Asianet Suvarna News Asianet Suvarna News

Priya Rajvansh: ನಿರ್ದೇಶಕನ ಮಕ್ಕಳಿಂದ ಕೊಲೆಯಾದ ಬಾಲಿವುಡ್​ ನಟಿ, ಸೌಂದರ್ಯದ ಘನಿ!

ಸೌಂದರ್ಯದ ಘನಿಯಂತಿದ್ದ ಬಾಲಿವುಡ್​ ತಾರೆ ಪ್ರಿಯಾ ರಾಜವಂಶ್​ ಪುಣ್ಯತಿಥಿ ಇಂದು. ಸಿನಿಮೀಯ ರೀತಿಯಲ್ಲಿಯೇ ಬದುಕಿ  ಮಕ್ಕಳಿಂದಲೇ ದುರಂತ ಅಂತ್ಯ ಕಂಡ ನಾಯಕಿ ಈಕೆ.
 

Priya Rajvansh death anniversary here is all about actress love affairs and murder mystery
Author
First Published Mar 27, 2023, 5:02 PM IST

60 70ರ ದಶಕದಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಬಾಲಿವುಡ್​ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು ಪ್ರಿಯಾ ರಾಜವಂಶ್​ (Priya Rajvansh). ಅದ್ಭುತ ಸೌಂದರ್ಯದಿಂದ ಮನಸೂರೆಗೊಳ್ಳುತ್ತಿದ್ದ ಈ ತಾರೆ ಈಗ ಮರೆತೇ ಹೋಗಿದ್ದಾರೆ.  1946ರ ಡಿಸೆಂಬರ್​ನಲ್ಲಿ ಹುಟ್ಟಿದ್ದ ಪ್ರಿಯಾ ರಾಜವಂಶ್​ ಅವರ ಪುಣ್ಯತಿಥಿ ಇಂದು. 2000ನೇ ಸಾಲಿನ ಮಾಚ್​ರ್ 27ರಂದು ನಿಧನರಾದ ನಟಿಯ 23ನೇ ಪುಣ್ಯತಿಥಿಯಂದು ಅವರ ಜೀವನದ ಭಯಾನಕ ಘಟನೆಯೊಂದನ್ನು ಇಲ್ಲಿ ತೆರೆದಿಡುತ್ತಿದ್ದೇವೆ. ಚಿತ್ರರಂಗದ ಹಲವು ನಾಯಕ ನಾಯಕಿಯರು ದುರಂತ ಅಂತ್ಯ ಕಂಡಿದ್ದಾರೆ. ಅಂಥದ್ದರಲ್ಲಿ ಒಬ್ಬರು ಪ್ರಿಯಾ. ಮಕ್ಕಳಿಂದಲೇ ಭೀಕರವಾಗಿ ಕೊಲೆಯಾದ ದುರಂತ ನಾಯಕಿ ಈಕೆ! ಇವರ ಬಯೋಪಿಕ್​ ಕೂಡ ತೆರೆಗೆ ಬರುತ್ತಿದ್ದು, ಪ್ರಿಯಾ ರಾಜವಂಶ್ ಅವರ ನಿಗೂಢ ಜೀವನವನ್ನು ತೆರೆಗೆ ತರುತ್ತಿದ್ದಾರೆ ಪ್ರದೀಪ್ ಸರ್ಕಾರ್. ಪ್ರಿಯಾ ಪಾತ್ರಕ್ಕೆ ಜಾಕ್ವಲೀನ್​  ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ವೇರಾ ಸುಂದರ್​ ಸಿಂಗ್​ ಎಂಬುದು ಪ್ರಿಯಾ ರಾಜವಂಶ್ ಅವರ ಮೂಲ ಹೆಸರು. ಬಾಲಿವುಡ್​ನಲ್ಲಿ ಕಾಲಿಟ್ಟ ಮೇಲೆ ಈಕೆಯ ಹೆಸರು ಬದಲಾಯಿತು. 22 ವರ್ಷಗಳವರೆಗೆ ಸಿನಿಮಾದಲ್ಲಿ ಇದ್ದರೂ ಈಕೆ ನಟಿಸಿದ್ದು ಕೇವಲ ಏಳು ಚಿತ್ರಗಳು. ಸೌಂದರ್ಯದ ಘನಿಯಂತಿದ್ದ ಪ್ರಿಯಾ ತಮ್ಮ ನಟನೆಯಿಂದಲೂ ಎಲ್ಲರನ್ನೂ ಮೋಡಿ ಮಾಡಿದ್ದರು. ಇಷ್ಟರ ಹೊರತಾಗಿಯೂ ಈಕೆ ನಟಿಸಿದ್ದು ಕೆಲವೇ ಚಿತ್ರಗಳು ಏಕೆ ಎನ್ನುವುದಕ್ಕೂ ಕಾರಣವಿದೆ. ಕುತೂಹಲದ ವಿಷಯ ಎಂದರೆ, ಪ್ರಿಯಾ ಅವರು ನಟಿಸಿದ್ದು, ನಟ ದೇವ್ ಆನಂದ್ ಅವರ ಅಣ್ಣ ಚೇತನ್ ಆನಂದ್ (Chetan Anand) ನಿರ್ದೇಶನದ ಚಿತ್ರಗಳಲ್ಲಿ ಮಾತ್ರ. ಬೇರೆ  ಯಾವ ನಿರ್ದೇಶಕರ ಚಿತ್ರಗಳಲ್ಲೂ ನಟಿಸಿರಲಿಲ್ಲ. ಈಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಚೇತನ್​ ಅವರು. ಇದೇ ಕಾರಣಕ್ಕೆ ಅವರ ನಿರ್ದೇಶನದ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದರು. ಇದಕ್ಕೆ  ಕಾರಣ ಮಾತ್ರ ಕೊನೆಯವರೆಗೂ ನಿಗೂಢವಾಗಿಯೇ ಉಳಿಯಿತು.

