ಡೆಲಿವರಿ ಏಜೆಂಟರು ವಿಳಂಬ ಮಾಡಿದರೆ ಬೈಗುಳ ಕೇಳುವುದು ಸಾಮಾನ್ಯ. ಆದರೆ ದೆಹಲಿಯ ಸಂಜೀವ್ ತ್ಯಾಗಿ ಎಂಬುವವರು ತಡವಾಗಿ ಬಂದ ಡೆಲಿವರಿ ಬಾಯ್ಗೆ ಆರತಿ ಬೆಳಗಿ ಬರಮಾಡಿಕೊಂಡಿದ್ದಾರೆ. ದೆಹಲಿಯ ಟ್ರಾಫಿಕ್‌ನಿಂದಾಗಿ ಡೆಲಿವರಿ ಬಾಯ್ ಒಂದು ಗಂಟೆ ತಡವಾಗಿ ಬಂದಿದ್ದ. ಸಂಜೀವ್ ಅವರು ಆತನ ಕಷ್ಟವನ್ನು ಅರ್ಥಮಾಡಿಕೊಂಡು ಈ ರೀತಿ ಸತ್ಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡೆಲಿವರಿ ಏಜೆಂಟ್ಗಳು ಸ್ವಲ್ಪವೂ ವಿಳಂಬ ಮಾಡುವಂತಿಲ್ಲ. ಅವರಿಗೆ ಇನ್ನಿಲ್ಲದಂತೆ ಬೈಗುಳಗಳ ಸುರಿಮಳೆಯಾಗುತ್ತದೆ. ಕೆಲವೊಂದು ಕಂಪೆನಿಗಳಂತೂ ಇಂತಿಷ್ಟು ಅವಧಿ ವಿಳಂಬವಾದರೆ, ಉಚಿತ ಡೆಲಿವರಿ ಎಂದೂ ಘೋಷಿಸುತ್ತವೆ. ಇದೇ ಕಾರಣಕ್ಕೆ, ಡೆಲಿವರಿ ಬಾಯ್ಸ್ಗಳ ಪಾಡು ಯಾರಿಗೂ ಬೇಡ. ಎಷ್ಟೇ ಟ್ರಾಫಿಕ್ ಇದ್ದರೂ ಜೀವದ ಹಂಗು ತೊರೆದು ಗಾಡಿ ಓಡಿಸುವ ಸ್ಥಿತಿ ಕೆಲವು ಪ್ರದೇಶಗಳಲ್ಲಿ ಇದೆ. ಇದರ ಹೊರತಾಗಿಯೂ ಸ್ವಲ್ಪವೂ ತಾಳ್ಮೆ ಇಲ್ಲದ ಕೆಲವರಿಂದ ಬಾಯಿಗೆ ಬಂದರೆ ಬೈಸಿಕೊಳ್ಳುವುದೂ ತಪ್ಪುವುದಿಲ್ಲ. ಆದರೆ ಎಷ್ಟೇ ಕೋಪ ಬಂದರೂ ಈ ಹುಡುಗರು ತಮ್ಮ ತಾಳ್ಮೆ ಕಳೆದುಕೊಳ್ಳುವಂತಿಲ್ಲ, ಇಲ್ಲದಿದ್ದರೆ ಕೆಲಸಕ್ಕೆ ಕುತ್ತು.
ಪರಿಸ್ಥಿತಿ ಹೀಗೆ ಇರುವಾಗ, ಒಂದು ಗಂಟೆ ಲೇಟಾಗಿ ಬಂದರೆ ಹೇಗಿರುತ್ತೆ? ಫುಡ್ ಆರ್ಡರ್ ಮಾಡಿದವರು ಕೊತಕೊತ ಕುದ್ದು ಹೋಗುತ್ತಾರೆ ಅಲ್ಲವೆ? ಆ ಡೆಲಿವರಿ ಬಾಯ್ ಮನೆಗೆ ಬರುವುದರೊಳಗೆ ಆತನ ಕೆಲಸದಿಂದಲೂ ತೆಗೆದುಹಾಕುವ ಕೆಲಸವನ್ನು ಕೆಲವರು ಮಾಡುವುದು ಇದೆ. ಕಂಪೆನಿಗೆ ಕಂಪ್ಲೇಂಟ್ ಕೊಟ್ಟು ಇನ್ನಿಲ್ಲದಂತೆ ಆ್ಯಕ್ಷನ್ ತೆಗೆದುಕೊಳ್ಳುವ ಮನಸ್ಸುಗಳಿಗೂ ಕಡಿಮೆಯೇನಿಲ್ಲ. ಆದರೆ ಇಲ್ಲೊಬ್ಬ ಉದ್ಯಮಿ ಮಾತ್ರ ಒಂದು ಗಂಟೆ ಲೇಟಾಗಿ ಬಂದ ಡೆಲಿವರಿ ಬಾಯ್ಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಬರಮಾಡಿಕೊಂಡಿದ್ದಾರೆ. ಇದರ ವಿಡಿಯೋ ಈಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಣ್ಣೀರು ಒರೆಸಲು ಬೇಕಾಗಿದ್ದಾರೆ ಸುಂದರ ಯುವಕರು! ದಿನಕ್ಕೆ 5 ಸಾವಿರ ರೂ: ಇಲ್ಲಿದೆ ಫುಲ್ ಡಿಟೇಲ್ಸ್..
