Asianet Suvarna News Asianet Suvarna News

ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಿದ್ದು ಮೋಸದಿಂದ; 22 ವರ್ಷಗಳ ಬಳಿಕ ಸಹ ಸ್ಪರ್ಧಿಯ ಗಂಭೀರ ಆರೋಪ

ಪ್ರಿಯಾಂಕಾ  ಚೋಪ್ರಾ ‘ಮಿಸ್​ ವರ್ಲ್ಡ್​ 2000’ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ವಿಸ್ ವರ್ಲ್ಡ್ ನಲ್ಲಿ ಪ್ರಿಯಾಂಕಾ ಸಹ ಸ್ಪರ್ಧಿಯಾಗಿದ್ದ​ ಬಾರ್ಬೆಡೋಸ್​ ಲೆಲಾನಿ ಮೆಕೊನಿ ಆರೋಪ ಮಾಡಿದ್ದಾರೆ.

Priyanka Chopra Miss World 2000 win rigged claims Former  Miss Barbados Leilani McConney
Author
First Published Nov 4, 2022, 12:40 PM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಮೂರು ವರ್ಷಗಳ ಬಳಿಕ ಭಾರತಕ್ಕೆ ಮರಳಿರುವ  ಪ್ರಿಯಾಂಕಾ ಸದ್ಯ ಮುಂಬೈ ನಗರವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಪ್ರಿಯಾಂಕಾ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪ್ರಿಯಾಂಕಾ 2000ರಲ್ಲಿ ಮಿಸ್​ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡಿದ್ದರು. ಕಿರೀಟ ಗೆದ್ದ ಬಳಿಕ ಬದುಕು ಬದಲಾಯಿತು. ಹಲವು ಸಿನಿಮಾ ಮಾಡಿ ಸೈ ಎನಿಸಿಕೊಂಡರು. ವಿಶ್ವ ಸುಂದರಿ ಪಟ್ಟ ಗೆದ್ದು 22 ವರ್ಷಗಳೇ ಕಳೆದಿದೆ. ಇದಾಗ 2000ನೇ ಇಸವಿಯ ವಿಶ್ವ ಸುಂದರಿ ಸ್ಪರ್ಧಿ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾಂಕಾ  ಚೋಪ್ರಾ ‘ಮಿಸ್​ ವರ್ಲ್ಡ್​ 2000’ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ವಿಸ್ ವರ್ಲ್ಡ್ ನಲ್ಲಿ ಪ್ರಿಯಾಂಕಾ ಸಹ ಸ್ಪರ್ಧಿಯಾಗಿದ್ದ​ ಬಾರ್ಬೆಡೋಸ್​ ಲೆಲಾನಿ ಮೆಕೊನಿ ಆರೋಪ ಮಾಡಿದ್ದಾರೆ.

‘ಮಿಸ್​ ಯುಎಸ್​ಎ 2022’ ಸ್ಪರ್ಧೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಲೆಲಾನಿ ಮೆಕೊನಿ ಅವರು ತನ್ನ ಯೂಟ್ಯೂಬ್ ವಾಹಿನಯಲ್ಲಿ ಮಾತನಾಡಿದ್ದು 2000ನೇ ಇಸವಿಯ ‘ಮಿಸ್​ ವರ್ಲ್ಡ್​’ ಸ್ಪರ್ಧೆಯ ಬಗ್ಗೆಯೂ ಟೀಕೆ ಮಾಡಿದ್ದಾರೆ. ಆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಲೆಲಾನಿ ಮೆಕೊನಿ ಕೂಡ ಭಾಗವಹಿಸಿದ್ದರು. ಆದರೆ ಪ್ರಿಯಾಂಕಾ ಚೋಪ್ರಾ ಅವರು ಆ ವರ್ಷ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ಹೇಳಿದ್ದಾರೆ. 

ಹೇಗೆ ಮೋಸ ನಡೆದಿದೆ, ಪ್ರಿಯಾಂಕಾ ಪರ ಹೇಗಿತ್ತು ಎನ್ನುವ ಬಗ್ಗೆ ಲೆಲಾನಿ ಮೆಕೊನಿ ಅವರು ಕೆಲವು ಕಾರಣಗಳನ್ನು ಕೂಡ ನೀಡಿದ್ದಾರೆ. ಅವರ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ಗೌನ್​ಗಳನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿತ್ತು. ಅವರಿಗೆ ವಿಶೇಷ ಸೌಕರ್ಯಗಳನ್ನು ನೀಡಲಾಗಿತ್ತು. ಪತ್ರಿಕೆಯಲ್ಲಿ ಪ್ರಿಯಾಂಕಾ ಫೋಟೋಗಳು ದೊಡ್ಡದಾಗಿ ಬಿತ್ತರ ಆಗಿದ್ದವು. ಇನ್ನುಳಿದ ಸ್ಪರ್ಧಿಗಳ ಗ್ರೂಪ್​ ಫೋಟೋ ಹಾಕಲಾಗಿತ್ತು. ಅಲ್ಲದೇ, ಆ ವರ್ಷದ ಮಿಸ್​ ವರ್ಲ್ಡ್​ ಪ್ರಯೋಜಕರು ಭಾರತದವರೇ ಆಗಿದ್ದರು ಎಂದು ಲೆಲಾನಿ ಮೆಕೊನಿ ಆರೋಪ ಮಾಡಿದ್ದಾರೆ. 

3 ವರ್ಷದ ಬಳಿಕ ಮುಂಬೈಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ; ತವರಿಗೆ ಮರಳಿದ ಸಂತಸದ ಕ್ಷಣ ಹೀಗಿತ್ತು

ಲೆಲಾನಿ ಮೆಕೊನಿ ಆರೋಪಕ್ಕೆ ನೆಟ್ಟಿಗರು ಹಲವು ರೀತಿಯ ಕಾಮೆಂಟ್​ ಮಾಡುತ್ತಿದ್ದಾರೆ. ಲೆಲಾನಿ ಮೆಕೊನಿ ಮಾಡಿದ ಆರೋಪಗಳಿಗೆ ಪ್ರಿಯಾಂಕಾ ಚೋಪ್ರಾ ಅವರು ಪ್ರತಿಕ್ರಿಯೆ ನೀಡುತ್ತಾರಾ ಕಾದು ನೋಡಿಬೇಕಿದೆ. ಪ್ರಿಯಾಂಕಾ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡು ಬರೋಬ್ಬರಿ 22 ವರ್ಷಗಳೇ ಕಳೆದಿವೆ. ಆದರೀಗ ಕೇಳಿಬಂದಿರುವ ಆರೋಪಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಅಂದಹಾಗೆ ಪ್ರಿಯಾಂಕಾ ಸದ್ಯ ಗಂಡ, ಮಗಳು, ಸಿನಿಮಾ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 

ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಾಡೆಲಿಂಗ್‌ ದಿನಗಳ ಸಂಭಾವನೆ ಕೇಳಿದರೆ ಶಾಕ್‌ ಆಗೋದು ಗ್ಯಾರಂಟಿ

ಪ್ರಿಯಾಂಕಾ ಮತ್ತು ನಿಕ್ ಜೋನಸ್ ಈ ವರ್ಷದ ಪ್ರಾರಂಭದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಸ್ವಾಗತಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಪ್ರಿಯಾಂಕಾ ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲೂ ನಿರತರಾಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನೇಕ ಪ್ರಾಜೇಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿ, ಸಿಟಾಡೆಲ್ ಸಿನಿಮಾಗಳ ಶೂಟಿಂಗ್ ಮುಗಿಸಿರುವ ಪ್ರಿಯಾಂಕಾ ರಿಲೀಸ್ ಗೆ ಕಾಯುತ್ತಿದ್ದಾರೆ. 

Follow Us:
Download App:
  • android
  • ios