ಮಾಜಿ ಪತ್ನಿ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ನವಾಜುದ್ದೀನ್ ಸಿದ್ದಿಕಿ!

ಚೇತನ್​ ಅವರ  ‘ಹಕೀಕತ್’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದರು ಪ್ರಿಯಾ.  ಪ್ರಿಯಾ ಅವರನ್ನು ಬೇರೆಯವರ ಚಿತ್ರಗಳಲ್ಲಿ ನಟಿಸುವುದಕ್ಕೆ  ಚೇತನ್ ಅವರು ಅನುಮತಿ ಕೊಡಲಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಒಳಗಿನ ನಿಗೂಢ ಮಾತ್ರ ಅವರ ಸಾವಿನ ಜೊತೆಯೇ ಮಣ್ಣಾಗಿ ಹೋಗಿದೆ. ಚೇತನ್​ ಅವರು,  ತಮ್ಮ ಚಿತ್ರಗಳಲ್ಲಿನ ಪ್ರಮುಖ ಸ್ತ್ರೀಪಾತ್ರಗಳನ್ನು ಪ್ರಿಯಾಗೆ ಕೊಡುತ್ತಿದ್ದರು. ಆದರೆ ಇವರಿಬ್ಬರ ನಡುವಿನ ಸಂಬಂಧ ಮಾತ್ರ ಬಿ ಟೌನ್​ನಲ್ಲಿ ಗುಟ್ಟಾಗಿ ಉಳಿದಿರಲಿಲ್ಲ. 60 70ರ ದಶಕದಲ್ಲಿ ಇವರು ಮದುವೆಯಾಗದೇ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರು ಎಂಬ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿಯೇ  ಸುದ್ದಿಯಾಗಿತ್ತು. ಅದಕ್ಕೆ ತಕ್ಕಂತೆಯೇ ಬೇರೆ ಚಿತ್ರಗಳಲ್ಲಿ ನಟಿಸುವ ಅವಕಾಶವಿದ್ದರೂ ಪ್ರಿಯಾ ಅವರು ಹೋಗದೇ ಇರುವುದು ಕೂಡ ಇದೇ ಕಾರಣಕ್ಕೆ ಎಂದು ಸುದ್ದಿಯಾಗಿತ್ತು. ಆದರೆ ಚೇತನ್​ ಅವರು ತಮ್ಮ ಸ್ತ್ರೀಪ್ರಧಾನ ಏಳು ಚಿತ್ರಗಳಲ್ಲಿ ಪ್ರಿಯಾ ಅವರನ್ನು ನಾಯಕಿ (Heroine) ಮಾಡಿದ್ದರು. 

ಅಷ್ಟಕ್ಕೂ ಪ್ರಿಯಾ ಅವರು ಚೇತನ್​ ಅವರ ಕಣ್ಣಿಗೆ ಬಿದ್ದಿರುವ ಹಿಂದೆಯೂ ಕುತೂಹಲದ ಕಥೆಯಿದೆ. ಪ್ರಿಯಾ ರಾಜವಂಶ್ ಅವರು ನಟನೆಯನ್ನು ತುಂಬಾ ಇಷ್ಟಪಡುತ್ತಿದ್ದರು ಮತ್ತು ಅವರು ನಾಟಕಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಹವ್ಯಾಸವನ್ನು ಪೂರೈಸಿಕೊಳ್ಳುತ್ತಿದ್ದರು.  ಒಮ್ಮೆ ಛಾಯಾಗ್ರಾಹಕರೊಬ್ಬರು ಅವರ ಫೋಟೋಗಳನ್ನು ಕ್ಲಿಕ್ಕಿಸಿದರು ಮತ್ತು ಫೋಟೋಗಳನ್ನು ನಿರ್ದೇಶಕ-ನಿರ್ಮಾಪಕ ಚೇತನ್ ಆನಂದ್ ನೋಡಿದರು. ಚೇತನ್ ಆನಂದ್ ಅವರು ಪ್ರಿಯಾ ರಾಜವಂಶ್ ಅವರ ಫೋಟೋಗಳನ್ನು ನೋಡಿದ ನಂತರ ವ್ಯಾಮೋಹಗೊಂಡರು. ಈ ವೇಳೆ ಚೇತನ್,  ಧರ್ಮೇಂದ್ರ (Dharmendra)ಜೊತೆ ಹಕೀಕತ್ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ಹೊಸ ಮುಖದ ಅವಶ್ಯಕತೆ ಇದ್ದು ಪ್ರಿಯಾ ಮೇಲೆ ಹುಡುಕಾಟ ನಡೆಸಿದ್ದರು. ಹಕೀಕತ್ ಚಿತ್ರದ ನಂತರ, ಚೇತನ್ ಆನಂದ್ ಅವರು ಪ್ರಿಯಾ ರಾಜವಂಶ್ ಅವರನ್ನು ಪ್ರೀತಿಸತೊಡಗಿದರು. ಚೇತನ್​ ಅವರಿಗೆ ಅದಾಗಲೇ  ಮದುವೆಯಾಗಿದ್ದರೂ, ಪ್ರಿಯಾ ಜೊತೆ ವಾಸವಾಗಿದ್ದರು. 

