ಇನ್ಸ್ಟಾದಲ್ಲಿ ಕಂಡಿತು ಪ್ರಿಯಾಂಕಾ ಮಗಳ ಮುದ್ದು ಮೊಗ: ಕಾಲೆಳೆದ ನೆಟ್ಟಿಗರು!
ನಟಿ ಪ್ರಿಯಾಂಕಾ ಚೋಪ್ರಾ ಇದೇಮೊದಲ ಬಾರಿಗೆ ಮಗಳು ಮಾಲ್ತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೇಗಿದೆ ನೋಡಿ ಮಗು?
ಪ್ರಿಯಾಂಕಾ ಚೋಪ್ರಾ ಇದೇ ಮೊದಲ ಬಾರಿಗೆ ತಮ್ಮ ಮಗಳು ಮಾಲ್ತಿ ಮೇರಿಯ ಮುಖವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ದಿನಗಳು ಹೀಗೇ ಇರಲಿ' ಎಂದು ಕೆಂಪು ಹೃದಯದ ಎಮೋಜಿಯೊಂದಿಗೆ ಕ್ಯಾಪ್ಷನ್‌ನಲ್ಲಿ ಪ್ರಿಯಾಂಕಾ ಬರೆದಿದ್ದಾರೆ. ಈ ಹಿಂದೆಯೂ ಪ್ರಿಯಾಂಕಾ ಚೋಪ್ರಾ ಮಗಳ ಮುಖ ಬಹಿರಂಗವಾಗಿದೆ. ಆದರೆ ನಂತರ ಅದನ್ನು ಕೆಲವು ವಿದೇಶಿ ಮಾಧ್ಯಮಗಳು ಹಂಚಿಕೊಂಡಿವೆ. ಆದರೆ ಪ್ರಿಯಾಂಕಾ ಅವರೇ ಮೊದಲ ಬಾರಿಗೆ ತಮ್ಮ ಮುಖವನ್ನು ತೋರಿಸುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಬಾಡಿಗೆ ತಾಯ್ತನದಿಂದಾಗಿ ಅವರು ಸಾಕಷ್ಟು ಟ್ರೋಲ್‌ಗೆ ಕೂಡ ಒಳಗಾಗಿದ್ದರು. ಮಗುವಾದರೆ ಸೌಂದರ್ಯ ಕೆಡುತ್ತೆ, ದೇಹ ಬದಲಾಗುತ್ತೆ ಎಂದು ನಟಿಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುತ್ತಾರೆ ಎಂದು ಹಲವರು ಪ್ರಿಯಾಂಕಾ ಅವರಿಗೆ ಅಂದದ್ದುಂಟು. ಬಹಳ ದಿನಗಳ ನಂತರ ಪ್ರಿಯಾಂಕಾ ಚೋಪ್ರಾ (Priyanka Chopra) ಈ ಬಗ್ಗೆ ಮೌನ ಮುರಿದಿದ್ದು ತಾಯಿಯಾಗಲು ತಾನು ಬಾಡಿಗೆ ತಾಯ್ತನವನ್ನು ಏಕೆ ಆಶ್ರಯಿಸಿದೆ ಎಂದು ನಟಿ ಹೇಳಿಕೊಂಡಿದ್ದರು.
ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Mary Chopra Jonas) ಎಂದು ಹೆಸರು ಇಟ್ಟಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನದ ಕುರಿತು ಮೌನ ಮುರಿದಿದ್ದರು. 'ನನಗೂ ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಇಷ್ಟವಿರಲಿಲ್ಲ. ಆದರೆ ಪರಿಸ್ಥಿತಿ ನಮ್ಮ ಕೈಯಲ್ಲಿ ಇರಲಿಲ್ಲ. ಹಲವಾರು ವೈದ್ಯಕೀಯ ಸಮಸ್ಯೆಗಳು (Medical Problems) ಇದ್ದವು. ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಇಚ್ಛಿಸಿದೆವು. ನಮ್ಮ ಮಗುವಿನ ಬಾಡಿಗೆ ತಾಯಿಯಾಗಲು ಬಯಸುವಾಕೆ ತುಂಬಾ ದಯೆ ಉಳ್ಳವರೂ, ಸುಂದರಿಯೂ, ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ತಮ್ಮ ಗರ್ಭದಲ್ಲಿ ನೋಡಿಕೊಂಡರು' ಎಂದಿದ್ದರು ಪ್ರಿಯಾಂಕಾ.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!
