ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣಗಳಲ್ಲಿನ 'ಭಕ್ತ್', 'ಅಂಧಭಕ್ತ್' ಪದಗಳ ಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅವರು, ಇತ್ತೀಚೆಗೆ ಕಾಳ್ಗಿಚ್ಚಿನಿಂದ ತೊಂದರೆ ಅನುಭವಿಸಿದ್ದರು. 2016ರಲ್ಲಿ ಜೀನ್ ಗುಡೆನಫ್ ರನ್ನು ಪ್ರೀತಿಸಿ ಮದುವೆಯಾದ ಬಗ್ಗೆಯೂ ಮಾತನಾಡಿದ್ದಾರೆ. ಜೊತೆಗೆ, ಅವರು 34 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣ ಮತ್ತು ಜೀವನಕ್ಕೆ ಸಹಾಯ ಮಾಡುತ್ತಿದ್ದಾರೆ.

 ಬಾಲಿವುಡ್ ನಟಿ ಮತ್ತು ಉದ್ಯಮಿ ಪ್ರೀತಿ ಜಿಂಟಾ ಕೂಡ ತಮ್ಮ ಮುಕ್ತ ಅಭಿಪ್ರಾಯಗಳು ಮತ್ತು ಹೇಳಿಕೆಗಳಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿರುವ ಭಕ್ತ್​ ಮತ್ತು ಅಂಧ್​ಭಕ್ತ್​ ಶಬ್ದಗಳ ಬಗ್ಗೆ ಕಿಡಿ ಕಾರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರಿಗೆ ಏನಾಗುತ್ತಿದೆ? ಎಲ್ಲರೂ ಯಾಕೆ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಯಾರದ್ದಾದರೂ ಬಗ್ಗೆ ಒಳ್ಳೆಯ ಮಾತನಾಡಿದ್ರೆ ಎಷ್ಟು ಪೇ ಮಾಡಿದ್ದಾರೆ ಕೇಳ್ತಾರೆ, ನಮ್ಮದೇ ಪ್ರಧಾನಿಯನ್ನು ಶ್ಲಾಘಿಸಿದರೆ ಭಕ್ತರು ಎನ್ನುವ ಲೇಬಲ್​ ಕಟ್ಟುತ್ತಾರೆ, ದೇವರು, ಹಿಂದೂ ಧರ್ಮ ಅಥವಾ ಭಾರತೀಯತೆಯ ಬಗ್ಗೆ ಮಾತನಾಡಿದರೆ ಅಂಧ ಭಕ್ತರು ಎನ್ನುತ್ತಾರೆ. ಯಾಕೆ ಹೀಗಾಗುತ್ತಿದೆ ಎಂದು ನಟಿ ಪ್ರಶ್ನಿಸಿದ್ದಾರೆ.

ಅಂದಹಾಗೆ,, ಬಾಲಿವುಡ್​ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ಪ್ರೀತಿ ಜಿಂಟಾ 2016ರಲ್ಲಿ ಅಮೆರಿಕದ ಜೀನ್ ಗುಡೆನಫ್ ಅವರ ಜೊತೆ ಮದುವೆಯಾದರು. ಹಲವು ವರ್ಷ ಡೇಟಿಂಗ್​ನಲ್ಲಿದ್ದ ಈ ಜೋಡಿ, ಯಾರಿಗೂ ಹೇಳದೇ ಮದುವೆಯಾಗಿತ್ತು. ಹೇಳದೇ ಕೇಳದೇ ಅಮೆರಿಕಕ್ಕೆ ಹಾರಿದ್ದರು ನಟಿ. ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ನಟಿ ಪಡೆದುಕೊಂಡಿದ್ದಾರೆ. ಸದ್ಯ ಲಾಸ್​ ಏಂಜಲಿಸ್​ನಲ್ಲಿ ಪತಿ ಮತ್ತು ಮಕ್ಕಳ ಜೊತೆ ನಟಿ ಪ್ರೀತಿ ಜಿಂಟಾ ಲಾಸ್ ಏಂಜಲೀಸ್‌ ನಲ್ಲಿ ನೆಲೆಸಿದ್ದರು. ಅವರು ಇರುವ ಪ್ರದೇಶ ಸುಟ್ಟು ಕರಕಲಾಗಿದೆ. ಈಗ ತಮ್ಮ ಮದುವೆಯ ಬಗ್ಗೆಯೂ ಹೇಳಿರುವ ನಟಿ, ಭಾರತೀಯತೆಯ ಬಗ್ಗೆ ಮಾತನಾಡುವ ನೀನು ಜೀನ್​ನನ್ನು ಯಾಕೆ ಮದ್ವೆಯಾದಿ ಎಂದು ಕೇಳಬೇಡಿ, ನಾನು ಅವನನ್ನು ಪ್ರೀತಿಸಿದ್ದರಿಂದ ಅವನನ್ನು ಮದುವೆಯಾಗಿದ್ದೆ. ಏಕೆಂದರೆ ಗಡಿಯಾಚೆಯೂ ನನಗಾಗಿ ಪ್ರಾಣ ಕೊಡಬಲ್ಲ ಒಬ್ಬ ವ್ಯಕ್ತಿ ಇದ್ದಾನೆ. ಅದು ಅರ್ಥವಾಗಿದ್ದರಿಂದಲೇ ಮದುವೆಯಾದದ್ದು ಎಂದಿದ್ದಾರೆ. 

