ಸ್ನೇಹಿತೆಯನ್ನೇ ಮದುವೆಯಾಗಿ ಹಲ್​ಚಲ್​ ಸೃಷ್ಟಿಸಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದ ಖ್ಯಾತ ನಟಿ ಪ್ರಾರ್ಥನಾ ಕೃಷ್ಣನ್ ನಾಯರ್ ಅವರು ಇದೀಗ ಆಕೆಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಶೇರ್​ ಮಾಡುವುದಾಗಿ ಹೇಳಿದ್ದಾರೆ. ಏನಿದು? 

ಕೆಲ ದಿನಗಳ ಹಿಂದೆ ಮಲಯಾಳದ ಖ್ಯಾತ ನಟಿ ಪ್ರಾರ್ಥನಾ ಕೃಷ್ಣನ್ ನಾಯರ್ ತಮ್ಮ ಆಪ್ತ ಸ್ನೇಹಿತೆಯಾದ ಮಾಡೆಲ್​ ಅನ್ಸಿಯಾ ಜೊತೆ ಮದುವೆಯಾಗಿರುವುದಾಗಿ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡು ಹಲ್​ಚಲ್​ ಸೃಷ್ಟಿಸಿದ್ದರು. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದ ಪ್ರಾರ್ಥನಾ, ವಿಷಕಾರಕ ಸಂಬಂಧಕ್ಕಿಂತಲೂ ಇಂಥ ಉತ್ತಮ ಸ್ನೇಹಿತೆಯ ಜೊತೆ ಮದುವೆಯಾಗುವುದೇ ಭಾಗ್ಯ ಎಂದು ಕ್ಯಾಪ್ಷನ್​ ನೀಡಿದ್ದರು. ಈ ವಿಡಿಯೋದಲ್ಲಿ ಇವರಿಬ್ಬರೂ ಒಂದೇ ರೀತಿಯ ಸೀರೆ ತೊಟ್ಟಿದ್ದಾರೆ. ಪರಸ್ಪರ ಮಂಗಳಸೂತ್ರವನ್ನು ಕಟ್ಟಿ, ಹಾರವನ್ನು ಬದಲಿಸಿಕೊಂಡಿದ್ದು ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅದರ ಜೊತೆ ಇಬ್ಬರೂ ಸಿಂದೂರವನ್ನೂ ಹಚ್ಚಿಕೊಂಡಿದ್ದಾರೆ.

ಮನಸ್ಸಿನಲ್ಲಿ ವಿಷ ತುಂಬಿದ, ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಎಂದೂ ಅವರು ಬರೆದುಕೊಂಡಿದ್ದರು. ಜೊತೆಗೆ ಅನ್ಸಿಯಾ ಲೆಸ್ಬಿಯನ್.. ಮೈ ಲವ್.. ಡ್ರೀಮ್ ಕಮ್ ಟ್ರೂ ಎಂಬ ಹ್ಯಾಶ್ ಟ್ಯಾಗ್‌ಗಳನ್ನೂ ಶೇರ್​ ಮಾಡಿದ್ದರು. ಕೊನೆಗೆ ಇದಕ್ಕೆ ಕ್ಲಾರಿಫೀಕೇಷ್​ ಕೊಟ್ಟಿದ್ದ ಅವರು ತಾವು ತಮಾಷೆಗಾಗಿ ಹೀಗೆ ಮಾಡಿದ್ದು ಎಂದಿದ್ದರು. ಇದು ಕೇವಲ ಒಂದು ಮೋಜಿನ ಪೋಸ್ಟ್ ಆಗಿತ್ತು ಮತ್ತು ಅದು ನಿಜವಾದ ಮದುವೆ ಅಲ್ಲ ಎಂದಿದ್ದರು. ಇತರ ಉದ್ಯಮಗಳ ನಟಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಟ್ರೆಂಡ್ ಅನ್ನು ನಾವು ಅನುಸರಿಸಿದ್ದೇವೆ. ಆಕೆ ನನ್ನ ಆತ್ಮೀಯ ಸ್ನೇಹಿತೆ. ಆಕೆಗೆ ಮದುವೆಯಾಗಿದೆ. ಒಬ್ಬ ಮಗನೂ ಇದ್ದಾನೆ ಎಂದೂ ಹೇಳಿದ್ದರು. ಆದರೆ ಇದೀಗ ತಾವು ಮದುವೆಯಾದ ಮೇಲೆ ಮೊದಲ ರಾತ್ರಿಯನ್ನು ಮಾಡಿದ್ದು ಅದರ ವಿಡಿಯೋ ಕೂಡ ಶೇರ್​ ಮಾಡುವುದಾಗಿ ಮತ್ತೆ ಪೋಸ್ಟ್​ ಮಾಡಿದ್ದಾರೆ.

