ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಒಂದೊಂದು ಆಸ್ತಿಗಳ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಗುಡ್​​ಬೈ ಹೇಳ್ತಾರಾ ಎನ್ನುವ ಗುಮಾನಿ ಶುರುವಾಗಿದೆ. 

 ಸದ್ಯ ಬಾಲಿವುಡ್​ಗೆ ಬೈ ಬೈ ಹೇಳಿರುವ ಪ್ರಿಯಾಂಕಾ ಹಾಲಿವುಡ್​ನಲ್ಲಿ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಸಿಟಾಡೆಲ್​ ವೆಬ್​ ಸೀರಿಸ್​ನ ಮೇಲೆ ನಟಿ ಭಾರಿ ಹೋಪ್ಸ್​ ಇಟ್ಟುಕೊಂಡಿದ್ದರು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಜನರ ಮೆಚ್ಚುಗೆ ಗಳಿಸಲು ವಿಫಲವಾಗಿದೆ. ಪಾಪ್ ಸಿಂಗರ್ ನಿಕ್​ ಜೋನಸ್​ ಅವರನ್ನು ಮದುವೆಯಾಗಿರೋ, ಪ್ರಿಯಾಂಕಾ ಚೋಪ್ರಾ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಮಗಳನ್ನು ಪಡೆದಿದ್ದಾರೆ. ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ, 2000ದಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್​ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಸದ್ಯ ಹಾಲಿವುಡ್​ನಲ್ಲಿ ಬಿಜಿಯಾಗಿದ್ದು, ಮಗಳ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. ಪತಿಯ ಜೊತೆ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಅಲ್ಲಿ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದರು. ಪಾರ್ಟನರ್ ಜೊತೆ ಹೊಂದಾಣಿಕೆ ಆಗದ ಕಾರಣ ಅವರು ಉದ್ಯಮದಿಂದ ಹೊರ ಬಂದರು. 

ಇದರ ನಡುವೆಯೇ ಅವರ ಫ್ಯಾನ್ಸ್​ಗೆ ಬಿಗ್​ ಶಾಕಿಂಗ್​ ಸುದ್ದಿ ಎದುರಾಗಿದೆ. ಅದೇನೆಂದರೆ, ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಗುಡ್​ಬೈ ಹೇಳಲಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ, ಮುಂಬೈನ ಅಂಧೇರಿಯಲ್ಲಿರುವ ಎರಡು ಪೆಂಟ್​ಹೌಸ್​ಗಳನ್ನು ನಿರ್ಮಾಪಕ, ನಿರ್ದೇಶಕ ಅಭಿಷೇಕ್ ಚೌಬೆ ಅವರಿಗೆ ಆರು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನುವ ಸುದ್ದಿಯಾಗಿದೆ. 2,292 ಚದರ ಅಡಿಯ ಈ ಬಂಗಲೆಯನ್ನು ಅವರು ಮಾರಾಟ ಮಾಡಿದ್ದಾರೆ. Zapkey.com ಪ್ರಕಾರ ನಟಿ ಮುಂಬೈನಲ್ಲಿ ಪೆಂಟ್​ಹೌಸ್ ಮಾರಾಟ ಮಾಡಿದ್ದಾಗಿ ತಿಳಿದುಬಂದಿದೆ.

ದೀಪಿಕಾ ನನ್ನ ಸ್ಪರ್ಧಿನೇ ಅಲ್ಲ, ಅವಳೇನಿದ್ರೂ... ಕರೀನಾ ಕಪೂರ್​ ಅಹಂಕಾರದ ಮಾತಿಗೆ ನೆಟ್ಟಿಗರ ಕ್ಲಾಸ್​

