ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಲಂಡನ್‌ನಲ್ಲಿ ಪತಿಯ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ದಿ ವೈಟ್ ಟೈಗರ್ ನಟಿ ತನ್ನ ಜೀವನದ ಪ್ರತಿ ನಿಮಿಷವನ್ನು ಆನಂದಿಸುತ್ತಿದ್ದಾರೆ.

ನಟಿ, ರೂಪದರ್ಶಿ, ಉದ್ಯಮಿ, ರೆಸ್ಟೋರೆಂಟ್ ಮಾಲಕಿ ಮತ್ತು ಅನ್‌ಫಿನಿಶ್ಡ್ ಲೇಖಕಿ ಪ್ರಸ್ತುತ ಪತಿ ನಿಕ್ ಜೊನಸ್ ಅವರೊಂದಿಗೆ ಲಂಡನ್‌ನಲ್ಲಿದ್ದಾರೆ. ದಂಪತಿ ತಮ್ಮ ಸುಂದರವಾದ ಮತ್ತು ವಿಶಾಲವಾದ ಮನೆಯಲ್ಲಿ ಮೂರು ಸಾಕುಪ್ರಾಣಿಗಳಾದ ಡಯಾನಾ, ಗಿನೋ ಮತ್ತು ಪಾಂಡಾಗಳೊಂದಿಗೆ ಫ್ರೀ ಟೈಂ ಎಂಜಾಯ್ ಮಾಡುತ್ತಿದ್ದಾರೆ.

ಪಿಗ್ಗಿಯ ಈ ಸಮ್ಮರ್ ಡ್ರೆಸ್ ಬೆಲೆಗೆ ಒಂದಲ್ಲ, 4 ಗೇಮಿಂಗ್ ಲ್ಯಾಪ್‌ಟಾಪ್ ಬರ್ತಿತ್ತು..!

ಕ್ವಾಂಟಿಕೊ ನಟಿ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮದೊಂದು ಫೋಟೋ ಶೇರ್ ಮಾಡಿದ್ದಾರೆ. ಹಸಿರು ಮಂಚದ ಮೇಲೆ ಮಲಗಿದ್ದರು ಪಿಗ್ಗಿ. ಎಂದಿನಂತೆ, ಪ್ರಿಯಾಂಕಾ ಕನಿಷ್ಟ ಮೇಕಪ್‌ನಲ್ಲಿ ತನ್ನ ಸ್ವಂತ ಫೋನ್ ಮೂಲಕ ಫೋಟೋ ಕ್ಲಿಕ್ ಮಾಡಿದ್ದಾರೆ.

ನಟಿ ಬೆಳಕಿನಲ್ಲಿ ವಾಸ ಎಂಬ ಕ್ಯಾಪ್ಶನ್ ಕೊಟ್ಟಿದ್ದು ಫೋಟೋ ಆಕರ್ಷಕವಾಗಿ ಮೂಡಿ ಬಂದಿದೆ. ಮರಳು ಬಣ್ಣದ ರಿಬ್ಬಡ್ ಸ್ವೆಟರ್, ಕಿತ್ತಳೆ ಬಣ್ಣದ ಲಿಪ್ಸ್ಟಿಕ್, ಕಿವಿಯಲ್ಲಿ ಸಣ್ಣ ಹೂಪ್ಸ್ ಮತ್ತು ಕುತ್ತಿಗೆಯಲ್ಲಿ ಸೂಕ್ಷ್ಮವಾದ ಶನೆಲ್ ಸರ ಧರಿಸಿದ್ದರು ಪ್ರಿಯಾಂಕಾ.

'ಡ್ಯಾನ್ಸ್ ಕಲಿತು ಸೆಟ್‌ಗೆ ಬನ್ನಿ': ಪ್ರಿಯಾಂಕಾಗೆ ಬೈದ ಕೊರಿಯೋಗ್ರಫರ್

ಕಪ್ಪು, ಬಿಳಿ ಗ್ಲಾಸ್ ಪರ್ಲ್ ಮತ್ತು ಕ್ರಿಸ್ಟಲ್ ಬೀಡ್ಸ್‌ನಿಂದ ಮಾಡಿದ ಸರವಾಗಿತ್ತು ಅದು. ಈ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಈ ಸರದ ಬೆಲೆ ಬರೋಬ್ಬರಿ 1,34,172 ರೂಪಾಯಿ.