ಲಾಸ್ ಏಂಜಲಿಸ್ ಬೀಚ್ನಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ ಪ್ರಿಯಾಂಕಾ-ನಿಕ್: ಫೋಟೋಗಳು ವೈರಲ್
ಲಾಸ್ ಏಂಜಲಿಸ್ ಬೀಚ್ನಲ್ಲಿ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ ದಂಪತಿ. ಇವುಗಳ ಫೋಟೋಗಳು ವೈರಲ್ ಆಗಿವೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ತಮ್ಮ ಪುತ್ರಿ ಮಾಲ್ತಿ ಮೇರಿಯ ಎರಡನೆಯ ಹುಟ್ಟುಹಬ್ಬವನ್ನು ಲಾಸ್ ಏಂಜಲೀಸ್ನ ಬೀಚ್ನಲ್ಲಿ ಆಚರಿಸಿದರು. ಇದೇ 15 ರಂದು ಮಾಲ್ತಿ ಮೇರಿ 2 ನೇ ವರ್ಷಕ್ಕೆ ಕಾಲಿಟ್ಟಿದ್ದು, ಬೀಚ್ನಲ್ಲಿ ದಂಪತಿ ಹುಟ್ಟುಹಬ್ಬವನ್ನು ಆಚರಿಸಿದ್ದು, ಅದರ ಫೋಟೋಗಳು ವೈರಲ್ ಆಗಿವೆ. ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಈಗ ಅಮೆರಿಕ ವಾಸಿ ಎಂಬುದು ಗೊತ್ತೇ ಇದೆ. ಅಲ್ಲಿನ ಪಾಪ್ ಸಿಂಗರ್ ನಿಕ್ ಜೋನಾಸ್ ಅವರನ್ನು ಮದುವೆಯಾದ ಬಳಿಕ ನಟಿ, ಬಾಲಿವುಡ್ ಜಗತ್ತಿನಿಂದ ದೂರವೇ ಉಳಿದಿದ್ದಾರೆ. ಹಾಲಿವುಡ್ ವೆಬ್ ಸಿರೀಸ್ ಮಾಡುತ್ತಾ, ಅಲ್ಲಿ ಹಲವಾರು ಟಿವಿ ಶೋ, ಸಂದರ್ಶನಗಳು ಹಾಗೂ ಸುತ್ತಾಟಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ (Nick Jonas) 2018 ರಲ್ಲಿ ವಿವಾಹವಾದರು. 2022ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಬಾಡಿಗೆ ತಾಯ್ತನದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಿಯಾಂಕಾ ಅವರಿಗೆ ಅಂದದ್ದುಂಟು. ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಬಗ್ಗೆ ಮೌನ ಮುರಿದಿದ್ದಾರೆ. ತಾಯಿಯಾಗಲು ತಾನು ಬಾಡಿಗೆ ತಾಯ್ತನವನ್ನು ಏಕೆ ಆಶ್ರಯಿಸಿದೆ ಎಂದು ನಟಿ ಹೇಳಿದ್ದರು. 'ನನಗೂ ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರಲಿಲ್ಲ. ಹಲವಾರು ವೈದ್ಯಕೀಯ ಸಮಸ್ಯೆಗಳು (Medical Problems) ಇದ್ದವು. ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಇಚ್ಛಿಸಿದೆವು. ನಮ್ಮ ಮಗುವಿನ ಬಾಡಿಗೆ ತಾಯಿಯಾಗಲು ಬಯಸುವಾಕೆ ತುಂಬಾ ದಯೆ ಉಳ್ಳವರೂ, ಸುಂದರಿಯೂ, ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ತಮ್ಮ ಗರ್ಭದಲ್ಲಿ ನೋಡಿಕೊಂಡರು' ಎಂದಿದ್ದರು ಪ್ರಿಯಾಂಕಾ.