ಮುಂಬೈನ ಅಂಧೇರಿಯ ಓಯಿಶ್ವರದ ಲೋಖಂಡ್​ವಾಲಾ ಕಾಂಪ್ಲೆಕ್ಸ್​ನಲ್ಲಿ ನಟಿಗೆ ಎರಡು ಪೆಂಟ್​ಹೌಸ್ ಇತ್ತು. ಮೊದಲನೆಯದ್ದು ಮೇಲಿನ ಫ್ಲೋರ್​ನಲ್ಲಿದ್ದರೆ ಇದು ಸುಮಾರು 860 ಚದರ ಅಡಿ ಇತ್ತು. ಇದನ್ನು 2.25 ಕೋಟಿಗೆ ಮಾರಾಟ ಮಾಡಲಾಗಿದೆ. ಎರಡನೇ ಪೆಂಟ್​ಹೌಸ್ 1,432 ಚದರ ಅಡಿ ಇದ್ದು, ಇದು 3.75 ಕೋಟಿ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಪೆಂಟ್​ಹೌಸ್​ಗಳನ್ನುನ ಖರೀದಿಸಿದವರು ಸುಮಾರು 36 ಲಕ್ಷದ ಸ್ಟಾಂಪ್ ಡ್ಯೂಟಿ ಕೊಟ್ಟಿದ್ದಾರೆ. ಎರಡೂ ಪೆಂಟ್​ಹೌಸ್​ಗಳೂ ಅಕ್ಟೋಬರ್ 23-25ರಂದು ರಿಜಿಸ್ಟರ್ ಆಗಿವೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ನಟಿ, 2021ರಲ್ಲಿ ನಟಿ ಅಂಧೇರಿಯಲ್ಲಿ ಸೆಕೆಂಡ್​ ಫ್ಲೋರ್ ಆಫೀಸ್ ಪ್ರಾಪರ್ಟಿ ಲೀಸ್​ಗೆ ಕೊಟ್ಟಿದ್ದರು. ಇದು ತಿಂಗಳಿಗೆ 2.11 ಲಕ್ಷ ಆದಾಯದ್ದಾಗಿದೆ. ರಾಜ್​ಕ್ಲಾಸಿಕ್, ವರ್ಸೋವಾ, ಅಂದೇರಿ ವೆಸ್ಟ್​ನಲ್ಲಿ ನಟಿ 2021ರಲ್ಲಿ 7 ಕೋಟಿಯ ಪ್ರಾಪರ್ಟಿ ಮಾರಿದ್ದರು. ಇನ್ನು ಅಭಿಷೇಕ್ ಚೌಬೆ ಅವರ ಕುರಿತು ಹೇಳುವುದಾದರೆ, ಇವರು ಮುಂಬೈನ ಜೋಗೇಶ್ವರಿ ನಿವಾಸಿ. ಚೌಬೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ಸ್ಕ್ರಿಪ್ಟ್ ರೈಟರ್ ಕೂಡಾ ಹೌದು. ಆದರೆ ಈವರೆಗೆ ನಟಿಯಾಗಲೀ, ಅಭಿಷೇಕ್ ಅವರಾಗಲೀ ಯಾವುದೇ ಮಾಹಿತಿ ನೀಡಲಿಲ್ಲ.

ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

ಅಂದಹಾಗೆ 2017ರಲ್ಲಿ, ಹಾಲಿವುಡ್‍ನಲ್ಲಿ ವಿಶ್ವದ ಎರಡನೇ ಅತ್ಯಂತ ಸುಂದರ ಮಹಿಳೆಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು. ಹಾಲಿವುಡ್‌ ನಟಿಯರಾದ ಏಂಜಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೆಕ್‌ ಲೈವ್ಲಿ ಹಾಗೂ ಮಿಶೆಲ್‌ ಒಬಾಮ ಅವರನ್ನು ಹಿಂದಿಕ್ಕಿ ಈ ಸಾಧನೆಗೆ ಪಾತ್ರರಾಗಿದ್ದರು. ಹಿಂದೊಮ್ಮೆ ಕಪ್ಪು ಬಣ್ಣದಿಂದಾಗಿ ಸಾಕಷ್ಟು ಬಾಡಿ ಶೇಮಿಂಗ್​ಗೆ ಒಳಗಾಗಿದ್ದ ಪ್ರಿಯಾಂಕಾ ಈಗ ಇಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ.