Asianet Suvarna News Asianet Suvarna News

ಓಂ ಬರೆದೇ ಸ್ಕ್ರಿಪ್ಟ್‌ ಕೆಲಸ ಶುರು ಮಾಡ್ತಾರೆ ಪ್ರಿಯಾಂಕಾ ಚೋಪ್ರಾ, ಇದರ ಹಿಂದಿನ ಭಾವನಾತ್ಮಕ ಕಥೆ ಗೊತ್ತಾ?

ಸದ್ಯ ಹಾಲಿವುಡ್‌ನ ಮೋಸ್ಟ್ ಹ್ಯಾಪನಿಂಗ್‌ ಸ್ಟಾರ್‌ ಆಗಿ ಗುರುತಿಸಿಕೊಂಡಿರೋ ಪ್ರಿಯಾಂಕಾ ಚೋಪ್ರಾ ಇಂದಿಗೂ ಸ್ಕ್ರಿಪ್ಟ್‌ ವರ್ಕ್‌ ಶುರು ಮಾಡೋ ಮೊದಲು ಓಂ ಅಂತ ಬರೆದೇ ಶುರು ಮಾಡ್ತಾರೆ. ಯಾಕೆ ಗೊತ್ತಾ?

 

Priyanka Chopra Embarks on Hollywood Scriptwriting Journey with Om
Author
First Published Jun 27, 2024, 9:38 AM IST

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನಲ್ಲಿ ಬ್ಯುಸಿ ಆಗಿರುವ ನಟಿ (Bollywood Actress Priyanka Chopra busy in Hollywood). ಮೂಲ ನೆಲೆ ಬಾಲಿವುಡ್ಡೇ ಆದ್ರೂ ಇಲ್ಲಿ ಕೆಲಸ ಮಾಡದೇ ಸಾಕಷ್ಟು ವರ್ಷಗಳೇ ಆಗಿ ಹೋಗಿವೆ. ಅಷ್ಟೇ ಅಲ್ಲ, ಅಮೆರಿಕದ ಕಲಾವಿದ ನಿಕ್ ಜೋನಸ್‌ ಕೈ ಹಿಡಿದು ಆ ದೇಶದ ಸೊಸೆ ಆಗಿದ್ದಾರೆ. ಪ್ರಿಯಾಂಕಾಗೆ ಹಾಲಿವುಡ್‌ನಲ್ಲಿ ಅತ್ಯಧಿಕ ಪೇಮೆಂಟ್‌ ಇದೆ. ಹೀಗಾಗಿ ಅವರು ಬಾಲಿವುಡ್‌ನತ್ತ ತಲೆ ಹಾಕಿಯೂ ಮಲಗುತ್ತಿಲ್ಲ. ಇದು ಅವರ ಇಂಡಿಯನ್‌ ಫ್ಯಾನ್ಸ್‌ಗೆ ಬೇಜಾರು ತಂದಿದೆ. ಆದರೆ ಇದೆಲ್ಲ ಹಳೆಯ ವಿಷಯ. ಪ್ರಿಯಾಂಕಾ ಇನ್ನು ಈ ಕಡೆ ಬರೋದಿಲ್ಲ ಅಂತ ಅವರೆಲ್ಲ ಫಿಕ್ಸ್‌ ಆಗಿಯೇ ಯಾವ್ದೋ ಕಾಲ ಆಯ್ತು. ತನಗಿಂತ ಹತ್ತು ವರ್ಷ ಕಿರಿಯವನಾದ ನಿಕ್‌ ಜೋನಸ್‌ ಕೈ ಹಿಡಿದು ಮಗಳು ಮಾಲ್ತಿ ಜೊತೆಗೆ ಸುಖವಾಗಿ ಸಂಸಾರ ಸಾಗಿಸುತ್ತಿರುವ ನಟಿಯ ಒಂದು ವಿಚಾರ ಇತ್ತೀಚೆಗೆ ಸಖತ್ ಚರ್ಚೆಯಾಗಿದೆ. ಅದು ಬೇರೇನೂ ಅಲ್ಲ, ಈ ಹಾಲಿವುಡ್‌ ಕಂ ಬಾಲಿವುಡ್‌ ನಟಿ ಇಂದಿಗೂ ಸ್ಕ್ರಿಪ್ಟ್ ಕೆಲಸ ಆರಂಭಿಸೋ ಮೊದಲು ಅದರ ಆರಂಭದಲ್ಲಿ ಓಂ ಅಂತ ಬರೆದೇ ಕೆಲಸ ಶುರು ಮಾಡ್ತಾರೆ ಅನ್ನೋದು. 

ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ ಅವರನ್ನು ಮದುವೆ ಆಗಿದ್ದಾರೆ. ಅಮೆರಿಕದವರೇ ಆದಂತೆ ಕಾಣುತ್ತದೆ. ಆದರೆ ತನ್ನ ದೇಶದ ಆಚರಣೆಗಳನ್ನು ನಿಲ್ಲಿಸಿಲ್ಲ. ತನ್ನ ಮಗಳಿಗೂ ಭಾರತೀಯ ಹೆಸರನ್ನೇ ಇಟ್ಟಿದ್ದಾರೆ. ಸದ್ಯ ಅಮೆರಿಕದಲ್ಲಿ ಸೆಟ್ಲ್ ಆಗಿರುವ ಅವರು ಈಗ ಹೊಸ ಸಿನಿಮಾದ ಕೆಲಸ ಶುರು ಮಾಡಿದ್ದಾರೆ. ಆ ಚಿತ್ರದ ಸ್ಕ್ರಿಪ್ಟ್ ಮೇಲೆ ‘ಓಂ’ ಎಂದು ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. 

 ಈಗ ಪ್ರಿಯಾಂಕಾ ಚೋಪ್ರಾ ಅವರು ಹೊಸ ಸಿನಿಮಾದ ಕೆಲಸ ಆರಂಭಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟನೆಯ ಹೊಸ ಸಿನಿಮಾ ‘ದ ಬ್ಲಫ್’ ಚಿತ್ರೀಕರಣ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ದಿ ಸಿಟಾಡೆಲ್’ ವೆಬ್ ಸಿರೀಸ್ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಎರಡನೇ ಬಾರಿಗೆ ಅಮೇಜಾನ್ ಪ್ರೈಂ ವಿಡಿಯೋ ಜೊತೆ ಕೈ ಜೋಡಿಸಿದ್ದಾರೆ. ‘ದ ಬ್ಲಫ್’ ಸಿನಿಮಾದಲ್ಲಿ ರೆಟ್ರೋ ಕಾಲದ ಕಹಾನಿ ಇರಲಿದೆ.  

 

ಅಂಗಾಲಿಗೆ ಬೆಳ್ಳುಳ್ಳಿ ತಿಕ್ಕೋ ವಿಡಿಯೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ; ಇದ್ಕೇ ಹೇಳೋದು 'ಪೀಸೀ ತುಂಬಾ ದೇಸಿ'

ಇದರ ನಡುವೆಯೇ ಅವರು ತನ್ನ ಹೊಸ ಸಿನಿಮಾದ ಸ್ಕ್ರಿಪ್ಟ್‌ನ (Movie Script) ಮೊದಲ ಪುಟದ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ, ಸ್ಕ್ರಿಪ್ಟ್ನ ಆರಂಭದಲ್ಲಿ ಅವರು ಓಂ ಎಂದು ಬರೆದಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರದ್ದು ಅಂತರ್ ಧರ್ಮೀಯ ವಿವಾಹ. ಹಾಗಿದ್ದರೂ ಕೂಡ ಪ್ರಿಯಾಂಕಾ ಚೋಪ್ರಾ ಅವರು ಹಿಂದೂ ಧರ್ಮದ ಆಚರಣೆಗಳನ್ನು ನಿಲ್ಲಿಸಿಲ್ಲ. ಪ್ರತಿ ವರ್ಷ ಅವರು ಹೋಳಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳನ್ನು ಆಚರಿಸುತ್ತಾರೆ. ಆ ಕಾರಣದಿಂದ ಭಾರತದಲ್ಲಿನ ಅಭಿಮಾನಿಗಳಿಗೆ ಅವರು ಇಷ್ಟ ಆಗುತ್ತಾರೆ.

ಅಂದಹಾಗೆ ಪ್ರಿಯಾಂಕಾಗೆ ತನ್ನ ತಂದೆ ಬಗ್ಗೆ ಅಪಾರ ಪ್ರೀತಿ. ಇತ್ತೀಚೆಗೆ ಅವರು ಬಹಳ ಎಮೋಶನಲ್‌ ಆಗಿ ಅಪ್ಪನ ಬಗ್ಗೆ ಬರೆದುಕೊಂಡಿದ್ದರು. ಅವರಿಗೆ ಅಕ್ಷರ ಕಲಿಕೆಯ ಆರಂಭದಿಂದಲೂ ಈ ರೀತಿ ಓಂ ಅಂತ ಬರೆದು ಬರಹ ಮುಂದುವರಿಸಲು ಕಲಿಸಿದ್ದು ಅಪ್ಪ. ಅದು ಯಾವ ಮಟ್ಟಿಗೆ ಅವರಲ್ಲಿ ಬೇರೂರಿ ಬಿಟ್ಟಿದೆ ಅಂದರೆ ದೇಶ ಬಿಟ್ಟು ಬೇರೆ ದೇಶದಲ್ಲಿ ನೆಲೆಸಿದರೂ ಅನ್ಯ ದೇಶದವರನ್ನು ಕಟ್ಟಿಕೊಂಡರೂ ತನ್ನ ದೇಶದ್ದಲ್ಲದ ಭಾಷೆಯ ಸಿನಿಮಾಗಳಲ್ಲಿ ತೊಡಗಿಸಿಕೊಂಡರೂ ಅವರು 'ಓಂ' ಅಂತ ಬರೆಯದೇ ಸ್ಕ್ರಿಪ್ಟ್‌ ಕೆಲಸ ಶುರು ಮಾಡುವುದಿಲ್ಲ. ಅವರ ಈ ಮನಸ್ಥಿತಿ ಅವರ ಭಾರತೀಯ ಫ್ಯಾನ್ಸ್‌ಗಳಿಗೂ ಭಾರೀ ಇಷ್ಟವಾಗಿಬಿಟ್ಟಿದೆ. 

ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!

Latest Videos
Follow Us:
Download App:
  • android
  • ios