ಕಳೆದ ದಸರಾ ಸಮಯದಲ್ಲಿ ನಡೆದಿರುವ ಘಟನೆ ಇದಾಗಿದೆ. ದೆಹಲಿಯ ಸಂಜೀವ್ ತ್ಯಾಗಿ ಅವರು, ಹಲ್ದಿರಾಮ್‌ನಿಂದ ಚೋಲೆ ಭಟೋರೆಯನ್ನು ಆರ್ಡರ್ ಮಾಡಿದ್ದರು. ಆದರೆ ದೆಹಲಿಯ ಟ್ರಾಫಿಕ್ ಜಾಂನಿಂದಾಗಿ ಡೆಲಿವರಿ ಬಾಯ್ಗೆ ಬರಲು ಸಾಧ್ಯವಾಗಲೇ ಇಲ್ಲ. ಆತ ಸುಮಾರು ಒಂದು ಗಂಟೆ ತಡವಾಗಿ ಬಂದ. ದೆಹಲಿಯಲ್ಲಿ ಅಂದು ಇದ್ದ ಟ್ರಾಫಿಕ್ ಜಾಂ ಅನ್ನು ಅರಿತಿದ್ದ ಸಂಜೀವ್ ಅವರಿಗೆ ಈ ಯುವಕನ ಕಷ್ಟ ಸಹಜವಾಗಿ ಗೊತ್ತಿತ್ತು. ವಿಳಂಬ ಆದರೂ ಅದರಲ್ಲೇನೂ ವಿಶೇಷ ಇಲ್ಲ ಎಂಬ ತಿಳಿವಳಿಕೆ ಇತ್ತು. ಡೆಲಿವರಿ ಬಾಯ್ ಸಮೀಪ ಬಂದಾಗ ಮನೆ ಸಮೀಪ ಇರುವುದಾಗಿ ಹೇಳಿದ್ದ.
ಆದ್ದರಿಂದ ಸಂಜೀವ್ ಅವರು, ಯುವಕ ಬಂದಾಗ ಏನು ಮಾಡಬೇಕು ಎಂದು ಮೊದಲೇ ಯೋಚನೆ ಮಾಡಿಟ್ಟಿದ್ದರು. ಅವನು ಬಂದ ಬಳಿಕ, ದೆಹಲಿಯ ಈ ಭಯಂಕರ ಟ್ರಾಫಿಕ್ ಹೊರತಾಗಿಯೂ ನಿಮ್ಮ ಆರ್ಡರ್ ಪಡೆಯುತ್ತಿದ್ದೇನೆ, ಇದು ಖುಷಿಯ ವಿಷಯ ಎಂದು ಯುವಕನಿಗೆ ಆರತಿ ಬೆಳಗಿದರು. ಯುವಕ ಆರಂಭದಲ್ಲಿ ಕಕ್ಕಾಬಿಕ್ಕಿಯಾದರೂ, ಕೊನೆಗೆ ಹೆಲ್ಮೆಟ್ ತೆಗೆದ. ಆತನಿಗೆ ಟೀಕಾ ಇಟ್ಟು ಆರತಿ ಬೆಳಗಿ ಆರ್ಡರ್ ತೆಗೆದುಕೊಂಡರು ಸಂಜೀವ್ ಅವರು. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದಾರೆ. ಸಂಜೀವ್ ಅವರ ಹಾಸ್ಯಪ್ರಜ್ಞೆ ಜೊತೆಗೆ, ಡೆಲಿವರಿ ಬಾಯ್ ಕಷ್ಟ ಅರಿತ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಹುಶಃ ಯಾರಿಗೂ ಇಂಥ ಐಡಿಯಾ ಬರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.
ಮಗಳ ಮಗುವಿಗೇ ಅಮ್ಮನಾದ ಅಜ್ಜಿ! ಮುಟ್ಟು ನಿಂತರೂ ಗರ್ಭಿಣಿಯಾಗೋ ಸಾಹಸ ಮಾಡಿದ ಈಕೆ ರೋಚಕ ಕಥೆ ಕೇಳಿ
