ಯುವರಾಜ್ ಸಿಂಗ್ ಜೊತೆ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದಿದ್ದ ಪ್ರೀತಿ ಜಿಂಟಾ: ಹೇಳಿದ್ದೇನು?
ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ನಟಿ ಪ್ರೀತಿ ಜಿಂಟಾ ಪ್ರತಿಕ್ರಿಯೆ ನೀಡಿದ್ದರು.

90ರ ದಶಕದ ಖ್ಯಾತ ನಟಿ, ಬಾಲಿವುಡ್ ಸುಂದರಿ ಪ್ರೀತಿ ಜಿಂಟಾ ಮತ್ತೆ ಸುದ್ದಿಯಾಗಿದ್ದಾರೆ. ಡಿಂಪಲ್ ಕ್ವೀನ್ ಎಂದೆ ಖ್ಯಾತಿಗಳಿಸಿರುವ ಪ್ರೀತಿ ಜಿಂಟಾ ಅನೇಕ ಬ್ಲಾಕ್ ಬಸ್ಟರ್‌ಗಳನ್ನು ನೀಡಿದ್ದಾರೆ. ತರೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಪ್ರೀತಿ ಜಿಂಟಾ ಗಂಡ, ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ. ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಆದರೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ತನ್ನ ವೈಯಕ್ತಿಕ ವಿಚಾರವಾಗಿ ಪ್ರೀತಿ ಜಿಂಟಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸಿನಿಮಾ ಜೊತೆಗೆ ಪ್ರೀತಿ ಜಿಂಟಾ ಡೇಟಿಂಗ್ ವಿಚಾರವಾಗಿಯೂ ಹೆಚ್ಚು ಸುದ್ದಿಯಾಗಿದ್ದರು.
ಪ್ರೀತಿ ಜಿಂಟಾ ಸಿನಿಮಾ ಜೊತೆಗೆ ಐಪಿಲ್ ತಂಡದ ಮಾಲಿಕತ್ವ ವಹಿಸಿಕೊಳ್ಳುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದರು. ಐಪಿಎಲ್ ಸಮಯದಲ್ಲಿ ಪ್ರೀತಿ ಜಿಂಟಾ ಕ್ರಿಕೆಟಿಕಗ ಯುವರಾಜ್ ಸಿಂಗ್ ಜೊತೆ ತೀರ ಆಪ್ತರಾಗಿದ್ದರು. ಇಬ್ಬರ ಕ್ಲೋಸ್ ನೆಸ್ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಯುವರಾಜ್ ಸಿಂಗ್ ಮತ್ತು ಪ್ರೀತಿ ಜಿಂಟಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಯುವರಾಜ್ ಸಿಂಗ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಪ್ರೀತಿ ಜಿಂತಾ ಕೊನೆಗೂ ಮೌನ ಮುರಿದ್ದರು.
ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಕಣ್ಣು ಕುಕ್ಕುತ್ತಿತ್ತು. ಬಳಿಕ ಪ್ರೀತಿ ಜಿಂತಾ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದರು. ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ ಮಾತನಾಡಿದ್ದರು. 'ನಾನು ತುಂಬಾ ಖಾಸಗಿ ವ್ಯಕ್ತಿ. ನನ್ನ ಬಗ್ಗೆ ಯಾವುದೇ ಮಾತಿಹಿ ತಿಳಿದುಕೊಳ್ಳದೆ ನನ್ನ ಜೀವನದ ಬಗ್ಗೆ ಮಾತನಾಡುವುದು ಮತ್ತು ಬರೆಯುವುದನ್ನು ನೋಡಿ ನನಗೆ ಅಚ್ಚರಿ ಆಗಿದೆ. ಆದರೆ ಇದು ನನಗೆ ತೊಂದರೆ ಕೊಡುವುದಿಲ್ಲ. ನನ್ನ ಹೃದಯಕ್ಕೆ ತೆಗೆದುಕೊಂಡ ಕೆಲವು ವಿಷಯಗಳಿವೆ. ಯುವರಾಜ್ ಸಿಂಗ್ ಮತ್ತು ಬ್ರೇಟ್ ಲೀ ಜೊತೆ ನನ್ನ ಹೆಸರು ಲಿಂಕ್ ಅಪ್ ಮಾಡಿದಾಗ ನಾನು ಅದನ್ನು ಮರೆಯಲೂ ಸಾದ್ಯವೆ ಇಲ್ಲ. ಅವರು ನನ್ನ ಸಹೋದರರು, ಅವರನ್ನು ಭೇಟಿ ಮಾಡಿ ರಾಖಿ ಕಟ್ಟುತ್ತೇನೆ' ಎಂದು ಹೇಳಿದ್ದರು.
ಪ್ರೀತಿ ಜಿಂಟಾ ಮಕ್ಕಳ ಮೊದಲ ಹುಟ್ಟುಹಬ್ಬ: ಮುದ್ದಾದ ಫೋಟೋ ಶೇರ್ ಮಾಡಿದ ನಟಿ
ಯಾವರಾಜ್ ಸಿಂಗ್ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಅವರು ತನ್ನ ಸಹೋದರರು ಎಂದು ಪ್ರೀತಿ ಜಿಂಟಾ ಹೇಳಿದ್ದ ಹೇಳಿಕೆ ಅಚ್ಚರಿ ಮೂಡಿಸಿತ್ತು. ಯುವರಾಜ್ ಸಿಂಗ್ ಮದುವೆಗೆ ರಾಖಿ ಗಿಫ್ಟ್ ಮಾಡುವುದಾಗಿ ಪ್ರೀತಿ ಹೇಳಿದ್ದರು. 'ನಿಮಗೆ ಅವರ ಮದುವೆ ದಿನಾಂಕ ತಿಳಿದಿದೆಯೇ? ಯಾಕೆಂದರೆ ನಾನು ಅವರಿಗೆ ವಿಶೇಷವಾಗಿ ರಾಖಿ ಉಡುಗೊರೆಯಾಗಿ ನೀಡಬೇಕು. ಮದುವೆಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನಾವು ಉತ್ತಮ ಬಾಂಧವ್ಯವನ್ನು ಹೊಂದಿದ್ದೆವು' ಎಂದು ಹೇಳಿದ್ದಾರೆ.
ಪ್ರೀತಿ ಝಿಂಟಾಗೆ ರಿತೇಶ್ ಕಿಸ್ ಮಾಡುತ್ತಿರುವುದನ್ನು ನೋಡಿ ಲುಕ್ ಕೊಟ್ಟ ಜೆನಿಲಿಯಾ?
ಪ್ರೀತಿ ಜಿಂಟಾ ಮತ್ತು ಯುವಿರಾಜ್ ಸಿಂಗ್ ಇಬ್ಬರೂ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ಸದ್ಯ ಇಬ್ಬರೂ ತಮ್ಮ ತಮ್ಮ ಕುಟುಂಬದ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೂ ಆಗಾಗ ಇವರ ಲವ್ ಸ್ಟೋರಿ, ಡೇಟಿಂಗ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ.