನಿರ್ದೇಶನ 'Jee le Zaraa' ಸಿನಿಮಾ ಮೂಲಕ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪಿಗ್ಗಿ ಜೊತೆ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅಭಿನಯಿಸಲಿದ್ದಾರೆ.

ಆಕಾಶದಲ್ಲಿ ಪತಿಯ 30ನೇ ವರ್ಷದ ಬರ್ತಡೇ ಆಚರಿಸಿದ ಪ್ರಿಯಾಂಕಾ ಚೋಪ್ರಾ

ಫೋರ್ಬ್ಸ್‌ವರೆಗೆ ದೇಶದ ಕೀರ್ತಿ ಹೆಚ್ಚಿಸಿದ ಪ್ರಿಯಾಂಕಾ:

2018 ರಲ್ಲಿ 'ಫೋರ್ಬ್ಸ್' 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಅವರನ್ನು ಸೇರಿಸಿದಾಗ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಈ ಪಟ್ಟಿಯಲ್ಲಿ ಹೆಸರು ಬಂದ ಮೊದಲ ಭಾರತೀಯ ಮಹಿಳೆ ಮತ್ತು ಇದು ಮಾತ್ರವಲ್ಲ, ಈ ಪಟ್ಟಿಯಲ್ಲಿ ಎರಡು ಬಾರಿ ಕಾಣಿಸಿಕೊಂಡ ಏಕೈಕ ಭಾರತೀಯ ಮಹಿಳೆ.2018 ರಲ್ಲಿ, ಪ್ರಿಯಾಂಕಾ ವೋಗ್ ಅಮೇರಿಕಾ ನಿಯತಕಾಲಿಕದ ಮುಖಪುಟಕ್ಕೆ ಬಂದ ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿಯಾಗಿದ್ದಾರೆ. ವೋಗ್ ಇಂಡಿಯಾದ ಮುಖಪುಟದಲ್ಲಿ ಹಲವಾರು ಬಾರಿ ಕಾಣಿಸಿಕೊಂಡ ನಂತರ, ಪ್ರಿಯಾಂಕಾ ನಿಯತಕಾಲಿಕದ ಯುಎಸ್ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾದರು.ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಿಯಾಂಕಾ ಬಾಲಿವುಡ್ ಅನ್ನು ಪ್ರತಿನಿಧಿಸಿದ್ದಾರೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2020 ರಲ್ಲಿ ನಡೆದ ಈ ಉತ್ಸವದ 45 ನೇ ಆವೃತ್ತಿಗೆ ಅವರನ್ನು ವಿಶೇಷವಾಗಿ ಆಹ್ವಾನಿಸಲಾಯಿತು.2016 ರಲ್ಲಿ, ಪ್ರಿಯಾಂಕಾ ಮಕ್ಕಳ ಹಕ್ಕುಗಳ ಜಾಗತಿಕ ಯುನಿಸೆಫ್ ರಾಯಭಾರಿಯಾದರು. ಇದಕ್ಕೂ ಮೊದಲು 10 ವರ್ಷಗಳ ಕಾಲ ಇದೇ ಸಂಸ್ಥೆಗೆ ರಾಷ್ಟ್ರೀಯ ರಾಯಭಾರಿಯೂ ಆಗಿದ್ದರು.

Follow Us:
Download App:
  • android
  • ios