ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋದ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರ ವಿವಾಹವು ಎರಡು ವಿಭಿನ್ನ ಸಮಾರಂಭಗಳನ್ನು ಒಳಗೊಂಡಿತ್ತು. ಒಂದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ವಿವಾಹ ಮತ್ತು ಒಂದು ಹಿಂದೂ ಸಂಪ್ರದಾಯದ ಮದುವೆ.
ಹಳೆಯ ವಿಡಿಯೋ ವೈರಲ್!
ಬಾಲಿವುಡ್‌ನಲ್ಲಿ ಮಿಂಚಿ ಸದ್ಯ ಹಾಲಿವುಡ್‌ನಲ್ಲೂ ನಟಿಸುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆ ಯಾರಿಗೂ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಮಿಸ್ ಇಂಡಿಯಾ ಆಗಿ, ಮಿಸ್ ವರ್ಲ್ಡ್ ಆಗಿ ಮಿಂಚಿದ್ದ ಪ್ರಿಯಾಂಕಾ ಚೋಪ್ರಾ, ಆ ಬಳಿಕ ನಟಿಯಾಗಿ ಬಾಲಿವುಡ್ ಚಿತ್ರರಂಗವನ್ನು ಆಳಿದವರು. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಸಿನಿಮಾ ಜಗತ್ತಿನ ಅತ್ಯಂತ ಬೇಡಿಕೆಯ ನಾಯಕಿಯರಲ್ಲಿ ಒಬ್ಬರಾಗಿದ್ದರು ಪ್ರಿಯಾಂಕಾ ಚೋಪ್ರಾ.

'ತಮಿಳನ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ
ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಭಾರೀ ಛಾಪು ಮೂಡಿಸಿದ ಈ ನಟಿ, ಈಗ ವಿವಾಹದ ಬಳಿಕ ಹಲವು ವರ್ಷಗಳ ನಂತರ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಪ್ರಾಜೆಕ್ಟ್ ಮಾಡುತ್ತಿದ್ದಾರೆ. 2002ರಲ್ಲಿ ತಮಿಳು ಸಿನಿಮಾ 'ತಮಿಳನ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕಾ ಚೋಪ್ರಾ ಅವರು ಆ ಬಳಿಕ ಬರೋಬ್ಬರಿ ಒಂದು ದಶಕ್ಕೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ್ದರೂ ಕೂಡ ಎಲ್ಲಾ ಬಾಲಿವುಡ್ ಚಿತ್ರಗಳಖನ್ನೇ ಮಾಡಿದ್ದ ನಟಿ. ಆದರೆ, ಈಗ ಅವರು ಎಸ್‌ಎಸ್ ರಾಜಮೌಳಿ ನಿರ್ದೇಶನ, ಪ್ರಭಾಸ್ ಅಭಿನಯದ 'ರಾಜಮೌಳಿ ವಾರಣಾಸಿ' ಸಿನಿಮಾ ಮೂಲಕ ಭಾರತದ, ಅದರಲ್ಲೂ ಸೌತ್ ಸಿನಿಮಾರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

ತಮಿಳು ಸಿನಿಮಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಹಿಂದಿಯಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ನ್ಯಾಷನಲ್, ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ಗಳಲ್ಲಿ ಮಿಂಚಿದ್ದಾರೆ. ಆದರೆ, ಆ ಬಳಿಕ ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿ ಅಮೆರಿಕಾಕ್ಕೆ ಹೋಗಿದ್ದಾರೆ. ಅಲ್ಲಿ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈಗಿನ ಸುದ್ದಿ ಏನೆಂದರೆ, ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ದ ಹಳೇ ಸಂದರ್ಶನವೊಂದರಲ್ಲಿ ಮಾಡಿದ್ದ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. 'ತಾವು ಕೆಲಸ ಮಾಡಿದ ಎಲ್ಲಾ ನಾಯಕರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಮತ್ತು ಅವರು ಬಯಸಿದ ಸಂಬಂಧಕ್ಕಾಗಿ ಕಾಯುತ್ತಿರುವುದಾಗಿ' ಪ್ರಿಯಾಂಕಾ ಚೋಪಾ ಆಗೊಮ್ಮೆ ಹೇಳಿದ್ದರು. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್ ಮದುವೆ!
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಡಿಸೆಂಬರ್ 2018 ರಲ್ಲಿ ರಾಜಸ್ಥಾನದ ಜೋದ್‌ಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು. ಅವರ ವಿವಾಹವು ಎರಡು ವಿಭಿನ್ನ ಸಮಾರಂಭಗಳನ್ನು ಒಳಗೊಂಡಿತ್ತು. ಒಂದು ಪಾಶ್ಚಿಮಾತ್ಯ ಕ್ರಿಶ್ಚಿಯನ್ ವಿವಾಹ ಮತ್ತು ಒಂದು ಹಿಂದೂ ಸಂಪ್ರದಾಯದ ಮದುವೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ, ಭಾರತ ಹಾಗೂ ವಿಶ್ವದ ಅನೇಕ ಗಣ್ಯರು ಈ ವಿವಾಹದಲ್ಲಿ ಪಾಲ್ಗೊಂಡ ಸುದ್ದಿ ಸಖತ್ ವೈರಲ್ ಆಗಿತ್ತು.
'ವಾರಾಣಸಿ' ಚಿತ್ರದಲ್ಲಿ ನಟಿಸಿದ ಪ್ರಿಯಾಂಕಾ ಚೋಪ್ರಾ
ಸದ್ಯಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನ, ಮಹೇಶ್ ಬಾಬು ನಟನೆಯ 'ವಾರಣಾಸಿ' ಚಿತ್ರದಲ್ಲಿ ನಟಿಸಿ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹೈದ್ರಾಬಾದ್‌ನಲ್ಲಿ ನಡೆದ ಟೈಟಲ್ ಲಾಂಚ್ ಈವೆಂಟ್‌ನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು 'ಲೆಹಂಗಾ ಚೋಲಿ'ಯಲ್ಲಿ ಸಖತ್ ಮಿಂಚಿದ್ದಾರೆ. ಈ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದ್ದು, ರಿಲೀಸ್ ಬಳಿಕ ದಾಖಲೆ ಬರೆಯೋದು ಪಕ್ಕಾ ಎನ್ನಲಾಗುತ್ತಿದೆ.