Vivian Dsena: ಈ ನಟನ ಮದುವೆನೂ ಸೀಕ್ರೇಟ್​, ಮಗುನೂ ಸೀಕ್ರೇಟ್​, ಅಭಿಮಾನಿಗಳಿಗೆ ಡಬಲ್​ ಶಾಕ್​!

 1997ರಲ್ಲಿ ಚೇತನ್ ಆನಂದ್ ಅವರು ಸಾವನ್ನಪ್ಪಿದ ಬಳಿಕ, ಪ್ರಿಯಾ ಬಾಳಲ್ಲಿ ಬಿರುಗಾಳಿ ಎದುರಾಯಿತು. ಕೆಲವೇ ವರ್ಷಗಳಲ್ಲಿ ಈಕೆ  ನಿಗೂಢವಾಗಿ ಹತ್ಯೆಯಾದರು. ತನಿಖೆಯ ಬಳಿಕ ತಿಳಿದುಬಂದದ್ದು ಚೇತನ್​ ಆನಂದ್​ ಅವರ ಮಕ್ಕಳು  ಆಸ್ತಿ ವಿಚಾರವಾಗಿ ಆಕೆಯನ್ನು ಕೊಲೆ ಮಾಡಿದ್ದರು ಎನ್ನುವುದು!  ಚೇತನ್ ಆನಂದ್ ಜೊತೆ ಪ್ರಿಯಾ ರಾಜವಂಶ್ ಅವರ ಸಂಬಂಧ ಚೇತನ್​ ಅವರ ಪುತ್ರರಿಗೆ ಸಹಿಸಲು ಸಾಧ್ಯವಾಗಿರಲಿಲ್ಲ.  ಆದರೆ, ಮೋಹದ ಪಾಶದಲ್ಲಿ ಬಿದ್ದಿದ್ದ ಚೇತನ್ ಅವರಿಗೆ ಈ ಬಗ್ಗೆ ಗಮನಕ್ಕೆ ಬರಲೇ ಇಲ್ಲ. ಅವರ ಸಾವಿನ ಬಳಿಕ  ಪ್ರಿಯಾ  ಅದೇ ಮನೆಯಲ್ಲಿ ವಾಸಿಸುತ್ತಿದ್ದರು.
 
ನಂತರ ಒಂದು ದಿನ ಪ್ರಿಯಾ ರಾಜವಂಶ್ ಅವರ ಮೃತ ದೇಹವು ಮನೆಯಲ್ಲಿ ಪತ್ತೆಯಾಗಿತ್ತು. ನಂತರ ತಿಳಿದದ್ದೇನೆಂದರೆ,  ಚೇತನ್ ಆನಂದ್ ಅವರು ತಮ್ಮ ಆಸ್ತಿಯನ್ನೆಲ್ಲಾ ಪ್ರಿಯಾಗೆ ನೀಡಿದ್ದರು. ಇದು ಅವರ ಪುತ್ರರಿಗೆ  ಇಷ್ಟವಿರಲಿಲ್ಲ. ಮನೆಯ ಕೆಲಸದಾಳುಗಳ ಜೊತೆ ಸೇರಿ ಪ್ರಿಯಾಳನ್ನು ಪುತ್ರರು ಕೊಲೆ ಮಾಡಿದ್ದರು. ಇದು ಸಾಬೀತಾಗಿದ್ದು, ಈ ಹತ್ಯೆಯ ನಂತರ ಚೇತನ್ ಪುತ್ರರಿಗೆ ಜೀವಾವಧಿ (Life Sentence) ಶಿಕ್ಷೆಯಾಗಿದೆ. ಇವೆಲ್ಲವನ್ನೂ ಒಳಗೊಂಡ ಈ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ. ದೀಪಕ್ ಮುಕುಟ್ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.  

Follow Us:
Download App:
  • android
  • ios