ಕೈಯಿಂದ ಶೂಸ್ ತೆಗೆದು ದೀಪ ಹಚ್ಚಿದ ವರುಣ್, ಫಾಲೋ ಮಾಡಿದ ಕರಣ್, ಉಫ್ ಜಾಹ್ನವಿ ಮಾಡಿದ್ದೇನು?
ಬಾಡಿಗೆ ತಾಯ್ತನದ ಬಗ್ಗೆ ಇನ್ನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ಬಹುಶಃ ನಾನು ಅನುಭವಿಸಿದ ತೊಂದರೆ, ನೋವು ಯಾರಿಗೂ ತಿಳಿದಿಲ್ಲ. ಆದರೆ ಬಾಡಿಗೆ ತಾಯಿ(Mother)ಯಾದುದಕ್ಕೆ ಸಾಕಷ್ಟು ಮಂದಿ ಸಾಕಷ್ಟು ವಿಧನಾಗಿ ಮಾತನಾಡಿಕೊಂಡರು. ಆದರೆ ನನ್ನ ನೋವನ್ನು ಯಾರೊಂದಿಗೆ ಹಂಚಿಕೊಳ್ಳಲು ನನಗೆ ಇಷ್ಟವಿಲ್ಲ. ನನ್ನ ವೈದ್ಯಕೀಯ ಇತಿಹಾಸವನ್ನು ಹಂಚಿಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದರು. ಇದೇ ವೇಳೆ, ಮಗಳು (Daughter) ಜನಿಸಿದ ಸಂದರ್ಭದಲ್ಲಿ ತಾವು ಅನುಭವಿಸಿದ ನೋವಿನ ಕಥೆಯನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ನಮ್ಮ ಮಗಳು ಸಮಯಕ್ಕೂ ತುಂಬಾ ಮುಂಚೆಯೇ ಜನಿಸಿದಳು. ಅವಳು ಹೊರಗೆ ಬಂದಾಗ ನಾನು ಆಪರೇಷನ್ ರೂಮ್(Operation room)ನಲ್ಲಿದ್ದೆ. ಅವಳು ತುಂಬಾ ಚಿಕ್ಕವಳಿದ್ದಳು, ನನ್ನ ಕೈಗಿಂತ ಚಿಕ್ಕ ಗಾತ್ರದಲ್ಲಿದ್ದಳು. ಅವಳು ಜನಿಸಿದಾಗ ನಿಕ್ ಮತ್ತು ನಾನು ಇಬ್ಬರೂ ಅಲ್ಲಿಯೇ ನಿಂತಿದ್ದೆವು. ಅವಳು ತುಂಬಾ ಚಿಕ್ಕವಳಿದ್ದಳು. ವೈದ್ಯರು ಅವಳನ್ನು ಹೇಗೆ ನೋಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ ನಾವು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆವು' ಎಂದಿದ್ದರು.
ಇನ್ನು, ಈ ಜೋಡಿಯ ಕುರಿತು ಹೇಳುವುದಾದರೆ, ಇವರದ್ದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಈ ಜೋಡಿ ತಮ್ಮ ಧರ್ಮಗಳ ಅನುಸಾರವೇ ಮದುವೆಯಾಗಲು ತೀರ್ಮಾನಿಸಿದ್ದರಂತೆ. ಪ್ರಿಯಾಂಕಾ ಮತ್ತು ನಿಕ್ ಮದುವೆ ಮಾತುಕತೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಲ್ಲಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರಂತೆ. ಅದರಂತೆ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಎಲ್ಲವನ್ನೂ ನೋಡಿ ಅದಕ್ಕೂ ಮೊದಲು ಹಿಂದಿನ ದಿನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
ದೇಶ ಭಕ್ತಿಯ ಸಿನಿಮಾದಲ್ಲಿ ದೀಪಿಕಾ ಬೆತ್ತಲೆ! ಹೃತಿಕ್ ಜೊತೆಗಿನ ಹಸಿಬಿಸಿ ದೃಶ್ಯ ನೋಡಿ ಪತಿ ರಣಬೀರ್ ಹೇಳಿದ್ದೇನು?