Asianet Suvarna News Asianet Suvarna News

ಈ ಸಿನಿಮಾ ಪಯಣಕ್ಕೆ ನಾನು ಕೊಡುಗೆ ನೀಡ್ತೀನಿ; ರಾಜಮೌಳಿ ಜೊತೆ RRR ವೀಕ್ಷಿಸಿ ಪ್ರಿಯಾಂಕಾ ಚೋಪ್ರಾ ಹೇಳಿಕೆ

ರಾಜಮೌಳಿ ಜೊತೆ RRR ವೀಕ್ಷಿಸಿದ ಪ್ರಿಯಾಂಕಾ ಚೋಪ್ರಾ ಈ ಸಿನಿಮಾ ಪಯಣಕ್ಕೆ ನಾನು ಕೊಡುಗೆ ನೀಡ್ತೀನಿ ಎಂದು ಹೇಳಿದ್ದಾರೆ. 

Priyanka Chopra attends RRR screening with SS Rajamouli and MM keeravaani sgk
Author
First Published Jan 18, 2023, 12:50 PM IST

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಅದ್ಭುತ ಕೆಲಸಗಳಿಂದ ಭಾರತೀಯರು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ.  ಜಾಗತಿಕ ಐಕಾರ್ ಆಗಿರುವ ಪ್ರಿಯಾಂಕಾ ಚೋಪ್ರಾ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀ ಭಾರತೀಯರು ಹೆಮ್ಮೆ ಪಡುವಂತೆ ಮತ್ತೊಂದು ಅದ್ಭುತ ಕೆಲಸ ಮಾಡಿದ್ದಾರೆ. ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾವನ್ನು ನೋಡಿ ಹಾಡಿಹೊಗಳಿದ್ದಾರೆ. 

ಆರ್ ಆರ್ ಆರ್ ಸಿನಿಮಾತಂಡ ಸದ್ಯ ಅಮೆರಿಕಾದಲ್ಲಿ ಬೀಡು ಬಿಟ್ಟಿದೆ. ಗೋಲ್ಡನ್ ಗ್ಲೋಬ್ಸ್ ಗೆದ್ದ ಬಳಿಕ ಅನೇಕ ಆರ್ ಆರ್ ಆರ್ ಅನೇಕ ಪ್ರದರ್ಶನಗಳನ್ನು ಕಂಡಿದೆ. ಅಭಿಮಾನಿಗಳ ಹೃದಯ ಗೆದ್ದು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಆರ್ ಆರ್ ಆರ್ ಇದೀಗ ಪ್ರಶಸ್ತಿಗಳ ಭರಾಟೆಯಲ್ಲಿದೆ. ಗೋಲ್ಡನ್ ಗ್ಲೋಬ್ಸ್ ನಲ್ಲಿ ಪ್ರಶಸ್ತಿ ಗೆದ್ದು ಬೀಗಿರುವ ಆರ್ ಆರ್ ಆರ್ ತಂಡ ಇದೀಗ ಆಸ್ಕರ್ ಮೇಲೆ ಕಣ್ಣಿಟ್ಟಿದೆ.  ಈ ನಡುವೆ ಅಮೆರಿಕಾ ವಿಶೇಷ ಸ್ಕ್ರೀನಿಂಗ್‌ನಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಆರ್ ಆರ್ ಆರ್ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಆರ್ ಆರ್ ಆರ್ ತಂಡವನ್ನು ಹೊಗಳಿದ್ದಾರೆ. 