ಬಾಡಿಗೆ ತಾಯ್ತನದ ಬಗ್ಗೆ ಇನ್ನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ಬಹುಶಃ ನಾನು ಅನುಭವಿಸಿದ ತೊಂದರೆ, ನೋವು ಯಾರಿಗೂ ತಿಳಿದಿಲ್ಲ. ಆದರೆ ಬಾಡಿಗೆ ತಾಯಿ(Mother)ಯಾದುದಕ್ಕೆ ಸಾಕಷ್ಟು ಮಂದಿ ಸಾಕಷ್ಟು ವಿಧನಾಗಿ ಮಾತನಾಡಿಕೊಂಡರು. ಆದರೆ ನನ್ನ ನೋವನ್ನು ಯಾರೊಂದಿಗೆ ಹಂಚಿಕೊಳ್ಳಲು ನನಗೆ ಇಷ್ಟವಿಲ್ಲ. ನನ್ನ ವೈದ್ಯಕೀಯ ಇತಿಹಾಸವನ್ನು ಹಂಚಿಕೊಳ್ಳಲು ನಾನು ಬಯಸುವುದಿಲ್ಲ ಎಂದಿದ್ದರು. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಗುವಿನ ಜೊತೆ ಹೋಗಿದ್ದಾಗ ಮಗಳ ಮುಖ ರಿವೀಲ್ ಆಗಿತ್ತು. ಆದರೆ ಈಗ ಅಧಿಕೃತವಾಗಿ ಮಗಳ ಜೊತೆಗಿನ ಫೋಟೋವನ್ನು ಪ್ರಿಯಾಂಕಾ ಇದೇ ಮೊದಲ ಬಾರಿಗೆ ಶೇರ್ ಮಾಡಿದ್ದಾರೆ. ಹಿಂದೆಲ್ಲಾ ಶೇರ್ ಮಾಡಿದ್ದಾಗ ಮಗುವಿನ ಮುಖವನ್ನು ಮರೆಮಾಚುತ್ತಿದ್ದರು. ಇದೀಗ ಮಗಳ ಮುಖ ತೋರಿಸಿದ್ದಾರೆ.
ಪ್ರಿಯಾಂಕಾ ಅವರ ಚಿತ್ರಗಳನ್ನು ನೋಡಿದ ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಅವರ ಮಗಳ ಮೇಲೆ ಪ್ರೀತಿ ಮತ್ತು ಆಶೀರ್ವಾದವನ್ನು ಸುರಿಸುತ್ತಿದ್ದಾರೆ. 'ಮಗಳು ತುಂಬಾ ಮುದ್ದಾಗಿದ್ದಾಳೆ ಮತ್ತು ಸುಂದರವಾಗಿದ್ದಾಳೆ. ಅವಳ ಹೆತ್ತವರಂತೆ ಸುಂದರವಾಗಿದ್ದಾಳೆ' ಎಂದು ಕೆಲವರು ಹೇಳಿದರೆ, ಇನ್ನು ಕೆಲ ಅಭಿಮಾನಿಗಳು ಅಪ್ಪನ ಹಾಗೆ ಇದ್ದಾಳೆ ಎಂದೂ ಕೆಲವರು ಅಮ್ಮನ ಹಾಗೆ ಇದ್ದಾಳೆ ಎಂದೂ ತಮ್ಮೊಳಗೆ ಚರ್ಚೆ ಶುರುಮಾಡಿದ್ದಾರೆ. ಆದರೆ ಇದೇ ವೇಳೆ ಮಗುವನ್ನು ನೋಡಿ ಪ್ರಿಯಾಂಕಾ ಅವರನ್ನು ಟ್ರೋಲ್ (Troll) ಕೂಡ ಮಾಡಲಾಗುತ್ತಿದೆ. 'ದೇಸಿ ಹುಡುಗಿ ಮತ್ತು ಆಮದು ಮಾಡಿಕೊಂಡ ಮಗು' ಎಂದು ಕೆಲವರು ಟೀಕೆ ಮಾಡಿದ್ದರೆ, ಮಗಳು ಆಮದು ಮಾಡಿಕೊಂಡಿದ್ದಲ್ಲ, ಅಪ್ಪನನ್ನು ಮಾಡಿಕೊಂಡಿದ್ದು ಎಂದು ಕೆಲವರು ಪ್ರಿಯಾಂಕಾ ಅವರ ಕಾಲೆಳೆದಿದ್ದಾರೆ.
ನಾವಿಬ್ರೂ ಏನಾದ್ರೂ ಮಾಡ್ಕೋತೀವಿ, ನಿಮಗ್ಯಾಕೆ? ನರೇಶ್ ಕಿಡಿ: ಪೊಲೀಸರಿಗೆ ದೂರು