ಹೆಣ್ಣು-ಹೆಣ್ಣು ಮದುವೆಯಾಗಿರುವುದಕ್ಕೆ ನಟಿಯನ್ನು ಇನ್ನಿಲ್ಲದಂತೆ ಟ್ರೋಲ್​ ಮಾಡಿದ ಜನರು, ನಟಿ ಇಷ್ಟು ಹೇಳುತ್ತಿದ್ದಂತೆಯೇ ಆ ವಿಡಿಯೋಗಾಗಿ ತಡಕಾಡುತ್ತಿದ್ದಾರೆ. ಇದೀಗ ಗೂಗಲ್​ನಲ್ಲಿ ಟ್ರೆಂಡ್​ ಆಗಿಬಿಟ್ಟಿದೆ. ಅಷ್ಟಕ್ಕೂ ನಟಿಯೇನು ಯಾವುದೇ ವಿಡಿಯೋ ರಿಲೀಸ್​ ಮಾಡಲಿಲ್ಲ. ಬದಲಿಗೆ ವಿಡಿಯೋ ರಿಲೀಸ್​ ಮಾಡುವುದಾಗಿ ಬರೆದಿದ್ದಾರೆ. ವಿಡಿಯೋ ಇಲ್ಲದೇ ಹಲವರು ನಿರಾಸೆಗೆ ಒಳಗಾಗಿದ್ದರೆ, ಮತ್ತೆ ಕೆಲವರು ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾರಾದರೂ ಎಷ್ಟೇ ಸಾಧನೆ ಮಾಡಿದರೂ ಅವರ ಬಗ್ಗೆ ಬೆರಳೆಣಿಕೆ ಜನರಿಗೆ ತಿಳಿಯುವುದೇ ಕಷ್ಟ, ಆದರೆ ಇಂಥ ವಿಷ್ಯಗಳು ಮಾತ್ರ ರಾತ್ರೋರಾತ್ರಿ ದೇಶಾದ್ಯಂತ ಪ್ರಚಾರವಾಗಿಬಿಡುತ್ತದೆ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಮದುವೆ ಪ್ರಚಾರದಲ್ಲಿತ್ತು, ಈಗ ಮೊದಲ ರಾತ್ರಿ ವಿಡಿಯೋಗಾಗಿ ಸರ್ಚ್​ ಶುರುವಾಗಿದೆ!

ಇತ್ತೀಚಿನ ದಿನಗಳಲ್ಲಿ ಗಂಡು ಗಂಡನ್ನು ಮತ್ತು ಹೆಣ್ಣು ಹೆಣ್ಣನ್ನು ಮದುವೆಯಾಗುವುದು ನಡೆದೇ ಇದೆ. ಕೆಲವು ಮದುವೆಗಳು ಅವರ ದೇಹ ಪ್ರಕೃತಿಯಿಂದಾಗಿ ನಡೆದರೆ, ಮತ್ತೆ ಕೆಲವರು ರಾತ್ರೋ ರಾತ್ರಿ ದಿಢೀರ್​ ಫೇಮಸ್​​ ಆಗುವ ಹಿನ್ನೆಲೆಯಲ್ಲಿ ಇಂಥ ಮದುವೆಯಾಗುತ್ತಿದ್ದಾರೆ. ಇದೀಗ ಪ್ರಾರ್ಥನಾ-ಅನ್ಸಿಯಾ ಕಥೆಯೂ ಪ್ರಚಾರಕ್ಕಾಗಿಯೇ ಆಗುತ್ತಿದೆ. ಇನ್ನು ನಟಿ ಪ್ರಾರ್ಥನಾ ಕುರಿತು ಹೇಳುವುದಾದರೆ ಇವರು 'ಕೊಡೆಯಿಡ' ಧಾರಾವಾಹಿಯನ್ನು ಹೊರತು ಪಡಿಸಿದರೆ ರಾಕ್ಕುಯಿಲ್, ಮನಿಮುತ್ತು ಸೇರಿ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. ಇವರು ಮದುವೆಯಾಗಿರುವುದಾಗಿ ಹೇಳಿಕೊಂಡಿರುವ ಸ್ನೇಹಿತೆ ಅನ್ಸಿಯಾ ಕೂಡ ಮಾಡೆಲ್​.

View post on Instagram