ಸಿನಿಮಾ ನೋಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಮತ್ತು ಸಂಗೀತ ನಿರ್ದೇಶಕ ಕೀರವಾಣಿ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್ ಮಾಡಿದ್ದಾರೆ. 'ಈ ಅದ್ಭುತ ಭಾರತೀಯ ಸಿನಿಮಾದ ಪಯಣಕ್ಕೆ ನಾನು ಕೊಡುಗೆ ನೀಡುತ್ತೇನೆ. ಒಳ್ಳೆಯದಾಗಲಿ ತಂಡಕ್ಕೆ. ಅಭಿನಂದನೆಗಳು ಆರ್ ಆರ್ ಆರ್ ತಂಡಕ್ಕೆ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜೂ.ಎನ್ ಟಿ ಆರ್, ಅಲಿಯಾ ಭಟ್ ಮತ್ತು ಅಜಯ್ ದೇವಗನ್' ಎಂದು ಹೇಳಿದ್ದಾರೆ. 

ರಾಜಮೌಳಿ RRRಗೆ ಜೇಮ್ಸ್ ಕ್ಯಾಮರೂನ್ ಫಿದಾ; ಸಿನಿಮಾ ನೋಡಿ 'ಅವತಾರ್' ನಿರ್ದೇಶಕ ಹೇಳಿದ್ದೇನು?

ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯಾದ ರಾಜಮೌಳಿ 
   
ಇತ್ತೀಚಿಗಷ್ಟೆ ರಾಜಜಮೌಳಿ ಗಾಡ್ ಆಫ್ ಸಿನಿಮಾ ಎಂದು ಕರೆಯಲ್ಪಡುವ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ  ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದರು.  ಸ್ಟೀವನ್ ಸ್ಪೀಲ್‌ಬರ್ಗ್ಜೊತೆಗಿನ ಫೋಟೋ ಶೇರ್ ಮಾಡಿ ದೇವರನ್ನು ಭೇಟಿಯಾದೆ ಎಂದು ಹೇಳಿದ್ದರು. ರಾಜಮೌಳಿ ಅವರ ನೆಚ್ಚಿನ ನಿರ್ದೇಶಕ  ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯ ಬಳಿಕ ಸಂತಸ ವ್ಯಕ್ತಪಡಿಸಿದ್ದರು. 

ಆರ್ ಆರ್ ಆರ್ ಸಿನಿಮಾ ಮೆಚ್ಚಿಕೊಂಡ ಜೇಮ್ಸ್ ಕ್ಯಾಮರೂನ್

ಆರ್ ಆರ್ ಆರ್ ಸಿನಿಮಾ ನೋಡಿ ಜೇಮ್ಸ್ ಕ್ಯಾಮರೂನ್ ಮೆಚ್ಚಿಕೊಂಡಿದ್ದು ಪತ್ನಿ ಜೊತೆ ಮತ್ತೊಮ್ಮೆ ನೋಡುವುದಾಗಿ ಹೇಳಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕ್ಯಾಮರೂನ್ ಜೊತೆಗಿನ ಮಾತುಕತೆಯ ಫೋಟೋಗಳನ್ನು ಶೇರ್ ಮಾಡಿ, 'ದಿ ಗ್ರೇಟ್ ಜೋಮ್ಸ್ ಕ್ಯಾಮರೂನ್ ಆರ್ ಆರ್ ಆರ್ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ನೋಡಿ ತುಂಬಾ ಇಷ್ಟಪಟ್ಟರು. ತಮ್ಮ ಪತ್ನಿ ಸುಜಿಗೆ ಶಿಫಾರಸು ಮಾಡಿದರು ಹಾಗೂ ಮತ್ತೊಮ್ಮೆ ಪತ್ನಿ ಜೊತೆ ಆರ್ ಆರ್ ಆರ್ ವೀಕ್ಷಿಸುವುದಾಗಿ ಹೇಳಿದರು' ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.

ಮೇರಾ ಭಾರತ್ ಮಹಾನ್; ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ರಾಜಮೌಳಿ, ವಿಡಿಯೋ ವೈರಲ್

ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ಆರ್ ಆರ್ ಆರ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಭಾರತಕ್ಕೆ ಹೊತ್ತು ತರುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.    

Follow Us:
Download App:
  • android
  • ios