Asianet Suvarna News

ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ ಭಾರತದ ಕ್ರಶ್ ಪ್ರಿಯಾ ವಾರಿಯರ್!

ಒಂದು ಕಣ್ ಸನ್ನೆ ಮೂಲಕ ನಟಿ ಪ್ರಿಯಾ ವಾರಿಯರ್ ಒಂದೇ ದಿನದಲ್ಲಿ ಭಾರತದ ಕ್ರಶ್ ಆಗಿ ಬದಲಾಗಿದ್ದರು. 2017ರಲ್ಲಿ ಬಿಡುಗಡೆಯಾದ ಚಿತ್ರದ ಟೇಲರ್‌ನಿಂದಲೇ ಪ್ರಿಯಾ ಭಾರತದ ಗಮನ ಸೆಳೆದಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾ ದಿಢೀರ್ ಶಾಕ್ ನೀಡಿದ್ದಾರೆ.

Priya Varrier suddenly shocked her followers by shutting down her Instagram account
Author
Bengaluru, First Published May 16, 2020, 7:51 PM IST
  • Facebook
  • Twitter
  • Whatsapp

ಕೊಚ್ಚಿ(ಮೇ.16):  ನಟಿ ಪ್ರಿಯಾ ವಾರಿಯರ್ ಅಭಿನಯದ ಮಲೆಯಾಳಂ ಚಿತ್ರದ ಪ್ರೋಮೋ ಬಿಡುಗಡೆಯ ಮರುದಿನವೇ ಸ್ಟಾರ್ ಆಗಿ ಬದಲಾಗಿದ್ದರು. ಕಣ್ಣು ಹೊಡೆದು ಭಾರತೀಯರನ್ನು ಬೋಲ್ಡ್ ಮಾಡಿದ್ದರು. ಈ ಮೂಲಕ ಪ್ರಿಯಾ ವಾರಿಯರ್ ಅದ್ದೂರಿಯಾಗಿ ಸಿನಿಮಾ ಜರ್ನಿ ಆರಂಭಗೊಂಡಿತ್ತು. ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್‌ಸ್ಟಾಗ್ರಾಂನಲ್ಲಿ 7.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ನಿರಾಭರಣ ಸುಂದರಿಯಾಗಿ ಪ್ರಿಯಾ ವಾರಿಯರ್, ಹೊಸ ಲುಕ್ ಸೂಪರ್!

ಇದೀಗ ಸುಮಾರು 72 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಿಯಾ ವಾರಿಯರ್ ಇದೀಗ ದಿಢೀರ್ ಆಗಿ ಇನ್ಸ್‌ಸ್ಟಾಗ್ರಾಂ ಖಾತೆ ಡೀಲೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ದೇಶಕ್ಕೆ ಪರಿಚಯವಾಗಿದ್ದ ಪ್ರಿಯಾ ವಾರಿಯರ್ ಇದೀಗ ಸಾಮಾಜಿಕ ಜಾಲತಾಣದ ಖಾತೆಯನ್ನೇ ಡೀಲಿಟ್ ಮಾಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಕಣ್ಸನ್ನೆಗೆಲ್ಲ ಕಂಪ್ಲೆಂಟ್ ದಾಖಲಿಸೋಕಾಗುತ್ತಾ? ಸುಪ್ರೀಂ ಪ್ರಶ್ನೆ

ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಬರುತ್ತಿದ್ದ ವಿಪರೀತ ಕಮೆಂಟ್‌ಗಳಿಗೆ ಪ್ರಿಯಾ ವಾರಿಯರ್ ಬೇಸರಗೊಂಡಿದ್ದರು. ಪ್ರಿಯಾ ವಾರಿಯರ್ ಕಣ್ಸನ್ನೆಗೆ ಸೀಮಿತವಾಗಿದ್ದಾರೆ. ಪ್ರತಿಭೆ ಇಲ್ಲ ಎಂದು ಕಮೆಂಟ್ ಮಾಡಿದ್ದರು. ಆದರೆ ದಿಢೀರ್ ಆಗಿ ಖಾತೆ ಡಿಲೀಟ್ ಮಾಡಿದ್ದಾರೆ. ಈ ಕುರಿತು ಪ್ರಿಯಾ ವಾರಿಯರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2017ರಲ್ಲಿ ಮಲೆಯಾಳಂ ಚಿತ್ರ ಒರು ಅಡಾರ್ ಲವ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಪ್ರಿಯಾ ವಾರಿಯರ್ ಕಣ್ ಸನ್ನೆ ಮಾಡುವ ದೃಶ್ಯ ಭಾರಿ ವೈರಲ್ ಆಗಿತ್ತು. ಈ ಮೂಲಕ ಪ್ರಿಯಾ ವಾರಿಯರ್ ಒಂದು ಪ್ರೋಮೋದಿಂದ ಸ್ಟಾರ್ ಆಗಿ ಬದಲಾಗಿದ್ದರು.
 

Follow Us:
Download App:
  • android
  • ios