ನವದೆಹಲಿ[ಆ.31]  ಪ್ರಿಯಾ ವಾರಿಯರ್ ವಿರುದ್ಧ ಕೇಸು ದಾಖಲಿಸಿದವರನ್ನು  ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಿನಿಮಾವೊಂದರಲ್ಲಿ ಕಣ್ಮಿಟುಕಿಸಿದ್ದ ಪ್ರಿಯಾ ವಾರಿಯರ್ ವಿರುದ್ಧ ದೂರು ದಾಖಲಾಗಿದ್ದು. ಹಾಡಿನ ಸನ್ನಿವೇಶ ಸಮಾಜದಲ್ಲಿ ಶಾಂತಿ ಕದಡುವಂತಿದೆ ಎಂಬ ಆರೋಪವನ್ನು ಮಾಡಲಾಗಿತ್ತು.

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದರ ಹಾಡಿನಲ್ಲಿ ಕಣ್ಮಿಟುಕಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಆಕೆ ಒಂದೇ ದಿನದಲ್ಲಿ ಸೆಲೆಬ್ರಿಟಿ ಆಗಿದ್ದರು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. 18 ವರ್ಷದ ಪ್ರಿಯಾ ವಾರಿಯರ್ ಅವರ 'ಓರು ಅದರ್ ಲವ್' ಎಂಬ ಮಲಯಾಳಿ ಚಿತ್ರದಲ್ಲಿ ಕಾಣಿಸಿಕೊಂಡ ರೀತಿ ಸಮುದಾಯವೊಂದರ ಕೆಂಗಣ್ಣಿಗೆ ಗಿರಿಯಾಗಿತ್ತು.

ಕಣ್ಣು ಹೊಡೆದಿದ್ದನ್ನೇ, ಹಾಡಿನಲ್ಲಿ ಕಾಣಿಸಿಕೊಂಡಿದ್ದನ್ನೋ ಆಧಾರವಾಗಿಟ್ಟುಕೊಂಡು ಎಫ್ ಐ ಆರ್ ದಾಖಲಿಸಲು ಸಾರ್ಧಯವಿಲ್ಲ. ಸುಮ್ಮನೆ ಸಮಯ ವ್ಯರ್ಥ ಮಾಡಲು ಇಂಥ ಪ್ರಕರಣ ದಾಖಲು ಮಾಡಬೇಡಿ ಎಂದು ದೀಪಕ್ ಮಿಶ್ರಾ  ನೇತೃತ್ವದ ಮೂರು ನ್ಯಾಯಮೂರ್ತಿಗಳ ಪೀಠ ತರಾಟೆಗೆ ತೆಗೆದುಕೊಂಡಿದೆ.