Asianet Suvarna News Asianet Suvarna News

ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ಪ್ರಿಯಾಂಕಾ; ಮಗು ತುಟಿಗೆ ನೆಟ್ಟಿಗರ ರಿಯಾಕ್ಷನ್ ಹೀಗಿದೆ

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಮಗಳು ಮಾಲ್ತಿ ಮೇರಿ ಜೋಸನ್ ಫೋಟೋ ಹಂಚಿಕೊಂಡಿದ್ದಾರೆ. 

Priyanka Chopra finally reveals daughter Malti Marie face sgk
Author
First Published Nov 23, 2022, 12:39 PM IST

ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನಲೆಸಿದ್ದಾರೆ. ಅಮೆರಿಕಾದ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಅಲ್ಲೇ ನೆಲೆಸಿದ್ದಾರೆ. ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಪ್ರಿಯಾಂಕಾ ದಂಪತಿ ಈ ವರ್ಷದ ಆರಂಭದಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದ ಪ್ರಿಯಾಂಕಾ - ನಿಕ್ ದಂಪತಿ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಇದುವೆರೂ ಪ್ರಿಯಾಂಕಾ ದಂಪತಿ ಮಗಳ ಮುಖ ರಿವೀಲ್ ಮಾಡಿಲ್ಲ. ಅನೇಕ ಬಾರಿ ಮಗಳ ಜೊತೆಗಿನ ಫೋಟೋ ಹಂಚಿಕೊಂಡಿದ್ದರೂ ಸಹ ಮುಖ ತೋರಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರಿಯಾಂಕಾ ಮಗಳ ಮುಖ ಹಂಚಿಕೊಂಡಿದ್ದಾರೆ. 

ಮಗಳು ಮಾಲ್ತಿ ಮೇರಿ ಜೋನಸ್ ಚೋಪ್ರಾ ಮಲಗಿರುವ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ್ದಾರೆ. ಮಗಳ ತುಟಿ ಮಾತ್ರ ರಿವೀಲ್ ಮಾಡಿದ್ದು ಕಣ್ಣು ಮತ್ತು ಹಣೆಯನ್ನು ಟೋಪಿಯಿಂದ ಮುಚ್ಚಲಾಗಿದೆ. ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಫೋಟೋ ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದಾರೆ. ಅಂದಹಾಗೆ ಮಾಲ್ತಿ ಮೇರಿ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಅಭಿಮಾನಿಗಳು ಫೋಟೋ ಶೇರ್ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಮಗುವಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅಭಿಮಾಯೋಬ್ಬರು, 'ಕೊನೆಗೂ...ಅತ್ಯಂತ ಸುಂದರವಾದ ಮಗು' ಎಂದು ಹೇಳಿದರು. ಪ್ರಿನ್ಸೆಸ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ, ಮಾಲ್ತಿ ಮೇರಿಗೆ ಲಿಪ್ ಥೇಟ್ ಅಪ್ಪ ನಿಕ್ ಜೋನಸ್ ಹಾಗೆಯೇ ಇದೆ ಎಂದು ಹೇಳಿದ್ದಾರೆ. 

ಎಲ್ಲರ ಪ್ರೀತಿ ಬೆಂಬಲದಿಂದ ಹೋಗುತ್ತಿದ್ದೀನಿ; ಮುಂಬೈನಿಂದ ಹೊರಟ ಪ್ರಿಯಾಂಕಾ ಭಾವುಕ ಪೋಸ್ಟ್

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ 2018 ಡಿಸೆಂಬರ್ ನಲ್ಲಿ ಮದುವೆಯಾದರು. ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಗಾಯಕ ನಿಕ್ ಜೋನಾಸ್ ಅವರೊಂದಿಗೆ ಅದ್ದೂರಿಯಾಗಿ ಹಸೆಮಣೆ ಏರಿದರು. 2022 ಜನವರಿಯಲ್ಲಿ ಪ್ರಿಯಾಂಕಾ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗಳು ಮಾಲ್ತಿ ಮೇರಿಯನ್ನು ಸ್ವಾಗತಿಸಿದರು. 

ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಿದ್ದು ಮೋಸದಿಂದ; 22 ವರ್ಷಗಳ ಬಳಿಕ ಸಹ ಸ್ಪರ್ಧಿಯ ಗಂಭೀರ ಆರೋಪ

ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಿಯಾಂಕಾ ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಮತ್ತು ಸಿಟಾಡೆಲ್ ವೆಬ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಪ್ರಿಯಾಂಕಾ ಫರ್ಹಾನ್ ಅಖ್ತರ್ ನಿರ್ದೇಶನದ ಜೀ ಲೇ ಜರಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಸೆಟ್ಟೇರಲಿದೆ ಎನ್ನಲಾಗಿದೆ. 

Follow Us:
Download App:
  • android
  • ios