ಅಗ್ನಿ ದುರಂತದಲ್ಲಿ ನಾನು ಬದುಕಿದ್ದೇ ಪವಾಡ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಭಾವುಕ ನುಡಿ ಕೇಳಿ...

ಇತ್ತೀಚೆಗೆ ಅಮೆರಿಕದ ಹಾಲಿವುಡ್​ನಲ್ಲಿ ನಡೆದ ಭಯಾನಕ ಕಾಳ್ಗಿಚ್ಚಿನಲ್ಲಿ ಪ್ರೀತಿ ಅವರು ವಾಸಿಸುತ್ತಿದ್ದ ಮನೆಯೂ ಭಸ್ಮವಾಗಿದೆ. ಈ ಬಗ್ಗೆಯೂ ಅವರು ಬರೆದುಕೊಂಡಿದ್ದರು. ತಾವು ಈ ಅಗ್ನಿ ದುರಂತದಲ್ಲಿ ಬದುಕಿದ್ದೇ ಪವಾಡ ಎಂದಿದ್ದರು ನಟಿ. ಅಗ್ನಿ ಅನಾಹುತ ನಡೆದಿರುವ ಹಾಲಿವುಡ್​ ಬೆಟ್ಟದಲ್ಲಿ ಮನೆಯನ್ನು ಹೊಂದಿದ್ದುದಾಗಿ ತಿಳಿಸಿದ್ದರು. ಅಗ್ನಿ ಅನಾಹುತದ ಬಳಿಕ ಭಾವುಕ ಪೋಸ್ಟ್ ಮಾಡಿದ್ದ ನಟಿ, ಇಂಥ ಭೀಕರ ದಿನ ಬರುತ್ತೆ ಅಂತ ಕನಸು ಮನಸಿನಲ್ಲಿಯೂ ಯೋಚನೆ ಮಾಡಿಯೇ ಇರಲಿಲ್ಲ. ನನ್ನ ಅಕ್ಕಪಕ್ಕದವರು ಈ ಪರಿಯ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದು ನೆನೆಸಿಕೊಳ್ಳಲೂ ಆಗುವುದಿಲ್ಲ. ಇಂಥ ಅಗ್ನಿ ದುರಂತದಿಂದ ನಾನು ಕೂಡ ಬದುಕಿರುವುದೇ ಪವಾಡ. ಆ ದೇವರೇ ನಮ್ಮನ್ನು ಕಾಪಾಡಿದ್ದಾನೆ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಎನ್ನುವುದೇ ನನ್ನ ಆಶಯ ಎಂದಿದ್ದರು. 

ಪ್ರೀತಿ ಜಿಂಟಾ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಂಸ್ಥೆಯೊಂದನ್ನು ಆರಂಭಿಸಿ ಉತ್ತಮ ಕೆಲಸದ ಕೈ ಜೋಡಿಸಿದ್ದಾರೆ. ಉತ್ತಮ ಕಾರ್ಯಗಳಲ್ಲಿ ಅನೇಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ನಟಿ ಪ್ರೀತಿ ವರ್ಷಗಳ ಹಿಂದೆ 34 ಮಕ್ಕಳನ್ನು ದತ್ತು ಪಡೆದಿದ್ದಾರಂತೆ. ಈ ಮಕ್ಕಳ ಜೀವನ, ಆಹಾರ ಮತ್ತು ಶಿಕ್ಷಣದ ಎಲ್ಲಾ ಅಗತ್ಯಗಳನ್ನು ನಟಿಯೇ ನೋಡಿಕೊಳ್ತಿದ್ದಾರೆ. ಇವರ ಪತಿ ಜೀನ್ ಗುಡೆನಫ್ ಒಬ್ಬ ಉದ್ಯಮಿ. ಪ್ರೀತಿ 2016 ರಲ್ಲಿ ಜೀನ್ ಅವರನ್ನು ವಿವಾಹವಾದರು. ಜೀನ್ ಒಬ್ಬ ಹಣಕಾಸು ಸಲಹೆಗಾರನಾಗಿಯೂ ಕೆಲಸ ಮಾಡುತ್ತಿದ್ದಾರೆ. ಹಣಕಾಸು ಸಲಹಾ ಕಂಪನಿಯನ್ನು ನಡೆಸುತ್ತಿದ್ದಾರೆ.

ಜೊಮೆಟೋ ಬಾಯ್​ ಲೇಟಾದ್ದಕ್ಕೆ ಆರತಿ ಬೆಳಗಿ, ಕುಂಕುಮ ಇಟ್ಟು ಬರಮಾಡಿಕೊಂಡ ಉದ್ಯಮಿ: ವಿಡಿಯೋ ವೈರಲ್​