ಭಾರತಕ್ಕೆ COVID ಪರಿಹಾರ ಸಹಾಯಕ್ಕಾಗಿ ನಿಧಿಸಂಗ್ರಹವನ್ನು ಪ್ರಾರಂಭಿಸಿದ ಪ್ರಿಯಾಂಕಾ ಚೋಪ್ರಾ 21,94,87,500 ರೂಪಾಯಿ ದೇಣಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾದ ಕಾರಣ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಟಿ ಧನ್ಯವಾದ ತಿಳಿಸಿದ್ದಾರೆ.

ಇಲ್ಲಿಯವರೆಗೆ ಸಂಗ್ರಹಿಸಿದ ನಿಧಿಯಿಂದ ಅವರು 500 ವ್ಯಾಕ್ಸಿನೇಷನ್ ಕೇಂದ್ರಗಳು, 422 ಆಮ್ಲಜನಕ ಸಿಲಿಂಡರ್‌ಗಳು ಮತ್ತು 10 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಮ್ಯಾನ್‌ಪವರ್ ಸಹ ಪಡೆದುಕೊಳ್ಳಲು ಸಾಧ್ಯವಾಯಿತು, ಇದು ಮುಂದಿನ ಎರಡು ತಿಂಗಳಲ್ಲಿ 6000 ಕ್ಕೂ ಹೆಚ್ಚು ಜನರಿಗೆ ಲಸಿಕೆ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹಂಚಿಕೊಂಡಿದ್ದಾರೆ.

ಭಾರತಕ್ಕಾಗಿ ಕೊರೋನಾ ಫಂಡ್ ಕಲೆಕ್ಟ್ ಮಾಡ್ತಿದ್ದಾರೆ ಪ್ರಿಯಾಂಕ: ಪತ್ನಿಗೆ ನಿಕ್ ಸಾಥ್.

ದಾನ ಮಾಡಿದ ಮತ್ತು ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು… ನೀವು ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದೀರಿ ಎಂದು ತಿಳಿಯಿರಿ. ನಿಮ್ಮ ಬೆಂಬಲದೊಂದಿಗೆ ನಾವು ಈಗ ನಮ್ಮ ನಿಧಿಸಂಗ್ರಹವನ್ನು 22ಗೆ ತಲುಪಿಸಿದ್ದೇವೆ ಎಂದಿದ್ದಾರೆ.

ಹಗ್ ಜಾಕ್ಮನ್, ರಿಚರ್ಡ್ ಮ್ಯಾಡೆನ್, ರೀಸ್ ವಿದರ್ಸ್ಪೂನ್ ಮತ್ತು ಇನ್ನಿತರ ಹಾಲಿವುಡ್ ಸೆಲೆಬ್ರಿಟಿಗಳು ಭಾರತಕ್ಕಾಗಿ ಪ್ರಿಯಾಂಕಾ ಅವರ COVID ಪರಿಹಾರ ನಿಧಿಸಂಗ್ರಹವನ್ನು ಹೆಚ್ಚಿಸಲು ತಮ್ಮ ಬೆಂಬಲವನ್ನು ವಿಸ್ತರಿಸಿದ್ದಾರೆ.

ಬಾಲಿವುಡ್ ರಂಗದಲ್ಲಿ ಪ್ರಿಯಾಂಕಾ ಕೊನೆಯ ಬಾರಿಗೆ ಚಿತ್ರ ನಿರ್ಮಾಪಕ ಶೋನಾಲಿ ಬೋಸ್ ಅವರ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಫರ್ಹಾನ್ ಅಖ್ತರ್ ಮತ್ತು ಜೈರಾ ವಾಸಿಮ್ ಜೊತೆ ನಟಿಸಿದ್ದಾರೆ. ಪ್ರಸ್ತುತ ಅವರು ಲಂಡನ್‌ನಲ್ಲಿ ತಮ್ಮ ಹಾಲಿವುಡ್ ಪ್ರಾಜೆಕ್ಟ್ ಚಿತ್ರದ ಚಿತ್ರೀಕರಣದಲ್ಲಿದ್ದರೆ, ಅವರು ತಮ್ಮ ಮುಂದಿನ ಬಾಲಿವುಡ್ ಚಿತ್ರವನ್ನು ಇನ್ನೂ ಎನೌನ್ಸ್ ಮಾಡಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯ ಮುರಿಯೋಣ #ANCares #IndiaFightsCorona...